ಕೊರೊನಾ ಎಫೆಕ್ಟ್: 'RRR' ಬಿಡುಗಡೆ ಪೋಸ್ಟ್‌ಪೋನ್‌ ಆಯ್ತು; ಹಾಗಾದ್ರೆ, 'ರಾಧೆ ಶ್ಯಾಮ್' ಕಥೆ ಏನು?

ಮತ್ತೆ ಕೊರೊನಾ ಕೇಸ್‌ ಜಾಸ್ತಿ ಆಗುತ್ತಿರುವ ಹಿನ್ನೆಲೆಯಲ್ಲಿ ಆರ್‌ಆರ್‌ಆರ್ ಸಿನಿಮಾ ತಂಡ ತಮ್ಮ ಚಿತ್ರದ ಬಿಡುಗಡೆಯನ್ನು ಮುಂದಕ್ಕೆ ಹಾಕಿದೆ. ಹಾಗಾದರೆ, ಬಿಗ್ ಬಜೆಟ್ ಚಿತ್ರ 'ರಾಧೆ ಶ್ಯಾಮ್' ನಡೆ ಏನು? ಆ ಬಗ್ಗೆ ಇಲ್ಲಿದೆ ಮಾಹಿತಿ.

ಕೊರೊನಾ ಎಫೆಕ್ಟ್: 'RRR' ಬಿಡುಗಡೆ ಪೋಸ್ಟ್‌ಪೋನ್‌ ಆಯ್ತು; ಹಾಗಾದ್ರೆ, 'ರಾಧೆ ಶ್ಯಾಮ್' ಕಥೆ ಏನು?
Linkup
ಬಹುನಿರೀಕ್ಷಿತ '' ಸಿನಿಮಾ ರಿಲೀಸ್ ಡೇಟ್ ಪೋಸ್ಟ್‌ಪೋನ್ ಆಗಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಜನವರಿ 7ರಂದು ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳಿಂದಾಗಿ, ಹೊಸ ಹೊಸ ಮಾರ್ಗಸೂಚಿಗಳಿಂದಾಗಿ ಸಿನಿಮಾ ಬಿಡುಗಡೆಯನ್ನು ಚಿತ್ರತಂಡ ಮುಂದೂಡಿದೆ. ಇದೀಗ ಜನವರಿ 14ರಂದು ರಿಲೀಸ್ ಆಗಬೇಕಿದ್ದ 'ರಾಧೆ ಶ್ಯಾಮ್' ಸಿನಿಮಾ ತಂಡದ ನಡೆ ಮೇಲೆ ಎಲ್ಲರ ಕಣ್ಣಿದೆ. ನಟನೆಯ 'ರಾಧೆ ಶ್ಯಾಮ್' ಕೂಡ ದೊಡ್ಡ ಬಜೆಟ್‌ನ ಸಿನಿಮಾ. ಹಾಗಾಗಿ, ಈ ಸಿನಿಮಾ ಕೂಡ ಪೋಸ್ಟ್‌ ಪೋನ್ ಆಗಲಿದೆಯೇ ಎಂಬ ಪ್ರಶ್ನೆ ಎಲ್ಲರಲ್ಲಿಯೂ ಇತ್ತು. ಆದರೆ, ಚಿತ್ರತಂಡ ಸ್ಪಷ್ಟನೆ ನೀಡಿದೆ. ಜನವರಿ 14ರಂದೇ 'ರಾಧೆ ಶ್ಯಾಮ್' ರಿಲೀಸ್!'' ಚಿತ್ರವನ್ನು ಜನವರಿ 14ರಂದೇ ರಿಲೀಸ್ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಹೊಸ ವರ್ಷದ ಶುಭಾಶಯಗಳನ್ನು ತಿಳಿಸಲು ಹೊಸದೊಂದು ಪೋಸ್ಟರ್ ಅನ್ನು ಚಿತ್ರತಂಡ ಹಂಚಿಕೊಂಡಿದೆ. ಆ ಪೋಸ್ಟರ್ ಮೇಲೆ ಜನವರಿ 14ರಂದು ಸಿನಿಮಾ ಬಿಡುಗಡೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಅಲ್ಲಿಗೆ ಸಂಕ್ರಾಂತಿ ರೇಸ್‌ನಲ್ಲಿ ರಾಧೆ ಶ್ಯಾಮ್ ಉಳಿದುಕೊಂಡಂತೆ ಆಗಲಿದೆ. ಈ ಮೊದಲು ಸಂಕ್ರಾಂತಿ ರೇಸ್‌ನಲ್ಲಿ 'ಭೀಮ್ಲಾ ನಾಯಕ್' ಕೂಡ ಇತ್ತು. ಆದರೆ, ಆರ್‌ಆರ್‌ಆರ್ ಸಿನಿಮಾಕ್ಕಾಗಿ ಫೆ.25ರಂದು ತಮ್ಮ ಸಿನಿಮಾವನ್ನು ರಿಲೀಸ್ ಮಾಡುವುದಾಗಿ 'ಭೀಮ್ಲಾ ನಾಯಕ್' ನಿರ್ಮಾಪಕರು ಹೇಳಿಕೊಂಡಿದ್ದರು. ಬಹುಶಃ ಆ ಸಿನಿಮಾ ಕೂಡ ಸಂಕ್ರಾಂತಿ ರೇಸ್‌ಗೆ ಮತ್ತೆ ಎಂಟ್ರಿ ನೀಡುವ ಸಾಧ್ಯತೆಗಳಿವೆ. ಅದ್ದೂರಿಯಾಗಿ ನಡೆದಿದ್ದ ಟ್ರೈಲರ್ ಲಾಂಚ್ಈಚೆಗೆ 'ರಾಧೆ ಶ್ಯಾಮ್' ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮವು ಅದ್ದೂರಿಯಾಗಿ ನಡೆದಿತ್ತು. ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆದ ಈ ಅದ್ಧೂರಿ ಕಾರ್ಯಕ್ರಮದಲ್ಲಿ ಸಾವಿರಾರು ಪ್ರಭಾಸ್‌ ಫ್ಯಾನ್ಸ್ ನೆರೆದಿದ್ದರು. 'ರಾಧೆ ಶ್ಯಾಮ್‌' ಸಿನಿಮಾವು ತನ್ನ ವಿಭಿನ್ನ ಶೈಲಿಯ ಮೇಕಿಂಗ್‌ ಮತ್ತು ಪೋಸ್ಟರ್‌ನಿಂದ ಗಮನ ಸೆಳೆಯುತ್ತಿದೆ. ರಾಧಾಕೃಷ್ಣ ಕುಮಾರ್ ನಿರ್ದೇಶನದಲ್ಲಿ ಸಿನಿಮಾ ಮೂಡಿಬಂದಿದೆ. ವಿಶೇಷವೆಂದರೆ, ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಯಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ಆರ್‌ಆರ್‌ಆರ್ ಚಿತ್ರತಂಡ ಹೇಳಿದ್ದೇನು?ಇನ್ನು, ಕೊನೇ ಕ್ಷಣದಲ್ಲಿ ಸಿನಿಮಾ ಬಿಡುಗಡೆಯನ್ನು ಮುಂದಕ್ಕೆ ಹಾಕಿರುವ ಆರ್‌ಆರ್‌ಆರ್ ಬಳಗ ಸಿನಿಪ್ರಿಯರಿಗೆ ಒಂದು ಸಂದೇಶ ನೀಡಿದೆ. 'ನಮ್ಮ ಎಲ್ಲ ಪ್ರಯತ್ನಗಳ ಹೊರತಾಗಿ ಸಂದರ್ಭವು ನಮ್ಮ ಕೈಯಲ್ಲಿ ಇಲ್ಲ ಎಂದು ಅನಿಸುತ್ತಿದೆ. ಅನೇಕ ರಾಜ್ಯಗಳಲ್ಲಿ ಸಿನಿಮಾ ಥಿಯೇಟರ್‌ಗಳು ಬಂದ್ ಆಗುತ್ತಿವೆ. ಹೀಗಾಗಿ ನಮಗೆ ಬೇರೆ ದಾರಿ ಇಲ್ಲ, ನಿಮ್ಮ ಕುತೂಹಲವನ್ನು ಇನ್ನಷ್ಟು ಹಿಡಿದಿಟ್ಟುಕೊಳ್ಳುವ ಸ್ಥಿತಿ ಬಂದಿದೆ. ಸರಿಯಾದ ಸಮಯಕ್ಕೆ ಭಾರತೀಯ ಚಿತ್ರರಂಗದ ಸಿನಿಮಾ ವೈಭವ ಆರ್‌ಆರ್‌ಆರ್‌ ಚಿತ್ರವನ್ನು ರಿಲೀಸ್ ಮಾಡಲಿದ್ದೇವೆ' ಎಂದು ಹೇಳಿಕೊಂಡಿದ್ದಾರೆ ನಿರ್ಮಾಪಕರು.