ಅನಾರೋಗ್ಯ: ದುನಿಯಾ ವಿಜಯ್ ತಾಯಿ ನಾರಾಯಣಮ್ಮ ಆರೋಗ್ಯ ಸ್ಥಿತಿ ಗಂಭೀರ

ಕನ್ನಡ ನಟ ದುನಿಯಾ ವಿಜಯ್ ಅವರ ತಾಯಿ ನಾರಾಯಣಮ್ಮ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಬ್ರೇನ್ ಸ್ಟ್ರೋಕ್ ಆಗಿರೋದ್ರಿಂದ ದಿನೇ ದಿನೇ ನಾರಾಯಣಮ್ಮರವರ ಆರೋಗ್ಯ ಸ್ಥಿತಿ ಕ್ಷೀಣಿಸುತ್ತಿದೆ. ಕಳೆದ 22 ದಿನಗಳಿಂದ ಮನೆಯಲ್ಲೇ ತಾಯಿಗೆ ಚಿಕಿತ್ಸೆಗೆ ವ್ಯವಸ್ಥೆ ಮಾಡಿಸಿದ್ದಾರೆ ನಟ ದುನಿಯಾ ವಿಜಯ್.

ಅನಾರೋಗ್ಯ: ದುನಿಯಾ ವಿಜಯ್ ತಾಯಿ ನಾರಾಯಣಮ್ಮ ಆರೋಗ್ಯ ಸ್ಥಿತಿ ಗಂಭೀರ
Linkup
ಕನ್ನಡ ನಟ ಅವರ ತಾಯಿ ನಾರಾಯಣಮ್ಮ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಬ್ರೇನ್ ಸ್ಟ್ರೋಕ್ ಆಗಿರೋದ್ರಿಂದ ದಿನೇ ದಿನೇ ನಾರಾಯಣಮ್ಮರವರ ಆರೋಗ್ಯ ಸ್ಥಿತಿ ಕ್ಷೀಣಿಸುತ್ತಿದೆ. ಕಳೆದ 22 ದಿನಗಳಿಂದ ಮನೆಯಲ್ಲೇ ತಾಯಿಗೆ ಚಿಕಿತ್ಸೆಗೆ ವ್ಯವಸ್ಥೆ ಮಾಡಿಸಿದ್ದಾರೆ ನಟ ದುನಿಯಾ ವಿಜಯ್. ಮಹಾಮಾರಿ ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿದ್ದ ನಾರಾಯಣಮ್ಮ ಅವರಿಗೆ ಬ್ರೇನ್ ಸ್ಟ್ರೋಕ್ ಆಗಿದೆ. ಮೆದುಳಿನಲ್ಲಿ ಬ್ಲಡ್ ಕ್ಲಾಟ್ ಆಗಿದ್ದು, ಅವರು ಹಾಸಿಗೆ ಹಿಡಿದಿದ್ದಾರೆ ಎಂದು ಮಗ ದುನಿಯಾ ವಿಜಯ್ ಮಾಹಿತಿ ನೀಡಿದ್ದಾರೆ. ನಾರಾಯಣಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ದುನಿಯಾ ವಿಜಯ್ ''ತಾಯಿಗೆ ತುಂಬಾ ಹುಷಾರಿಲ್ಲ. 22 ದಿನಗಳಿಂದಲೂ ಅನಾರೋಗ್ಯ ಕಾಡುತ್ತಿದೆ. ಕೊನೆಯ ದಿನಗಳನ್ನು ಕಳೆಯುತ್ತಿದ್ದಾರೆ. ಬ್ರೇನ್ ಸ್ಟ್ರೋಕ್ ಆಗಿದೆ. ಮೆದುಳಿನಲ್ಲಿ ಬ್ಲಡ್ ಕ್ಲಾಟ್ ಆಗಿದೆ. ಯಾವುದೇ ತರಹ ಚಲನವಲನ ಇಲ್ಲ. ಹಾಸಿಗೆ ಹಿಡಿದಿದ್ದಾರೆ. ದಿನೇ ದಿನೇ ಅವರ ಆರೋಗ್ಯ ಕ್ಷೀಣಿಸುತ್ತಿದೆ. ಪ್ರತಿ ದಿನ ವೈದ್ಯರು ಬಂದು ಚಿಕಿತ್ಸೆ ನೀಡಿ ಹೋಗುತ್ತಿದ್ದಾರೆ. ಆದರೂ ಅವರು ಚೇತರಿಸಿಕೊಳ್ಳುತ್ತಿಲ್ಲ. ಇದರಿಂದ ಮನಸ್ಸಿಗೆ ತುಂಬಾ ದುಃಖ ಆಗುತ್ತಿದೆ'' ಎಂದು ಮಾಧ್ಯಮಗಳಿಗೆ ನಟ ದುನಿಯಾ ವಿಜಯ್ ತಿಳಿಸಿದ್ದಾರೆ. ಕೊರೊನಾ ಗೆದ್ದಿದ್ದ ದುನಿಯಾ ವಿಜಯ್ ತಂದೆ-ತಾಯಿ ಕಳೆದ ಎರಡು ತಿಂಗಳ ಹಿಂದೆಯಷ್ಟೇ ದುನಿಯಾ ವಿಜಯ್ ಅವರ ತಂದೆ ರುದ್ರಪ್ಪ ಹಾಗೂ ತಾಯಿ ನಾರಾಯಣಮ್ಮ ಅವರಿಗೆ ಕೋವಿಡ್ 19 ಪಾಸಿಟಿವ್ ಕಂಡುಬಂದಿತ್ತು. ಮನೆಯಲ್ಲೇ ಚಿಕಿತ್ಸೆಗೆ ವ್ಯವಸ್ಥೆ ಮಾಡಿಸಿ, ತಂದೆ-ತಾಯಿಯನ್ನು ದುನಿಯಾ ವಿಜಯ್ ಆರೈಕೆ ಮಾಡಿದ್ದರು. ಮಾರಣಾಂತಿಕ ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿದ್ದ ನಾರಾಯಣಮ್ಮ ಅವರಿಗೆ ಇದೀಗ ಬ್ರೇನ್ ಸ್ಟ್ರೋಕ್ ಆಗಿದೆ. ಆಸ್ಪತ್ರೆಗೆ ಸೇರಲು ನಾರಾಯಣಮ್ಮ ಅವರಿಗೆ ಇಷ್ಟವಿಲ್ಲದ ಕಾರಣ ದುನಿಯಾ ವಿಜಯ್ ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ತಾಯಿಯ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ ದುನಿಯಾ ವಿಜಯ್.