ನಟ ಸುದೀಪ್‌ಗೆ 'ಜುಲೈ 6' ಸಖತ್ ಸ್ಪೆಷಲ್! ಆ ನಾಲ್ವರಿಗೆ 'ಕಿಚ್ಚ' ಧನ್ಯವಾದ ಹೇಳಿದ್ದೇಕೆ?

'ಕಿಚ್ಚ' ಸುದೀಪ್ ಅವರಿಗೆ ಜುಲೈ 6ರ ಈ ದಿನ ಸಖತ್ ಸ್ಪೆಷಲ್ ಯಾಕೆಂದರೆ, ಅವರ ವೃತ್ತಿ ಬದುಕಿಗೆ ಈ ದಿನದಂದು ಎರಡೆರಡು ಬಾರಿ ಟರ್ನಿಂಗ್ ಪಾಯಿಂಟ್ ಸಿಕ್ಕಿತ್ತು. ಹಾಗಾದರೆ, ಈ ದಿನದ ಸ್ಪೆಷಾಲಿಟಿ ಏನು? ಇಲ್ಲಿದೆ ನೋಡಿ ಆಸಕ್ತಿಕರ ಮಾಹಿತಿ.

ನಟ ಸುದೀಪ್‌ಗೆ 'ಜುಲೈ 6' ಸಖತ್ ಸ್ಪೆಷಲ್! ಆ ನಾಲ್ವರಿಗೆ 'ಕಿಚ್ಚ' ಧನ್ಯವಾದ ಹೇಳಿದ್ದೇಕೆ?
Linkup
ನಟ 'ಕಿಚ್ಚ' ಅವರಿಗೆ ಜುಲೈ 6 ಬಹಳ ವಿಶೇಷವಾದ ದಿನ. ಯಾಕೆಂದರೆ, ಅವರ ವೃತ್ತಿ ಜೀವನಕ್ಕೆ ದೊಡ್ಡ ಬ್ರೇಕ್ ಕೊಟ್ಟ ಸಿನಿಮಾ '' ತೆರೆಕಂಡಿದ್ದು ಇದೇ ದಿನ. ಹಾಗಾಗಿ. ಜುಲೈ 6ರ ಈ ದಿನದ ಮೇಲೆ ಕಿಚ್ಚನಿಗೆ ವಿಶೇಷ ಪ್ರೀತಿ ಇದೆ. ಜೊತೆಗೆ ಅವರು ಪ್ಯಾನ್‌ ಇಂಡಿಯಾ ಸ್ಟಾರ್ ಎನಿಸಿಕೊಂಡು, ಕರ್ನಾಟಕದ ಗಡಿಯಾಚೆಗೂ ಭಾರಿ ಜನಪ್ರಿಯತೆ ಗಳಿಸುವುದಕ್ಕೆ ಕಾರಣವಾಗಿದ್ದು ಈಗ ಸಿನಿಮಾ. ಆ ಸಿನಿಮಾ ಕೂಡ ಜುಲೈ 6ರಂದೇ ರಿಲೀಸ್ ಆಗಿತ್ತು. ಹಾಗಾಗಿ, ವಿಶೇಷವಾಗಿ ಈ ದಿನವನ್ನು ನೆನೆದಿದ್ದಾರೆ ಕಿಚ್ಚ. 'ಹುಚ್ಚ', 'ಈಗ' ಕುರಿತು ಟ್ವೀಟ್ ಮಾಡಿದ ಕಿಚ್ಚ 'ಹುಚ್ಚ' ಸಿನಿಮಾ ತೆರೆಕಂಡು ಇಂದಿಗೆ 20 ವರ್ಷ ಆಯ್ತು. ಅದೇ ಥರ 'ಈಗ' ತೆರೆಕಂಡು 9 ವರ್ಷಗಳು ಕಳೆದಿವೆ. ಈ ಕುರಿತು ಟ್ವೀಟ್ ಮಾಡಿರುವ ಕಿಚ್ಚ ಸುದೀಪ್, 'ಎಂದೂ ಮರೆಯಲಾಗದ ಎರಡು ಸಿನಿಮಾಗಳು ಒಂದೇ ದಿನಾಂಕದಂದು ತೆರೆಕಂಡಿದ್ದವು. ಅದಕ್ಕಾಗಿ ರೆಹಮಾನ್ ಸರ್, , ಸಾಯಿ ಕೊರ್ರಪಾಟಿ, ರಾಜಮೌಳಿಗೆ ಧನ್ಯವಾದಗಳು' ಎಂದಿದ್ದಾರೆ. ಈ ಮೂಲಕ 'ಹುಚ್ಚ'ಹಾಗೂ 'ಈಗ' ಸಿನಿಮಾಗಳ ನಿರ್ಮಾಪಕರು-ನಿರ್ದೇಶಕರಿಗೆ ಕಿಚ್ಚ ಕೃತಜ್ಞತೆ ತಿಳಿಸಿದ್ದಾರೆ. ಹುಚ್ಚ ಚಿತ್ರಕ್ಕೆ 20 ವರ್ಷ 2001ರ ಜುಲೈ 6ರಂದು 'ಹುಚ್ಚ' ಸಿನಿಮಾ ತೆರೆಕಂಡಿತ್ತು. 'ಸ್ಪರ್ಶ' ಸಿನಿಮಾದ ಮೂಲಕ ಹೀರೋ ಆಗಿದ್ದ ಸುದೀಪ್‌ಗೆ ದೊಡ್ಡ ಇಮೇಜ್ ತಂದುಕೊಟ್ಟಿದ್ದು 'ಹುಚ್ಚ' ಸಿನಿಮಾ. ತಮಿಳಿನ 'ಸೇತು' ಸಿನಿಮಾದ ರಿಮೇಕ್ ಆಗಿದ್ದ 'ಹುಚ್ಚ' ಚಿತ್ರಕ್ಕೆ ಓಂ ಪ್ರಕಾಶ್ ರಾವ್ ನಿರ್ದೇಶನ ಮಾಡಿದ್ದರು. ಸುದೀಪ್‌ ಎರಡು ಶೇಡ್‌ನ ಪಾತ್ರ ಮಾಡಿದ್ದರು. ಒಂದರಲ್ಲಿ ಆ್ಯಂಗ್ರಿ ಯಂಗ್‌ಮ್ಯಾನ್‌ ಆಗಿ, ಮತ್ತೊಂದರಲ್ಲಿ ಮಾನಸಿಕ ಅಸ್ವಸ್ಥನಾಗಿ ಅದ್ಭುತವಾಗಿ ನಟಿಸಿದ್ದರು. 'ಯಜಮಾನ'ದಂತಹ ಮೆಗಾ ಹಿಟ್ ಸಿನಿಮಾವನ್ನು ನಿರ್ಮಿಸಿದ್ದ ಕೆ. ಮುಸ್ತಾಫಾ, ಮೆಹರುನ್ನೀಸಾ ರೆಹಮಾನ್ ಅವರು 'ಹುಚ್ಚ' ಚಿತ್ರಕ್ಕೂ ಬಂಡವಾಳ ಹೂಡಿದ್ದರು. 'ಹುಚ್ಚ' ಸಿನಿಮಾದ ಅಭಿನಯಕ್ಕಾಗಿ ಮೊದಲ ಬಾರಿಗೆ ಪ್ರತಿಷ್ಠಿತ 'ಫಿಲ್ಮ್‌ಫೇರ್ ಪ್ರಶಸ್ತಿ' ಕೂಡ ಸುದೀಪ್‌ಗೆ ಸಿಕ್ಕಿತ್ತು. ಈಗ ತೆರೆಕಂಡು 9 ವರ್ಷ 2012ರ ಜುಲೈ 6ರಂದು 'ಈಗ' ಸಿನಿಮಾ ತೆರೆಕಂಡಿತ್ತು. ಅದಾಗಲೇ 'ಪೂಂಕ್', 'ರಣ್‌', 'ರಕ್ತ ಚರಿತ್ರ' ಸಿನಿಮಾಗಳಿಂದ ಸುದೀಪ್ ಬೇರೆ ಭಾಷೆಯಲ್ಲೂ ಜನಪ್ರಿಯರಾಗಿದ್ದರು. ಆದರೆ, ತೆಲುಗಿನ 'ಈಗ' ಸಿನಿಮಾ ಅವರಿಗೆ ವಿಶ್ವವ್ಯಾಪಿ ಕೀರ್ತಿ ತಂದುಕೊಟ್ಟಿತು. ರಾಜಮೌಳಿ ನಿರ್ದೇಶನ ಮಾಡಿದ್ದ ಈ ಸಿನಿಮಾ ತೆಲುಗು, ಹಿಂದಿ, ತಮಿಳಿನಲ್ಲಿ ತೆರೆಗೆ ಬಂತು. ಖಳನಾಗಿ ಸುದೀಪ್ ಅತ್ಯದ್ಭುತವಾಗಿ ನಟನೆ ಮಾಡಿದ್ದರು. ಈ ಸಿನಿಮಾದ ನಟನೆಗಾಗಿ 'ಫಿಲ್ಮ್‌ಫೇರ್ ಪ್ರಶಸ್ತಿ', 'ಸೈಮಾ ಪ್ರಶಸ್ತಿ', 'ಸಿನಿಮಾ ಅವಾರ್ಡ್‌', 'ನಂದಿ ಅವಾರ್ಡ್‌' ಸೇರಿದಂತೆ ಅನೇಕ ಪ್ರಶಸ್ತಿಗಳು ಸುದೀಪ್‌ಗೆ ಒಲಿದು ಬಂದವು. s