ಸಿಲ್ಕ್ ಸ್ಮಿತಾರನ್ನು ಬಣ್ಣದ ಲೋಕಕ್ಕೆ ಕರೆತಂದಿದ್ದ ನಿರ್ದೇಶಕ ಆಂಥೋನಿ ಈಸ್ಟ್‌ಮನ್ ಇನ್ನಿಲ್ಲ

ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕ, ನಿರ್ಮಾಪಕ, ಫೋಟೋಗ್ರಾಫರ್ ಆಂಥೋನಿ ಈಸ್ಟ್‌ಮನ್ ಕೊನೆಯುಸಿರೆಳೆದಿದ್ದಾರೆ.

ಸಿಲ್ಕ್ ಸ್ಮಿತಾರನ್ನು ಬಣ್ಣದ ಲೋಕಕ್ಕೆ ಕರೆತಂದಿದ್ದ ನಿರ್ದೇಶಕ ಆಂಥೋನಿ ಈಸ್ಟ್‌ಮನ್ ಇನ್ನಿಲ್ಲ
Linkup
ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕ, ನಿರ್ಮಾಪಕ, ಫೋಟೋಗ್ರಾಫರ್ ಕೊನೆಯುಸಿರೆಳೆದಿದ್ದಾರೆ. ಕಾರ್ಡಿಯಾಕ್ ಅರೆಸ್ಟ್‌ನಿಂದಾಗಿ ತ್ರಿಶೂರ್ ಮೆಡಿಕಲ್ ಕಾಲೇಜಿನಲ್ಲಿ ಜುಲೈ 3ರಂದು ಆಂಥೋನಿ ಈಸ್ಟ್‌ಮನ್ ಮೃತಪಟ್ಟಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಫೋಟೋಗ್ರಾಫರ್ ಆಗಿ ವೃತ್ತಿ ಜೀವನ ಆರಂಭಿಸಿದ್ದ ಆಂಥೋನಿ ಈಸ್ಟ್‌ಮನ್ ಆಂಥೋನಿ ಹುಟ್ಟಿ ಬೆಳೆದಿದ್ದೆಲ್ಲಾ ಕೇರಳದಲ್ಲಿ. 60ರ ದಶಕದಲ್ಲಿ ಫೋಟೋಗ್ರಾಫರ್ ಆಗಿ ತಮ್ಮ ವೃತ್ತಿ ಜೀವನವನ್ನು ಆಂಥೋನಿ ಆರಂಭಿಸಿದರು. ಎರ್ನಾಕುಳಂನಲ್ಲಿ 'ಈಸ್ಟ್‌ಮನ್' ಹೆಸರಿನ ಸ್ಟುಡಿಯೋವನ್ನು ಆಂಥೋನಿ ಪ್ರಾರಂಭಿಸಿದರು. ಮ್ಯಾಗಝೀನ್ ಮತ್ತು ಪತ್ರಿಕೆಗಳಿಗಾಗಿ ಫೋಟೋಗಳನ್ನು ಆಂಥೋನಿ ಕ್ಲಿಕ್ ಮಾಡುತ್ತಿದ್ದರು. ಈ ಮೂಲಕವೇ ಅವರ ಹೆಸರಿನ ಜೊತೆಗೆ 'ಈಸ್ಟ್‌ಮನ್' ಕೂಡ ಅಂಟಿಕೊಂಡಿತು. ಇನ್ನೂ ಇಂಟ್ರೆಸ್ಟಿಂಗ್ ವಿಷಯ ಅಂದ್ರೆ, ಮಾದಕ ನಟಿ ಸಿಲ್ಕ್ ಸ್ಮಿತಾರನ್ನ ಬಣ್ಣದ ಬದುಕಿಗೆ ಪರಿಚಯಿಸಿದ್ದೇ ಆಂಥೋನಿ ಈಸ್ಟ್‌ಮನ್. ಚಿತ್ರರಂಗಕ್ಕೆ ಕಾಲಿಟ್ಟಿದ್ದು 'ಇನಾಯೆ ಥೇಡಿ' ಚಿತ್ರದ ಮೂಲಕ. ಇದೇ ಚಿತ್ರಕ್ಕಾಗಿ ಆಂಥೋನಿ ಈಸ್ಟ್‌ಮನ್ ಕೂಡ ಡೈರೆಕ್ಟರ್ ಕ್ಯಾಪ್ ತೊಟ್ಟರು. 'ಐಸ್ ಕ್ರೀಮ್', 'ಮೃದುಲಾ', 'ವಾಯಲ್' ಮುಂತಾದ ಚಲನಚಿತ್ರಗಳನ್ನು ಆಂಥೋನಿ ಈಸ್ಟ್‌ಮನ್ ನಿರ್ದೇಶಿಸಿದ್ದರು. 'ರಚನ', 'ಮಾಣಿಕ್ಯನ್' ಮುಂತಾದ ಚಿತ್ರಗಳಿಗೆ ಬರಹಗಾರನಾಗಿ ಆಂಥೋನಿ ಈಸ್ಟ್‌ಮನ್ ಕೆಲಸ ಮಾಡಿದ್ದರು. ಕೆಲ ಸಿನಿಮಾಗಳಿಗೆ ಸ್ಟಿಲ್ ಫೋಟೋಗ್ರಾಫರ್‌ಗಳಾಗಿಯೂ ಆಂಥೋನಿ ಕಾರ್ಯ ನಿರ್ವಹಿಸಿದ್ದಾರೆ. ಮಲಯಾಳಂ ಚಿತ್ರರಂಗಕ್ಕೆ ಕೊಡುಗೆ ನೀಡಿರುವ ಆಂಥೋನಿ ಈಸ್ಟ್‌ಮನ್ ನಿಧನಕ್ಕೆ ಕಂಬನಿ ಮಿಡಿದಿದೆ.