ಹಿರಿಯ ನಿರ್ದೇಶಕ ಕೆ.ವಿ. ರಾಜು ಪುತ್ರ ಅಮೋಘ್‌ ಸ್ಯಾಂಡಲ್‌ವುಡ್‌ಗೆ ಎಂಟ್ರಿ

ಬೆಳ್ಳಿ ಕಾಲುಂಗುರ, ಯುದ್ಧಕಾಂಡ, ಹುಲಿಯಾ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ನೀಡಿದ ನಿರ್ದೇಶಕ ಕೆ. ವಿ. ರಾಜು ಅವರ ಪುತ್ರ ಅಮೋಘ್‌ ಈಗ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಆ ಸಿನಿಮಾ ಹಾಗೂ ನಿರ್ದೇಶಕರ ಬಗ್ಗೆ ವಿವರ ಇಲ್ಲಿದೆ.

ಹಿರಿಯ ನಿರ್ದೇಶಕ ಕೆ.ವಿ. ರಾಜು ಪುತ್ರ ಅಮೋಘ್‌ ಸ್ಯಾಂಡಲ್‌ವುಡ್‌ಗೆ ಎಂಟ್ರಿ
Linkup
ಹರೀಶ್‌ ಬಸವರಾಜ್‌ ಬೆಳ್ಳಿ ಕಾಲುಂಗುರ, ಯುದ್ಧಕಾಂಡ, ಇಂದ್ರಜಿತ್‌ನಂತಹ ಸೂಪರ್‌ ಹಿಟ್‌ ಸಿನಿಮಾಗಳನ್ನು ನೀಡಿದ ನಿರ್ದೇಶಕ ಅವರ ಪುತ್ರ ಅಮೋಘ ಈಗ '' ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಯಾಗುತ್ತಿದ್ದಾರೆ. 80-90ರ ದಶಕದಲ್ಲಿ ಮಾಸ್‌ ಸಿನಿಮಾ ಮಾಡುವುದಕ್ಕೆ ಹೆಸರುವಾಸಿಯಾದವರು ಕೆ.ವಿ. ರಾಜು. ಅವರು ಮಾಡಿರುವ ಸಿನಿಮಾಗಳಲ್ಲಿ ಹಲವು ಸೂಪರ್‌ ಹಿಟ್‌ ಆಗಿವೆ. ಕನ್ನಡ ಮಾತ್ರವಲ್ಲದೆ ಬಾಲಿವುಡ್‌ನಲ್ಲಿಯೂ ತಮ್ಮ ಛಾಪು ಮೂಡಿಸಿದ್ದ ಕೆವಿಆರ್‌ ಬಾಲಿವುಡ್‌ನ ಬಿಗ್‌ಬಿ ಅಮಿತಾಭ್‌ ಬಚ್ಚನ್‌ಗೂ ನಿರ್ದೇಶನ ಮಾಡಿದ ಹೆಗ್ಗಳಿಕೆ ಹೊಂದಿದವರು. ಇದೀಗ ಕೆ.ವಿ.ರಾಜು ಅವರ ಪುತ್ರನನ್ನು ಸಿನಿರಂಗಕ್ಕೆ ಪರಿಚಯಿಸುತ್ತಿರುವ ನಿರ್ದೇಶಕ ತಾಯಿ ಲೋಕೇಶ್‌. ಇವರೂ ತಾವು ಕೆ.ವಿ. ರಾಜು ಅವರ ಸಿನಿಮಾಗಳನ್ನು ನೋಡಿಕೊಂಡು ಬೆಳೆದವರು ಎನ್ನುತ್ತಾರೆ. 'ಕೆ.ವಿ. ರಾಜು ಅವರ ರೀತಿ ಸ್ಕ್ರೀನ್‌ಪ್ಲೇ ಮಾಡಬೇಕು ಎಂದು ಬಹಳಷ್ಟು ಸಲ ಅಂದುಕೊಂಡಿದ್ದೆ. ಈಗ ಅವರ ಪುತ್ರನನ್ನು ನನ್ನ ಸಿನಿಮಾ ಮೂಲಕ ಇಂಡಸ್ಟ್ರಿಗೆ ಪರಿಚಯಿಸುತ್ತಿರುವುದು ನನಗೆ ಖುಷಿಯ ವಿಚಾರ. 'ದಿ ಕಲರ್‌ ಆಫ್‌ ಟೊಮೆಟೊ' ಸಿನಿಮಾದಲ್ಲಿ ಮೂರು ಕಥೆಯಿದೆ. ಮೂರರಲ್ಲಿ ಒಂದು ಪ್ರೇಮಕಥೆ. ಆ ಕಥೆಗೆ ಕೆವಿಆರ್‌ ಸರ್‌ ಪುತ್ರ ಅಮೋಘ್‌ ನಾಯಕರಾಗಿರುತ್ತಾರೆ. ಇಡೀ ಸಿನಿಮಾ ಕಲರ್‌ ಕಲರ್‌ ಅಂಗಿ ಧರಿಸಿ, ಕಲರ್‌ಫುಲ್‌ ಆಗಿ ನಟಿಸುತ್ತಾರೆ. ಸಿನಿಮಾ ತುಂಬಾ ಲವಲವಿಕೆಯಿಂದ ಓಡಾಡಿಕೊಂಡಿರುವ ಹುಡುಗನ ಪಾತ್ರವದು. ಆತ ತಮಟೆ ಹೊಡೆಯುವವನ ಪುತ್ರನಾಗಿದ್ದು, ದೊಡ್ಡ ಮನೆಯ ಹುಡುಗಿಯ ಜತೆ ಪ್ರೀತಿಯಲ್ಲಿ ಬೀಳುತ್ತಾನೆ. ಆಮೇಲೆ ಏನಾಗುತ್ತದೆ ಎಂಬುದೇ ಈ ಕಥೆಯ ಸಾರಾಂಶ' ಎಂದು ಹೇಳುತ್ತಾರೆ ತಾಯಿ ಲೋಕೇಶ್‌. ಅಮೋಘ ಅವರು ಬೆಂಗಳೂರಿನ ಎನ್‌ಎಸ್‌ಡಿಯಲ್ಲಿ ರಂಗ ತರಬೇತಿಯನ್ನು ಪಡೆದುಕೊಂಡಿದ್ದಾರೆ. ನಟನಾಗಲು ಎಲ್ಲಸಿದ್ಧತೆ ಮಾಡಿಕೊಂಡೇ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. 'ನಾನು ನಟನಾಗಬೇಕು ಎಂದುಕೊಂಡಾಗ ನಮ್ಮ ತಂದೆಯವರು ನೀನು ನಾಟಕದಲ್ಲಿ ಮಾತ್ರ ಒಳ್ಳೆಯ ನಟನೆ ಕಲಿಯಲು ಸಾಧ್ಯ ಎಂದರು. ನಾನು ಎನ್‌ಎಸ್‌ಡಿ ಬೆಂಗಳೂರು ಕೇಂದ್ರದಲ್ಲಿ ಒಂದು ವರ್ಷ ತರಬೇತಿ ಪಡೆದುಕೊಂಡೆ. ಅದಕ್ಕೂ ಮುನ್ನ ಕೆ. ಮಾದೇಶ್‌ ಅವರ 'ಬೃಂದಾವನ' ಮತ್ತು 'ಪವರ್‌ ಸ್ಟಾರ್‌' ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದೆ. ನಾಟಕಗಳಲ್ಲಿ ನಟಿಸುವಾಗ ತಾಯಿ ಲೋಕೇಶ್‌ ಅವರ ಪರಿಚಯವಾಗಿ ಈಗ ಸಿನಿಮಾ ಮಾಡುತ್ತಿದ್ದೇನೆ. ಲೋಕೇಶ್‌ ಅವರು ನಮ್ಮ ತಂದೆಗೆ ಕಥೆ ಹೇಳಿದಾಗ ಕಂಟೆಂಟ್‌ ಚೆನ್ನಾಗಿದೆ, ಮಾಡು ಎಂದರು. ಒಳ್ಳೆ ಪಾತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಯಾಗುತ್ತಿರುವುದು ಖುಷಿಯ ವಿಚಾರ' ಎಂದು ಸಂತೋಷ ವ್ಯಕ್ತಪಡಿಸಿದರು ಅಮೋಘ. ಇದೇ ಅ. 25ರಿಂದ ಚಿತ್ರೀಕರಣ ಆರಂಭವಾಗಲಿದೆ. ಕೋಲಾರ ಸುತ್ತಮುತ್ತ ನಡೆಯಲಿದೆ. ಪ್ರತಾಪ್‌ ನಾರಾಯಣ್‌ ಕೂಡ ಈ ಸಿನಿಮಾದಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ. 'ನಮ್ಮ ತಂದೆಯೇ ನನ್ನನ್ನು ಲಾಂಚ್‌ ಮಾಡಬೇಕು ಎಂದುಕೊಂಡಿದ್ದರು. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ತಾಯಿ ಲೋಕೇಶ್‌ ಅವರ ಕಥೆ ಕೇಳಿದಾಗ ಒಳ್ಳೆಯ ಪಾತ್ರ ಎನಿಸಿ ಒಪ್ಪಿಕೊಂಡಿದ್ದೇನೆ. ಕನ್ನಡಿಗರು ಆಶೀರ್ವದಿಸಬೇಕು ಅಷ್ಟೇ' ಎನ್ನುತ್ತಾರೆ . ಕೋಟ್ಸ್: ಸ್ಯಾಂಡಲ್‌ವುಡ್‌ನಲ್ಲಿ ಟ್ರೆಂಡ್‌ ಸೃಷ್ಟಿ ಮಾಡಿದ ನಿರ್ದೇಶಕರು ಕೆ.ವಿ. ರಾಜು. ಅವರ ಪುತ್ರನನ್ನು ನನ್ನ ಸಿನಿಮಾ ಮೂಲಕ ತೆರೆಗೆ ತರುತ್ತಿದ್ದೇನೆ. ನಮ್ಮ ನೆಲದ ಕಥೆಯಾದ್ದರಿಂದ ರಾಜು ಸರ್‌ ಒಪ್ಪಿಕೊಂಡು ಕಳಿಸಿಕೊಟ್ಟಿದ್ದಾರೆ. -ತಾಯಿ ಲೋಕೇಶ್‌, ನಿರ್ದೇಶಕ