'ಸಣ್ಣತನ ಮಾಡಬೇಡಿ, 'ಸಲಗ' ಸಿನಿಮಾವನ್ನು ಯಾರೂ ತುಳಿಯೋಕಾಗಲ್ಲ'- 'ದುನಿಯಾ' ವಿಜಯ್ ವಾರ್ನಿಂಗ್!

'ದುನಿಯಾ' ವಿಜಯ್ ನಟಿಸಿ, ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿರುವ 'ಸಲಗ' ಸಿನಿಮಾವು ರಾಜ್ಯಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಮಧ್ಯೆ ಒಂದು ವಿಚಾರಕ್ಕೆ 'ಸಲಗ' ಮತ್ತೊಮ್ಮೆ ಸುದ್ದಿಯಾಗಿದೆ.

'ಸಣ್ಣತನ ಮಾಡಬೇಡಿ, 'ಸಲಗ' ಸಿನಿಮಾವನ್ನು ಯಾರೂ ತುಳಿಯೋಕಾಗಲ್ಲ'- 'ದುನಿಯಾ' ವಿಜಯ್ ವಾರ್ನಿಂಗ್!
Linkup
ದಸರಾ ಹಬ್ಬದ ನಂತರ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ 'ಕೋಟಿಗೊಬ್ಬ 3' ಮತ್ತು '' ಸಿನಿಮಾಗಳು ಅದ್ದೂರಿಯಾಗಿ ತೆರೆಕಂಡಿವೆ. ಆದರೆ ವಿವಾದಗಳು ಮಾತ್ರ ಬೆನ್ನು ಬಿಡುತ್ತಿಲ್ಲ. ಇದೀಗ 'ಸಲಗ' ಚಿತ್ರಕ್ಕೆ ಒಂದು ವಿಘ್ನ ಎದುರಾಗಬೇಕಿತ್ತು. ಆದರೆ, ಮಾತುಕತೆಯ ಮೂಲಕ ಅದನ್ನು ಬಗೆಹರಿಸಿಕೊಳ್ಳಲಾಗಿದೆ. ಅಷ್ಟಕ್ಕೂ ಆಗಿದ್ದೇನೆಂದರೆ, 'ಸಲಗ' ಪ್ರದರ್ಶನ ಕಾಣುತ್ತಿರುವ ಮುಖ್ಯ ಚಿತ್ರಮಂದಿರ ತ್ರಿವೇಣಿಯಿಂದ ಈ ವಾರ ಸಿನಿಮಾ ಎತ್ತಂಗಡಿ ಆಗಬೇಕಿತ್ತು! ಶುಕ್ರವಾರದಿಂದ (ಅ.22) ಅಲ್ಲಿ ಬೇರೊಂದು ಸಿನಿಮಾ ತೆರೆಕಾಣಬೇಕಿತ್ತು! ತ್ರಿವೇಣಿಯಲ್ಲಿ ರಿಯಲ್ ಎಸ್ಟೇಟ್‌? ರಾಮಕೃಷ್ಣಪ್ಪ ಎಂಬುವವರು ನಿರ್ಮಾಣ ಮಾಡಿರುವ 'ರಿಯಲ್ ಎಸ್ಟೇಟ್‌' ಸಿನಿಮಾವು ಈ ವಾರ ತ್ರಿವೇಣಿ ಚಿತ್ರಮಂದಿರದಲ್ಲಿ ತೆರೆಕಾಣಲಿದೆ ಎಂದು ಸುದ್ದಿಯಾಗಿತ್ತು. ಆದರೆ, ಅದೇ ಚಿತ್ರಮಂದಿರದಲ್ಲಿ ಈಗಾಗಲೇ 'ದುನಿಯಾ' ವಿಜಯ್ ನಟನೆಯ 'ಸಲಗ' ಚಿತ್ರವು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಹೀಗಿದ್ದರೂ ಮತ್ತೊಂದು ಸಿನಿಮಾಕ್ಕೆ ಅವಕಾಶ ನೀಡಿದ್ದು ವಿವಾದಕ್ಕೆ ಕಾರಣವಾಗಿ, ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಇದೀಗ ಪ್ರಕರಣ ಸುಖಾಂತ್ಯವಾಗಿದೆ. ಈ ಬಗ್ಗೆ 'ದುನಿಯಾ' ವಿಜಯ್ ಮಾತನಾಡಿದ್ದು, 'ಸಣ್ಣತನ ಮಾಡಬೇಡಿ, 'ಸಲಗ' ಸಿನಿಮಾನಾ ಯಾರೂ ತುಳಿಯೋಕಾಗಲ್ಲ' ಎಂದಿದ್ದಾರೆ. 'ನಾನೇ ಬೇರೆ ಥಿಯೇಟರ್‌ಗೆ ಹೋಗ್ತಿನಿ ಅಂತ ನಾಳೆಯಿಂದ ಅನುಪಮಾ ಥಿಯೇಟರ್‌ಗೆ 'ರಿಯಲ್ ಎಸ್ಟೇಟ್' ಸಿನಿಮಾವನ್ನು ನಿರ್ಮಾಪಕ ರಾಮಕೃಷ್ಣಪ್ಪ ರಿಲೀಸ್ ಮಾಡ್ತಾ ಇದ್ದಾರೆ. ಏನಾದರೂ ಸರಿ ಸಲಗ ಸಿನಿಮಾವನ್ನು ತುಳಿದೇ ಬಿಡಬೇಕು ಎಂದು ಕೆಲವರು ರಾಮಕೃಷ್ಣಪ್ಪ ಅವರನ್ನು ಆಯುಧ ಮಾಡಿಕೊಂಡಿದ್ದರು. ಆದರೆ, ಇವರು ಹೋರಾಟಗಾರರಾಗಿದ್ದರಿಂದ ನಮ್ಮ ಜೊತೆ ಮಾತುಕತೆ ನಡೆಸಿದರು. 'ಸಲಗ' ಸಿನಿಮಾವನ್ನು ಯಾರೂ ನಿಲ್ಲಿಸೋಕೆ ಆಗಲ್ಲ. ಅದು ಓಡ್ತಾ ಇದೆ. ಆದರೂ ಯಾಕೆ ಈ ಸಣ್ಣತನ ಮಾಡ್ತಾರೋ ನನಗೆ ಗೊತ್ತಾಗುತ್ತಿಲ್ಲ' ಎಂದು 'ದುನಿಯಾ' ವಿಜಯ್ ಹೇಳಿದ್ದಾರೆ. 'ರಾಮಕೃಷ್ಣಪ್ಪ ಅವರನ್ನು ಮಿಸ್‌ಗೈಡ್ ಮಾಡಿದ್ದಾರೆ. ಇದು ಉದ್ದೇಶಪೂರ್ವಕವಾಗಿ ಮಾಡ್ತಾ ಇದ್ದಾರೆ. ನಾನು ಹೀರೋ, ಅವರ ಮಗನೂ ಹೀರೋ. ನಮ್ಮೊಂದಿಗೆ ಮಾತನಾಡಿ, ಅವರು ರಾಜೀ ಆಗಿದ್ದಾರೆ. 'ಸಲಗ' ಸಿನಿಮಾವನ್ನು ತುಳಿಯೋದಕ್ಕೆ ಟ್ರೈ ಮಾಡುತ್ತಿದ್ದಾರೆ. ಆದರೆ, ಜನರು ಈ ಸಿನಿಮಾವನ್ನು ಅಪ್ಪಿಕೊಂಡಿದ್ದಾರೆ. ಹೆಗಲು ಮೇಲೆ ಇಟ್ಟುಕೊಂಡು ಮೆರೆಸುತ್ತಿದ್ದಾರೆ. ಯಾರೂ ತುಳಿಯೋಕೆ ಆಗಲ್ಲ. ರಾಮಕೃಷ್ಣಪ್ಪ ಅವರ 'ರಿಯಲ್ ಎಸ್ಟೇಟ್' ಸಿನಿಮಾಗೂ ಒಳ್ಳೆಯದಾಗಲಿ' ಎಂದು ವಿಜಯ್ ಹೇಳಿದ್ದಾರೆ. 'ಅ.22ರಂದು ತ್ರಿವೇಣಿ ಥಿಯೇಟರ್‌ನಲ್ಲಿ ನಮ್ಮ ರಿಯಲ್ ಎಸ್ಟೇಟ್ ಸಿನಿಮಾ ತೆರೆಕಾಣಬೇಕಿತ್ತು. ಆದರೆ ಅಲ್ಲಿ ಸಲಗ ಉತ್ತಮ ಪ್ರದರ್ಶನ ಕಾಣುತ್ತಿದೆ. ಹಾಗಾಗಿ, ಹೊಂದಾಣಿಕೆ ಮೂಲಕ ನಮ್ಮ ಸಿನಿಮಾವನ್ನು ಅನುಪಮಾದಲ್ಲಿ ರಿಲೀಸ್ ಮಾಡಲಿದ್ದೇವೆ. ಒಂದಷ್ಟು ಗೊಂದಲ ಇದ್ದವು. ಇದೀಗ ಎಲ್ಲವೂ ಬಗೆಹರಿದಿದೆ' ಎಂದು ನಿರ್ಮಾಪಕ ರಾಮಕೃಷ್ಣಪ್ಪ ಹೇಳಿದ್ದಾರೆ.