ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ 'ಅಣ್ಣಾಥೆ' & 'ಸೂರ್ಯವಂಶಿ'; ಈವರೆಗಿನ ಕಲೆಕ್ಷನ್‌ ಎಷ್ಟು?

ಕೊರೊನಾದಿಂದ ಚಿತ್ರರಂಗ ದೊಡ್ಡ ಹೊಡೆತಕ್ಕೆ ಸಿಲುಕಿತ್ತು. ಇನ್ನುಮುಂದೆ ಚಿತ್ರಮಂದಿರಗಳಿಗೆ ಜನರು ಬರುತ್ತಾರಾ ಅನ್ನೋ ಪ್ರಶ್ನೆಯೇ ಎಲ್ಲರಿಗೂ ಇತ್ತು. ಇದೀಗ ಅದೆಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ್ದು, ಪ್ರೇಕ್ಷಕರ ಪ್ರತಿಕ್ರಿಯೆ ಕಂಡು ಚಿತ್ರರಂಗ ಖುಷಿಯಾಗಿದೆ.

ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ 'ಅಣ್ಣಾಥೆ' & 'ಸೂರ್ಯವಂಶಿ'; ಈವರೆಗಿನ ಕಲೆಕ್ಷನ್‌ ಎಷ್ಟು?
Linkup
ಕೊರೊನಾ ಎರಡನೇ ಅಲೆಯ ನಂತರ ಚಿತ್ರರಂಗ ಪುನಃ ಚೇತರಿಕೆ ಕಂಡುಕೊಳ್ಳುತ್ತಿದೆ. ಕನ್ನಡದಲ್ಲಿ ಸಲಗ, ಕೋಟಿಗೊಬ್ಬ 3, ಭಜರಂಗಿ 2 ಥರದ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿವೆ. ಅದೇ ರೀತಿ ಪರಭಾಷೆಯಲ್ಲೂ ಬಿಗ್ ಸ್ಟಾರ್ ಸಿನಿಮಾಗಳ ಹವಾ ಕಮ್ಮಿಯೇನು ಇಲ್ಲ. ದೀಪಾವಳಿ ಹಬ್ಬದ ಪ್ರಯುಕ್ತ ಹಿಂದಿಯಲ್ಲಿ ತೆರೆಕಂಡ ಹಾಗೂ ತಮಿಳಿನ ಬಾಕ್ಸ್ ಆಫೀಸ್‌ನಲ್ಲಿ ಚಿಂದಿ ಉಡಾಯಿಸುತ್ತಿವೆ. ಕೋಟಿ ಕೋಟಿ ಹಣವನ್ನು ನಿರ್ಮಾಪಕರ ಬೊಕ್ಕಸಕ್ಕೆ ತಂದುಕೊಡುತ್ತಿವೆ. ನೂರು ಕೋಟಿ ಕ್ಲಬ್ ಸೇರಿದ ಅಣ್ಣಾಥೆ! ಅಭಿನಯದ 'ಅಣ್ಣಾಥೆ' ಸಿನಿಮಾವು ತೆರೆಕಂಡ ದಿನದಿಂದಲೂ ಮಿಶ್ರ ಪ್ರತಿಕ್ರಿಯೆಯನ್ನೇ ಪಡೆಯುತ್ತಿದೆ. ಸಿನಿಮಾ ನೋಡಿದೋರು, 'ಅಷ್ಟೇನೂ ಚೆನ್ನಾಗಿಲ್ಲ..' ಎಂಬ ಮಾತುಗಳನ್ನೇ ಹೇಳುತ್ತಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿ ರಜನಿಯ ನಾಗಾಲೋಟ ಮುಂದುವರಿದಿದೆ. ಮೊದಲ ದಿನ ತಮಿಳುನಾಡಿನಲ್ಲಿ 34 ಕೋಟಿ ರೂ. ಗಳಿಸಿದ್ದ ಈ ಸಿನಿಮಾ, ಒಟ್ಟಾರೆ ವಿಶ್ವಾದ್ಯಂತ 70.19 ಕೋಟಿ ರೂ. ಗಳಿಸಿತ್ತು. ಇದೀಗ ಮೂರು ದಿನಗಳಿಗೆ ಈ ಸಿನಿಮಾದ ಒಟ್ಟಾರೆ ಗಳಿಕೆ 146.53 ಕೋಟಿ ರೂ.! ಈ ಮೂಲಕ ತಲೈವಾ ಹವಾ ಕಮ್ಮಿ ಆಗಿಲ್ಲ ಅನ್ನೋದು ಸಾಬೀತಾಗಿದೆ. ಅಲ್ಲದೆ, ಈ ಬಾರಿ ತಮಿಳು ಮತ್ತು ತೆಲುಗಿನಲ್ಲಿ ಮಾತ್ರ ಸಿನಿಮಾವನ್ನೂ ರಿಲೀಸ್ ಮಾಡಲಾಗಿತ್ತು. ತೆಲುಗು ವರ್ಷನ್‌ಗೆ ದೊಡ್ಡ ಓಪನಿಂಗ್ ಸಿಕ್ಕಿಲ್ಲ. ಇನ್ನು, ಶಿವ ನಿರ್ದೇಶನದ ಈ ಸಿನಿಮಾದಲ್ಲಿ ರಜನಿಕಾಂತ್‌ಗೆ ನಾಯಕಿಯಾಗಿ ನಯನತಾರಾ ಕಾಣಿಸಿಕೊಂಡರೆ, ಕೀರ್ತಿ ಸುರೇಶ್‌ ತಂಗಿಯಾಗಿ ನಟಿಸಿದ್ದಾರೆ. ಉಳಿದಂತೆ, ಪ್ರಕಾಶ್ ರೈ, ಮೀನಾ, ಖುಷ್ಬೂ, ಸೂರಿ ಮುಂತಾದವರು ಸಿನಿಮಾದಲ್ಲಿದ್ದಾರೆ. ಸನ್‌ ಪಿಕ್ಚರ್ಸ ಇದಕ್ಕೆ ಬಂಡವಾಳ ಹೂಡಿತ್ತು. ದಾಖಲೆ ಬರೆದ ಸೂರ್ಯವಂಶಿಅಕ್ಷಯ್‌ ಕುಮಾರ್ ನಟನೆಯ 'ಸೂರ್ಯವಂಶಿ' ಸಿನಿಮಾವು 2020ರ ಆರಂಭದಲ್ಲೇ ತೆರೆಗೆ ಬರಬೇಕಿತ್ತು. ಆದರೆ, ಕೋವಿಡ್‌ ಹೊಡೆತಕ್ಕೆ ಸಿಲುಕಿ, ಒಂದೂವರೆ ವರ್ಷಗಳ ನಂತರ ರಿಲೀಸ್ ಆಗಬೇಕಾಯಿತು. ಆದರೂ ಕೂಡ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಗೆಲ್ಲಲು ಸಫಲವಾಗಿದೆ. ಶುಕ್ರವಾರ (ನ.5) ತೆರೆಕಂಡ ಈ ಸಿನಿಮಾ ಎರಡೇ ದಿನಗಳಲ್ಲಿ ವಿಶ್ವಾದ್ಯಂತ 77.24 ಕೋಟಿ ರೂ. ಕಮಾಯಿ ಮಾಡಿ, ದಾಖಲೆ ಬರೆದಿದೆ. ಅಂದಹಾಗೆ, 'ಸೂರ್ಯವಂಶಿ'ಗೆ ಮಹಾರಾಷ್ಟ್ರವೇ ದೊಡ್ಡ ಮಾರುಕಟ್ಟೆ! ಆದರೆ ಇಲ್ಲಿ ಇನ್ನೂ ಕೂಡ ಶೇ.100 ಆಸನ ಭರ್ತಿಗೆ ಅವಕಾಶ ಸಿಕ್ಕಿಲ್ಲ. ಆದರೂ ಈ ಪ್ರಮಾಣದ ಕಲೆಕ್ಷನ್ ಮಾಡಿರುವುದು ಸಾಮಾನ್ಯದ ವಿಷಯವಲ್ಲ. ರೋಹಿತ್ ಶೆಟ್ಟಿ ನಿರ್ದೇಶನದ ಈ ಸಿನಿಮಾದಲ್ಲಿ ಅಕ್ಷಯ್‌ಗೆ ನಾಯಕಿಯಾಗಿ ಕತ್ರಿನಾ ಕೈಫ್ ನಟಿಸಿದ್ದಾರೆ. ಅಜಯ್ ದೇವ್‌ಗನ್ ಮತ್ತು ರಣ್‌ವೀರ್ ಸಿಂಗ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.