ಹಿಂದುತ್ವಕ್ಕಾಗಿ ನಾವು ಗುಂಡು, ಲಾಠಿ ಏಟು ತಿಂದಾಗ ನೀವು ಎಲ್ಲಿದ್ರಿ?: ಉದ್ಧವ್‌ ಠಾಕ್ರೆಗೆ ಫಡ್ನವೀಸ್‌ ಪ್ರಶ್ನೆ

ರಾಮ ಜನ್ಮಭೂಮಿ ಹೋರಾಟ ನಡೆದಾಗ ನೀವು ಎಲ್ಲಿದ್ರಿ? ಎಂದು ಪ್ರಶ್ನಿಸಿದ ಅವರು, ಹೋರಾಟದಲ್ಲಿ ನಾವು ಗುಂಡು, ಲಾಠಿ ಏಟು ತಿಂದೆವು ಎಂದಿದ್ದಾರೆ. ಅಲ್ಲದೇ ಈಗ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿ ನಿರ್ಮಾಣ ಆಗುತ್ತಿದೆ ಎಂದು ಹೇಳಿದ್ದಾರೆ.

ಹಿಂದುತ್ವಕ್ಕಾಗಿ ನಾವು ಗುಂಡು, ಲಾಠಿ ಏಟು ತಿಂದಾಗ ನೀವು ಎಲ್ಲಿದ್ರಿ?: ಉದ್ಧವ್‌ ಠಾಕ್ರೆಗೆ ಫಡ್ನವೀಸ್‌ ಪ್ರಶ್ನೆ
Linkup
ಮುಂಬಯಿ: ಬಿಜೆಪಿ ಜತೆಗಿನ 25 ವರ್ಷಗಳ ಮೈತ್ರಿ ನಿಷ್ಫಲ ಎಂದು ಹೇಳಿಕೆ ನೀಡಿದ ಶಿವಸೇನೆ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಹೇಳಿಕೆಗೆ ಬಿಜೆಪಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ತಿರುಗೇಟು ನೀಡಿದ್ದಾರೆ. 'ನಾವು ಮುಂಬೈ ಪಾಲಿಕೆಯಲ್ಲಿ ಗೆಲ್ಲಲು ಆರಂಭಿಸಿದಾಗ, ಶಿವಸೇನೆ ಹುಟ್ಟಿಯೇ ಇರಲಿಲ್ಲ' ಎಂದು ಹೇಳಿದ್ದಾರೆ. ಆ ಮೂಲಕ ಉದ್ಧವ್‌ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಇಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಶಿವಸೇನೆಗೆ ನೆನಪಿನ ಶಕ್ತಿ ಕಡಿಮೆ ಇದೆ ಎಂದು ಅನಿಸುತ್ತದೆ. ಬೃಹನ್ಮುಂಬೈ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲು ಆರಂಭಿಸಿದಾಗ, ಶಿವಸೇನೆ ಹುಟ್ಟಿಯೇ ಇರಲಿಲ್ಲ. 1984 ಚುನಾವಣೆಯಲ್ಲಿ ಶಿವಸೇನೆಯ ಅಭ್ಯರ್ಥಿಗಳು ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧೆ ಮಾಡಿದ್ದರು' ಎಂದು ದೇವೇಂದ್ರ ಫಡ್ನವೀಸ್‌ ಹೇಳಿದ್ದಾರೆ. ಅಲ್ಲದೇ ಇತ್ತೀಚೆಗೆ ನಡೆದ ನಗರ ಪಂಚಾಯತ್‌ ಚುನಾವಣೆಯಲ್ಲಿ ಶಿವಸೇನೆ ಹೀನಾಯವಾಗಿ ಸೋಲು ಕಂಡ ಬಳಿಕ ಉದ್ಧವ್‌ ಠಾಕ್ರೆ ಅವರು ಹತಾಶೆಗೊಂಡಿದ್ದಾರೆ ಎಂದು ಫಡ್ನವೀಸ್‌ ಹೇಳಿದ್ದಾರೆ. ಅಲ್ಲದೇ,ರಾಮ ಜನ್ಮಭೂಮಿ ಹೋರಾಟ ನಡೆದಾಗ ನೀವು ಎಲ್ಲಿದ್ರಿ? ಎಂದು ಪ್ರಶ್ನಿಸಿದ ಅವರು, ಹೋರಾಟದಲ್ಲಿ ನಾವು ಗುಂಡು, ಲಾಠಿ ಏಟು ತಿಂದೆವು ಎಂದಿದ್ದಾರೆ. ಅಲ್ಲದೇ ಈಗ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿ ನಿರ್ಮಾಣ ಆಗುತ್ತಿದೆ ಎಂದು ಹೇಳಿದ್ದಾರೆ. ಭಾನುವಾರ ಶಿವಸೇನೆಯ ಸಭೆಯೊಂದರಲ್ಲಿ ಮಾತನಾಡುತ್ತಾ ಮುಖ್ಯಮಂತ್ರಿ ಉದ್ದವ್‌ ಠಾಕ್ರೆ 25 ವರ್ಷಗಳ ಬಿಜೆಪಿ ಜತೆಗಿನ ಮೈತ್ರಿ ಬಗ್ಗೆ ಬೇಸರ ಹೊರ ಹಾಕಿದ್ದರು. 25 ವರ್ಷಗಳ ಮೈತ್ರಿ ನಿಷ್ಪ್ರಯೋಜಕ ಎಂದು ಹೇಳಿದ್ದಾರೆ. 'ಹಿಂದುತ್ವಕ್ಕಾಗಿ ಶಿವಸೇನೆ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿತ್ತು. ಆದರೆ ಅಧಿಕಾರಕ್ಕಾಗಿ ಯಾವತ್ತೂ ಹಿಂದುತ್ವವನ್ನು ಬಳಕೆ ಮಾಡಿಕೊಂಡಿಲ್ಲ. ಶಿವಸೇನೆ ಬಿಜೆಪಿಯ ಸಖ್ಯ ಬಿಟ್ಟಿದೇ ಹೊರೆತು ಹಿಂದುತ್ವವನ್ನಲ್ಲ. ಬಿಜೆಪಿಯದ್ದು ರಾಜಕೀಯ ಅಧಿಕಾರಕ್ಕಾಗಿ ಅವಕಾಶವಾದಿ ' ಎಂದು ಉದ್ಧವ್‌ ಹೇಳಿದ್ದರು. ಕಳೆದ 25 ವರ್ಷಗಳಿಂದ ಮೈತ್ರಿ ಪಕ್ಷಗಳಾಗಿದ್ದ ಶಿವಸೇನೆ ಹಾಗೂ ಬಿಜೆಪಿ ಅಧಿಕಾರ ಹಂಚಿಕೊಂಡಿದ್ದರು. 2019ರ ಚುನಾವಣೆಯಲ್ಲಿ ಅತಂತ್ರ ವಿಧಾನಸಭೆ ಉಂಟಾಗಿ ಬಿಜೆಪಿ ಹಾಗೂ ಶಿವಸೇನೆ ನಡುವೆ ಅಧಿಕಾಕ್ಕಾಗಿ ಕಿತ್ತಾಟ ಉಂಟಾಗಿತ್ತು. ಹೀಗಾಗಿ ಶಿವಸೇನೆ, ಎನ್‌ಸಿಪಿ ಹಾಗೂ ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿತ್ತು.