ಹೈಕಮಾಂಡ್‌ ಹೇಳಿದ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ : ಮಾಜಿ ಸಿಎಂ ಸಿದ್ದರಾಮಯ್ಯ

ಮುಂದಿನ ವಿಧಾನಸಭೆ ಚುನಾವಣೆಗೆ ಆಯಾ ಪಕ್ಷಗಳು ತಮ್ಮದೇ ಆದ ಯೋಜನೆಗಳನ್ನು ರೂಪಿಸುತ್ತಿದೆ. ಸದ್ಯ ಭಾರೀ ಚರ್ಚೆಯಲ್ಲಿರುವುದು ಸಿದ್ದರಾಮಯ್ಯ ಎಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಾರೆ ಎನ್ನುವುದು. ಸಿದ್ದರಾಮಯ್ಯ ಅವರ ನಡೆ ಸದ್ಯ ಚಾಮರಾಜಪೇಟೆಯತ್ತ ಇದೆ. ಆದರೆ ನಾನಿ ಅಲ್ಲಿಂದ ಸ್ಪರ್ಧಿಸುವುದಿಲ್ಲ ಎಂದು ಅವರೇ ಹೇಳುತ್ತಿದ್ದಾರೆ. ಇದೀಗ ಮತ್ತೊಂದು ಹೊಸ ಹೇಳಿಕೆಯನ್ನು ಇದೀಗ ಸಿದ್ದರಾಮಯ್ಯ ನೀಡಿದ್ದಾರೆ. ಹಾಗಾದರೆ ಅವರು ಹೇಳುವುದೇನು? ಇಲ್ಲಿದೆ ಈ ಬಗ್ಗೆ ಮಾಹಿತಿ.

ಹೈಕಮಾಂಡ್‌ ಹೇಳಿದ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ : ಮಾಜಿ ಸಿಎಂ ಸಿದ್ದರಾಮಯ್ಯ
Linkup
ಬೆಂಗಳೂರು: 'ನನಗೆ ಕ್ಷೇತ್ರದ ಬಗ್ಗೆ ಒಲವು ಇಲ್ಲ, ವಿರೋಧವೂ ಇಲ್ಲ. ನನ್ನ ಆಸಕ್ತಿಯ ಕ್ಷೇತ್ರ ಯಾವುದು ಎಂಬುದನ್ನು ಬಂದ ಮೇಲೆ ಹೇಳುತ್ತೇನೆ,' ಎಂದು ಪ್ರತಿಪಕ್ಷ ನಾಯಕ ಹೇಳಿದರು. ಚಾಮರಾಜಪೇಟೆಯಲ್ಲಿಗುರುವಾರ ಕಾರ್ಯಕ್ರಮವೊಂದರಲ್ಲಿಪಾಲ್ಗೊಂಡು ಮಾತನಾಡಿ, ''ಆಗಾಗ ಚಾಮರಾಜಪೇಟೆಗೆ ಬರುವುದರಿಂದ ಇಲ್ಲೇ ನಿಲ್ಲುತ್ತೇನೆಂದು ಕೆಲವರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಹಲವು ಕ್ಷೇತ್ರಗಳಿಂದ ಆಹ್ವಾನ ಬರುತ್ತಿದೆ. ಎಲ್ಲ ಕಡೆ ನಿಲ್ಲಲು ಸಾಧ್ಯವಿಲ್ಲ. ಹೈಕಮಾಂಡ್‌ ಹೇಳಿದ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ,'' ಎಂದು ಹೇಳಿದರು. ''ಮಾಜಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಹೇಳಿಕೆ ಹಿಂದೆ ಯಾರೋ ಇದ್ದಾರೆ ಎಂಬ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಲು ಅವರು ಯಾರು. ಈ ಬಗ್ಗೆ ನಾವು ಪಕ್ಷದಲ್ಲಿ ಚರ್ಚಿಸಿ ತೀರ್ಮಾನಿಸುತ್ತೇವೆ. ಸಿ.ಟಿ.ರವಿಗೆಲ್ಲಾ ಉತ್ತರ ಕೊಡಲಾಗದು. ಚಿಮ್ಮನಕಟ್ಟಿ ಅವರು ಪರಿಷತ್‌ ಚುನಾವಣೆಗೆ ಟಿಕೆಟ್‌ ಕೇಳಿದ್ದು ನಿಜ. ಕೇಳಿದ ಎಲ್ಲರಿಗೂ ಟಿಕೆಟ್‌ ಕೊಡಲಾಗದು. ಟಿಕೆಟ್‌ ಕೊಡುವುದು ಹೈಕಮಾಂಡೇ ಹೊರತು ನಾನಲ್ಲ,'' ಎಂದು ತಿಳಿಸಿದರು. ಸಿದ್ದು ವಿಜಯನಗರದಿಂದಲೇ ಸ್ಪರ್ಧಿಸಲಿ! ವಿಜಯನಗರ: ಪ್ರತಿಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ವಿಜಯನಗರ ವಿಧಾನಸಭಾ ಕ್ಷೇತ್ರದಿಂದ ಮುಂದಿನ ಚುನಾವಣೆಗೆ ಸ್ಪರ್ಧಿಸುವಂತೆ ಹೊಸಪೇಟೆಯ ಸೋಮಶೇಖರ್‌ ಆಹ್ವಾನ ನೀಡಿದ್ದಾರೆ.ಹೊಸಪೇಟೆಯ ಸೋಮಶೇಖರ್‌ ಅವರೇ ಈ ಕುರಿತು ತಮ್ಮ ಫೇಸ್‌ ಬುಕ್‌ ವಾಲ್‌ನಲ್ಲಿ ಬರೆದುಕೊಂಡಿದ್ದು, ‘ಅನ್ನರಾಮಯ್ಯ’ ವಿಜಯನಗರ ಕ್ಷೇತ್ರಕ್ಕೆ ಸ್ಪರ್ಧಿಸಿದ್ರೆ ಅತ್ಯಂತ ಪ್ರೀತಿಯಿಂದ ಸ್ವಾಗತಿಸುತ್ತೇವೆ. ವಿಜಯನಗರ ಜಿಲ್ಲೆಗೂ ಸಹ ವಿಜಯನಗರದ ಗತಕಾಲದ ವೈಭವ, ಇತಿಹಾಸ ಮರುಕಳಿಸಿದಂತಾಗುತ್ತದೆ ಎಂದು ಫೋಟೊ ಬಳಸಿ ಪೋಸ್ಟ್‌ ಮಾಡಿದ್ದಾರೆ.