ಸಂಸತ್‌ ಅಧಿವೇಶನ: ನಾಲ್ಕೇ ನಿಮಿಷದಲ್ಲಿ ಅನುಮೋದನೆ ಪಡೆದ 'ಕೃಷಿ ಕಾಯ್ದೆಗಳ ರದ್ದು ವಿಧೇಯಕ"

ಸಂಸತ್ತಿನ ಚಳಿಗಾಲದ ಅಧಿವೇಶನ ಇಂದು (ನ.29) ಆರಂಭವಾಗುತ್ತಿದ್ದಂತೆಯೇ ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮಸೂದೆಯನ್ನು ಉಭಯ ಸದನಗಳಲ್ಲಿ ದಾಖಲೆ ಸಮಯದಲ್ಲಿ ಅಂಗೀಕರಿಸಲಾಯಿತು.

ಸಂಸತ್‌ ಅಧಿವೇಶನ: ನಾಲ್ಕೇ ನಿಮಿಷದಲ್ಲಿ ಅನುಮೋದನೆ ಪಡೆದ 'ಕೃಷಿ ಕಾಯ್ದೆಗಳ ರದ್ದು ವಿಧೇಯಕ"
Linkup
ಹೊಸದಿಲ್ಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ಇಂದು (ನ.29) ಆರಂಭವಾಗುತ್ತಿದ್ದಂತೆಯೇ ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮಸೂದೆಯನ್ನು ಉಭಯ ಸದನಗಳಲ್ಲಿ ದಾಖಲೆ ಸಮಯದಲ್ಲಿ ಅಂಗೀಕರಿಸಲಾಯಿತು. ಇಂದು ರಾತ್ರಿಯೊಳಗೆ ರಾಷ್ಟ್ರಪತಿಗಳ ಅಂಕಿತ ಪಡೆಯಲು ಕೇಂದ್ರ ಸರ್ಕಾರ ಯೋಜಿಸಿದೆ ಎಂದು ಮೂಲಗಳು ತಿಳಿಸಿವೆ. ಕೃಷಿ ಕಾನೂನುಗಳ ರದ್ದು ಮಸೂದೆಯ () ಬಗ್ಗೆ ಚರ್ಚೆ ನಡೆಸಬೇಕೆಂದು ವಿರೋಧ ಪಕ್ಷಗಳು ಒತ್ತಾಯಿಸಿದ್ದರಿಂದ ಸಂಸತ್ತಿನಲ್ಲಿ ಭಾರಿ ಗದ್ದಲ ಏರ್ಪಟ್ಟಿತು. ಈ ಮಧ್ಯೆಯೇ ಕೃಷಿ ಕಾನೂನುಗಳ ರದ್ದತಿ ಮಸೂದೆಯನ್ನು ಲೋಕಸಭೆಯಲ್ಲಿ ( ) ಮೊದಲಿಗೆ ಅಂಗೀಕರಿಸಲಾಗಿದೆ. ಆದರೆ ಸಂಸತ್ತಿನ ಕೆಳಮನೆಯಾದ ಲೋಕಸಭೆಯಲ್ಲಿ, ಮಸೂದೆಯ ಕುರಿತು ಯಾವುದೇ ಚರ್ಚೆ ನಡೆಯಲಿಲ್ಲ. ನಂತರ ರಾಜ್ಯಸಭೆಯಲ್ಲೂ ಯಾವುದೇ ಚರ್ಚೆ ಇಲ್ಲದೆ ಅನುಮೋದನೆ ನೀಡಲಾಯಿತು. ಇದರಿಂದ ದಾಖಲೆಯ ಕಡಿಮೆ ಸಮಯದಲ್ಲಿ ಸಂಸತ್ತಿನ ಉಭಯ ಸದನಗಳಲ್ಲಿ ಮಸೂದೆಯನ್ನು ಅಂಗೀಕರಿಸಲಾಯಿತು. ನಾಲ್ಕೇ ನಿಮಿಷದಲ್ಲಿ ಅಂಗೀಕರಿಸಿದ ಲೋಕಸಭೆ ಕೃಷಿ ಕಾನೂನುಗಳ ರದ್ದು ಮಸೂದೆಯನ್ನು ಲೋಕಸಭೆಯಲ್ಲಿ ಸೋಮವಾರ ಮಧ್ಯಾಹ್ನ 12:06ಕ್ಕೆ ಮಂಡನೆ ಮಾಡಲಾಯಿತು. 12:10ರೊಳಗೆ ಅಂಗೀಕಾರ ನೀಡಲಾಯಿತು. ಅಂದರೆ, ಕೇವಲ 4 ನಿಮಿಷದೊಳಗೆ ಮಸೂದೆಯನ್ನು ಮಂಡನೆ ಮಾಡಿ ಅನುಮೋದನೆ ನೀಡಲಾಗಿದೆ. ನಂತರ ರಾಜ್ಯಸಭೆಯಲ್ಲಿ ಚುಟುಕು ಚರ್ಚೆಯೊಂದಿಗೆ ಅನುಮೋದನೆ ನೀಡಲಾಯಿತು. ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಮಸೂದೆಗೆ ಸರ್ವ ಪಕ್ಷಗಳ ಒಪ್ಪಿಗೆ ಎಂದು ಸೂಚಿಸಿದರು. ಆದರೆ, ಲೋಕಸಭೆಯಲ್ಲಿ ಚರ್ಚೆ ನಡೆಸದ ಕಾರಣ ವಿರೋಧ ಪಕ್ಷಗಳ ನಾಯಕರು ವಿರೋಧ ವ್ಯಕ್ತಪಡಿಸಿದರು. ಕೃಷಿ ಉತ್ಪನ್ನಗಳಿಗೆ 'ಕನಿಷ್ಠ ಬೆಂಬಲ ಬೆಲೆ' ನಿಗದಿಗೆ ಕಾನೂನು ರಚಿಸುವುದನ್ನು ತಪ್ಪಿಸಿಕೊಳ್ಳುವ ಸಲುವಾಗಿ ಸರ್ಕಾರವು ಚರ್ಚೆಯಿಂದ ನುಣುಚಿಕೊಂಡಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ರೈತ ಸಂಘಟನೆಗಳು ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಘೋಷಿದ ನಂತರವೂ ಬೆಂಬಲ ಬೆಲೆಗೆ ಕಾನೂನು ತರಲು ಬೇಡಿಕೆ ಇಟ್ಟಿವೆ. ಪ್ರಧಾನಿ ನರೇಂದ್ರ ಮೋದಿಯವರು ಗುರುನಾನಕ್ ಜಯಂತಿಯಂದು ರೈತರು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವಂತ ಮೂರು ಕೃಷಿ ಮಸೂದೆಗಳನ್ನು ವಾಪಾಸ್ ಪಡೆಯುವುದಾಗಿ ಘೋಷಿಸಿದ್ದರು. ಈ ಬಳಿಕ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮೂರು ಕೃಷಿ ಮಸೂದೆಗಳನ್ನು ವಾಪಾಸ್ ಪಡೆಯುವ ಮಸೂದೆಗೆ ಒಪ್ಪಿಗೆ ಸೂಚಿಸಲಾಗಿತ್ತು.