ಸಾವಿರ ಪರದೆಗಳಲ್ಲಿ 'ಭಜರಂಗಿ 2'; ಮಾರ್ನಿಂಗ್ ಶೋ ನೋಡಲು ಅಭಿಮಾನಿಗಳ ಸಂಭ್ರಮ

ಶಿವರಾಜ್‌ಕುಮಾರ್‌ ಮತ್ತು ಎ. ಹರ್ಷ ಕಾಂಬಿನೇಷನ್‌ನ ‘ಭಜರಂಗಿ 2’ ಸಿನಿಮಾ ಇಂದು ರಿಲೀಸ್‌ ಆಗುತ್ತಿದ್ದು, ಸಿನಿಮಾ ಬಿಡುಗಡೆಯ ತಯಾರಿ ಬಗ್ಗೆ ನಿರ್ಮಾಪಕ ಜಯಣ್ಣ ಲವಲವಿಕೆ ಜತೆ ಮಾತನಾಡಿದ್ದಾರೆ.

ಸಾವಿರ ಪರದೆಗಳಲ್ಲಿ 'ಭಜರಂಗಿ 2'; ಮಾರ್ನಿಂಗ್ ಶೋ ನೋಡಲು ಅಭಿಮಾನಿಗಳ ಸಂಭ್ರಮ
Linkup
(ಹರೀಶ್‌ ಬಸವರಾಜ್‌) ಸ್ಯಾಂಡಲ್‌ವುಡ್‌ನಲ್ಲಿ ಕಳೆದೆರಡು ವಾರಗಳಿಂದ ಹಬ್ಬದ ವಾತಾವರಣ ಮೂಡಿದೆ. ಬಿಡುಗಡೆಯಾದ ಎರಡೂ ಸಿನಿಮಾಗಳು ಭರ್ಜರಿ ಕಲೆಕ್ಷನ್‌ ಮಾಡುತ್ತಿವೆ. ಇಂದು (ಅ.29)ಕೂಡ ಮತ್ತೊಂದು ಬಹು ನಿರೀಕ್ಷೆಯ ಸಿನಿಮಾ ಬಿಡುಗಡೆಯಾಗಿದೆ. ನಿರ್ಮಾಪಕ ಜಯಣ್ಣ ಅವರು ಹೇಳುವ ಪ್ರಕಾರ ವಿದೇಶಗಳಲ್ಲೂಸೇರಿ ಒಟ್ಟು 1000 ತೆರೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಿದೆ. ಎಲ್ಲೆಲ್ಲಿ ಸಿನಿಮಾ ರಿಲೀಸ್ ಆಗತ್ತೆ? ಬೆಳಿಗ್ಗೆ 5 ಘಂಟೆಗೆ ಜೆಪಿ ನಗರದ ಸಿದ್ದೇಶ್ವರ ಚಿತ್ರಮಂದಿರದಲ್ಲಿ '' ಶೋ ಆರಂಭವಾಗಿದೆ. ಗೌಡನ ಪಾಳ್ಯ ಶ್ರೀನಿವಾಸ ಥಿಯೇಟರ್‌ನಲ್ಲಿ ಬೆಳಿಗ್ಗೆಯೇ ಸಿನಿಮಾ ಆರಂಭವಾಗಿದೆ. ಗಾಂಧಿನಗರದ ಅನುಪಮ ಚಿತ್ರಂಮದಿರದಲ್ಲಿ 10.30ಕ್ಕೆ ಶೋ ಆರಂಭ ಆಗಲಿದೆ. ಈಗಾಗಲೇ ಅಭಿಮಾನಿಗಳ ಸಂಭ್ರಮ ಶುರುವಾಗಿದ್ದು, ಥಿಯೇಟರ್‌ನಲ್ಲಿ ಜನಜಂಗುಳಿ ಕಾಣಬಹುದು. 'ಟಗರು' ಸಿನಿಮಾ ನಂತರದಲ್ಲಿ ನಟ ವಸಿಷ್ಠ ಸಿಂಹ ಮಾರ್ನಿಂಗ್ ಶೋ ನೋಡಲು ಚಿತ್ರಮಮಂದಿರಕ್ಕೆ ಬಂದಿದ್ದಾರೆ. ಪರದೇಶದಲ್ಲಿಯೂ ಸಿನಿಮಾ ರಿಲೀಸ್ ಆಗುತ್ತಿದೆ ‘ಭಜರಂಗಿ ಸಿನಿಮಾ ಕರ್ನಾಟಕದ 350 ಚಿತ್ರಮಂದಿಗಳಲ್ಲಿ ಬಿಡುಗಡೆಯಾಗುತ್ತಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣಗಳಲ್ಲಿ350 ತೆರೆಗಳಲ್ಲಿ ಬಿಡುಗಡೆಯಾಗುತ್ತಿದೆ. ಭಾರತದ ಇತರೆ ಪ್ರದೇಶಗಳಲ್ಲಿ 150ರಿಂದ 200 ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಆರಂಭಿಸಲಿದೆ. ಅಬುದಾಭಿ, ಒಮಾನ್‌, ದುಬೈ, ಬಹ್ರೇನ್‌, ಸೇರಿದಂತೆ ಅರಬ್‌ ದೇಶಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಮುಂದಿನ ವಾರ ಅಮೆರಿಕ, ಇಂಗ್ಲೆಂಡ್‌ ದೇಶಗಳಲ್ಲಿ ಸಿನಿಮಾ ತೆರೆ ಕಾಣಲಿದೆ’ ಎಂದು ಮಾಹಿತಿ ನೀಡಿದರು ಜಯಣ್ಣ. ಆ್ಯಕ್ಷನ್‌ ಫ್ಯಾಂಟಸಿ ಸಿನಿಮಾ 'ಭಜರಂಗಿ 2' ‘ಭಜರಂಗಿ 2 ಸಿನಿಮಾದಲ್ಲಿ ಎಲ್ಲವೂ ಇವೆ. ಆ್ಯಕ್ಷನ್‌ ಫ್ಯಾಂಟಸಿ ಸಿನಿಮಾ ಇದು. ಹಾಲಿವುಡ್‌ ಸಿನಿಮಾ ನೋಡಿ ಖುಷಿ ಪಡುತ್ತಿದ್ದವರಿಗಾಗಿ ನಮ್ಮಲ್ಲೇ ಅಂತಹ ಸಿನಿಮಾ ಬರುತ್ತಿದೆ. ನಿರ್ದೇಶಕ ಎ ಹರ್ಷ ಸೇರಿದಂತೆ ಇಡೀ ತಂಡದ ಕೆಲಸ ಅದ್ಭುತವಾಗಿ ಮೂಡಿಬಂದಿದೆ. ಶಿವಣ್ಣ ಅವರನ್ನು ತೆರೆಮೇಲೆ ನೋಡುವುದೇ ಒಂದು ಚೆಂದ. ಈ ಸಿನಿಮಾದಲ್ಲಿ ಸಮಾಜಕ್ಕೆ ಒಂದೊಳ್ಳೆ ಸಂದೇಶವೂ ಇದೆ. ಭಾರತೀಯ ಚಿತ್ರರಂಗದ ಖ್ಯಾತ ತಂತ್ರಜ್ಞ ತಪಸ್‌ ನಾಯಕ್‌ ಸೌಂಡ್‌ ಕೆಲಸ ಮಾಡಿದ್ದಾರೆ. ವಿಎಫ್‌ಎಕ್ಸ್‌ ಎಲ್ಲವೂ ಭರ್ಜರಿಯಾಗಿವೆ. ಹಾಗಾಗಿ ಜನ ಈ ಸಿನಿಮಾವನ್ನು ಚಿತ್ರಮಂದಿರದಲ್ಲಿಯೇ ನೋಡಬೇಕು ಎಂದು ನಾನು ಹೇಳುತ್ತೇನೆ’ ಎಂದು ಜಯಣ್ಣ. ದೊಡ್ಡ ತಾರಾಗಣ ಈ ಸಿನಿಮಾದಲ್ಲಿದೆ ಜಯಣ್ಣ ಫಿಲ್ಮ್ಸ್ ಬ್ಯಾನರ್‌ನಡಿ ಈ ಸಿನಿಮಾವನ್ನು ಜಯಣ್ಣ ಮತ್ತು ಭೋಗೇಂದ್ರ ನಿರ್ಮಾಣ ಮಾಡಿದ್ದಾರೆ. ಮಮತಾ ಜಯಣ್ಣ ಮತ್ತು ಪದ್ಮಾ ಭೋಗೇಂದ್ರ ಸಹನಿರ್ಮಾಪಕರಾಗಿದ್ದಾರೆ. ಡಾ ಶಿವರಾಜ್‌ಕುಮಾರ್‌ಗೆ ಜೋಡಿಯಾಗಿ ಭಾವನಾ ಮೆನನ್‌ ನಟಿಸಿದ್ದಾರೆ. ಶಿವರಾಜ್‌ ಕೆ. ಆರ್‌. ಪೇಟೆ, ಭಜರಂಗಿ ಲೋಕಿ, ಚೆಲುವರಾಜ್‌, ಶ್ರುತಿ, ಸೇರಿದಂತೆ ದೊಡ್ಡ ತಾರಾಗಣ ಈ ಸಿನಿಮಾದಲ್ಲಿದೆ. ಬಹಳ ಇಷ್ಟಪಟ್ಟು ಈ ಸಿನಿಮಾ ಮಾಡಿದ್ದೇವೆ. ಕ್ವಾಲಿಟಿ ಮೇಕಿಂಗ್‌ ಮತ್ತು ಕ್ವಾಲಿಟಿ ಕಥೆ ಸಿನಿಮಾದಲ್ಲಿದ್ದು, ಹಣ ಕೊಟ್ಟು ಚಿತ್ರಮಂದಿರದೊಳಗೆ ಬರುವ ಜನರಿಗೆ ಮೋಸವಾಗುವುದಿಲ್ಲ ಎಂದು ಹೇಳಿದ್ದಾರೆ ಜಯಣ್ಣ