ಸ್ವಧರ್ಮದ ಬಗೆಗಿನ ಹೆಮ್ಮೆ ಮತಾಂತರ ತಪ್ಪಿಸಬಲ್ಲದು: ಮೋಹನ್ ಭಾಗವತ್!

ಧಾರ್ಮಿಕ ಮತಾಂತರವನ್ನು ಒಂದು ಸಾಮಾಜಿಕ ಪಿಡುಗು ಎಂದು ಕರೆದಿರುವ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಹಿಂದೂ ಯುವಕ-ಯುವತಿಯರಲ್ಲಿ ಸ್ವಧರ್ಮದ ಬಗ್ಗೆ ಹೆಮ್ಮೆ ಮೂಡಿಸುವ ಮೂಲಕ ಅವರನ್ನು ಮತಾಂತರದಿಂದ ರಕ್ಷಿಸಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸ್ವಧರ್ಮದ ಬಗೆಗಿನ ಹೆಮ್ಮೆ ಮತಾಂತರ ತಪ್ಪಿಸಬಲ್ಲದು: ಮೋಹನ್ ಭಾಗವತ್!
Linkup
ಹಲ್ದ್ವಾನಿ: ಧಾರ್ಮಿಕ ಮತಾಂತರವನ್ನು ಒಂದು ಸಾಮಾಜಿಕ ಪಿಡುಗು ಎಂದು ಕರೆದಿರುವ ಆರ್‌ಎಸ್‌ಎಸ್ ಮುಖ್ಯಸ್ಥ , ಹಿಂದೂ ಯುವಕ-ಯುವತಿಯರಲ್ಲಿ ಸ್ವಧರ್ಮದ ಬಗ್ಗೆ ಹೆಮ್ಮೆ ಮೂಡಿಸುವ ಮೂಲಕ ಅವರನ್ನು ಮತಾಂತರದಿಂದ ರಕ್ಷಿಸಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಉತ್ತರಾಖಂಡ್‌ನ ಹಲ್ದ್ವಾನಿಯಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರು ಮತ್ತು ಅವರ ಕುಟುಂಬಸ್ಥರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಭಾಗವತ್, ಸ್ವಧರ್ಮದ ಬಗೆಗಿನ ಹೆಮ್ಮೆ ಮತಾಂತರವನ್ನು ತಡೆಯಬಲ್ಲದು ಎಂದು ಹೇಳಿದರು. ಹೇಗೆ ನಡೆಯುತ್ತದೆ? ಮತಾಂತರಕ್ಕೆ ಕಾರಣಗಳೇನು? ಕೇವಲ ಮದುವೆಗಾಗಿ ನಮ್ಮ ಹಿಂದೂ ಯುವಕ ಯುವತಿಯರು ಬೇರೊಂದು ಧರ್ಮವನ್ನು ಅಪ್ಪಿಕೊಳ್ಳುತ್ತಾರೆ ಎಂದರೆ ಅದು ತಪ್ಪಲ್ಲವೇ? ಎಂದು ಮೋಹನ್ ಭಾಗವತ್ ಪ್ರಶ್ನಿಸಿದರು. ಅಲ್ಲದೇ ನಮ್ಮ ಸನಾತನ ಧರ್ಮದ ಬಗೆಗಿನ ನಮ್ಮ ಮಕ್ಕಳ ಜ್ಞಾನವನ್ನು ಹೆಚ್ಚಿಸುವುದು ನಮ್ಮ ಕರ್ತವ್ಯ ಎಂಬುದನ್ನು ಮರೆಯಬಾರದು ಎಂದು ಭಾಗವತ್ ಕಿವಿಮಾತು ಹೇಳಿದರು. ಯುವಪೀಳಿಗೆಗೆ ನಮ್ಮ ಸನಾತನ ಧರ್ಮದ ಮಹತ್ವ, ಶ್ರೀಮಂತ ಸಂಸ್ಕೃತಿಯ ಇತಿಹಾಸ, ನಮ್ಮ ಪೂಜಾ ವಿಧಾನಗಳ ಬಗ್ಗೆ ಮಾಹಿತಿ ನೀಡುವುದು ನಮ್ಮ ಕರ್ತವ್ಯ. ಯುವಪೀಳಿಗೆ ಕೂಡ ಕ್ಷುಲ್ಲಕ ಕಾರಣಗಳಿಗೆ ಬೇರೊಂದು ಧರ್ಮದತ್ತ ಚಿತ್ತಹರಿಸದೇ, ನಮ್ಮ ಧರ್ಮದ ಸಾರವನ್ನು ಅರಿತು ಹೆಜ್ಜೆ ಇಡಬೇಕು ಎಂದು ಭಾಗವತ್ ಕಿವಿಮಾತು ಹೇಳಿದರು. ಮತಾಂತರ ಯಾರೂ ಮಾಡಿದರೂ ಅದು ತಪ್ಪೇ. ವ್ಯಕ್ತಿಗೆ ಧಾರ್ಮಿಕ ಆಯ್ಕೆಯ ಸ್ವಾತಂತ್ರ್ಯವನ್ನು ನಮ್ಮ ಸಂವಿಧಾನ ನೀಡಿದೆ. ಆದರೆ ಬಲವಂತದ ಮತಾಂತರ ಒಪ್ಪಲ ಸಾಧ್ಯವಿಲ್ಲ ಎಂದು ಭಾಗವತ್ ಖಡಕ್ ಆಗಿ ಹೇಳಿದರು. ಧರ್ಮದ ಬಗೆಗಿನ ಜ್ಞಾನಾರ್ಜನೆ ಈ ಸಾಮಾಜಿಕ ಪಿಡುಗಿನಿಂದ ಮುಕ್ತಿ ಹೊಂದಲು ಇರುವ ಮಾರ್ಗ ಎಂದ ಭಾಗವತ್ ಅಭಿಪ್ರಾಯಪಟ್ಟರು. ಸಾಂಪ್ರದಾಯಿಕ ಕುಟುಂಬ ಮೌಲ್ಯಗಳು ಮತ್ತು ಸಂಪ್ರದಾಯಗಳನ್ನು ಸಂರಕ್ಷಿಸುವ ಕುರಿತು ಮನೆ ಮನೆಗಳಲ್ಲೂ ಗಂಭೀರ ಚರ್ಚೆ ನಡೆಯಬೇಕು. ಭಾರತೀಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದು, ಮನೆಯಲ್ಲಿ ಬೆಳೆದ ಆಹಾರವನ್ನು ಸೇವಿಸುವುದು, ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸುವ ಪರಿಪಾಠವನ್ನು ಮಕ್ಕಳಲ್ಲಿ ನಾವು ಬೆಳೆಸಬೇಕಿದೆ ಎಂದು ಭಾಗವತ್ ಸಲಹೆ ನೀಡಿದರು. ಭಾರತೀಯ ಸಂಸ್ಕೃತಿಯ ಬೇರುಗಳೊಂದಿಗೆ ಸದಾ ಸಂಪರ್ಕದಲ್ಲಿರಲು ಭಾಷೆ, ಆಹಾರ, ಭಕ್ತಿಗೀತೆಗಳು, ಪ್ರಯಾಣ, ಉಡುಗೆ ಮತ್ತು ಮನೆ ಎಎಂಬ ಆರು ಮಂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಅವಶ್ಯಕತೆಯಿದೆ ಎಂದು ಭಾಗವತ್ ಈ ವೇಳೆ ನುಡಿದರು.