ಪಕ್ಷದ ಖಾತೆ ಸೇರಿದಂತೆ ಕಾಂಗ್ರೆಸ್‌ನ 5,000 ಟ್ವಿಟ್ಟರ್‌ ಖಾತೆ ಬ್ಲಾಕ್‌?; ಕಾಂಗ್ರೆಸ್‌ ನಾಯಕರ ಆಕ್ರೋಶ

ಎಐಸಿಸಿ ಜಾಲತಾಣ ಮುಖ್ಯಸ್ಥ ರೋಹನ್‌ ಗುಪ್ತಾ ಸಹ ಟ್ವಿಟರ್‌ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದು, ದೇಶಾದ್ಯಂತ ನಮ್ಮ ಪಕ್ಷ ಹಾಗೂ ನಾಯಕರ ಐದು ಸಾವಿರ ಟ್ವಿಟರ್‌ ಖಾತೆಗಳನ್ನು ಅಮಾನತು ಮಾಡಲಾಗಿದೆ, ಇದು ಖಂಡನೀಯ ಎಂದಿದ್ದಾರೆ. ಆಗಸ್ಟ್‌ 1ರಂದು ದಿಲ್ಲಿಯ ಓಲ್ಡ್‌ ನಂಗಾಲ್‌ನಲ್ಲಿ ಬಾಲಕಿಯ ಅತ್ಯಾಚಾರಗೈದು, ಕೊಲೆ ಮಾಡಿದ ಹಿನ್ನೆಲೆಯಲ್ಲಿ ಬಾಲಕಿಯ ಕುಟುಂಬಸ್ಥರನ್ನು ಭೇಟಿಯಾಗಿದ್ದ ರಾಹುಲ್‌ ಗಾಂಧಿ, ಕುಟುಂಬ ಸದಸ್ಯರ ಜತೆಗಿನ ಫೋಟೊಗಳನ್ನು ಟ್ವೀಟ್‌ ಮಾಡಿದ್ದರು.

ಪಕ್ಷದ ಖಾತೆ ಸೇರಿದಂತೆ ಕಾಂಗ್ರೆಸ್‌ನ 5,000 ಟ್ವಿಟ್ಟರ್‌ ಖಾತೆ ಬ್ಲಾಕ್‌?; ಕಾಂಗ್ರೆಸ್‌ ನಾಯಕರ ಆಕ್ರೋಶ
Linkup
ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಅತ್ಯಾಚಾರ ಹಾಗೂ ಕೊಲೆಗೀಡಾದ ಬಾಲಕಿಯ ಕುಟುಂಬಸ್ಥರ ಫೋಟೋಗಳನ್ನು ಟ್ವೀಟ್‌ ಮಾಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಟ್ವಿಟರ್‌ ಖಾತೆ ಬ್ಲಾಕ್‌ ಮಾಡಿದ ಬೆನ್ನಲ್ಲೇ ಈಗ ಪಕ್ಷದ ಖಾತೆಯನ್ನೂ ಟ್ವಿಟರ್‌ ಅಮಾನತುಗೊಳಿಸಿದೆ. ಜತೆಗೆ, ಪಕ್ಷದ ನಾಯಕರು ಹಾಗೂ ಮುಖಂಡರ 5,000 ಅಮಾನತುಗೊಳಿಸಲಾಗಿದೆ ಎಂದು ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ. ಟ್ವಿಟರ್‌ ಖಾತೆ ಅಮಾನತುಗೊಳಿಸಿದ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ ಕಾಂಗ್ರೆಸ್‌, ನಮ್ಮ ನಾಯಕರನ್ನು ಜೈಲಿಗೆ ಕಳುಹಿಸಿದಾಗಲೇ ನಾವು ಹೆದರಿಲ್ಲ. ಈಗ ಟ್ವಿಟರ್‌ಗೆ ಹೆದರುವ ಪ್ರಶ್ನೆಯೇ ಇಲ್ಲ. ನಾವು ಜನರಿಗಾಗಿ ಹೋರಾಡುತ್ತೇವೆ, ಧ್ವನಿ ಎತ್ತುತ್ತೇವೆ. ಅತ್ಯಾಚಾರ ಸಂತ್ರಸ್ತೆಗೆ ನ್ಯಾಯ ಒದಗಿಸಲು ಧ್ವನಿ ಎತ್ತುವುದೇ ಅಪರಾಧ ಎಂದರೆ, ನಾವು ಅಂತಹ ನೂರು ಅಪರಾಧ ಮಾಡುತ್ತೇವೆ ಎಂದು ಹೇಳಿದೆ. ಅಖಿಲ ಭಾರತ ಕಾಂಗ್ರೆಸ್‌ ಸಮಿತಿ (ಎಐಸಿಸಿ) ಜಾಲತಾಣ ಮುಖ್ಯಸ್ಥ ರೋಹನ್‌ ಗುಪ್ತಾ ಸಹ ಟ್ವಿಟರ್‌ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದು, ದೇಶಾದ್ಯಂತ ನಮ್ಮ ಪಕ್ಷ ಹಾಗೂ ನಾಯಕರ ಐದು ಸಾವಿರ ಟ್ವಿಟರ್‌ ಖಾತೆಗಳನ್ನು ಅಮಾನತು ಮಾಡಲಾಗಿದೆ, ಇದು ಖಂಡನೀಯ ಎಂದಿದ್ದಾರೆ. ಆಗಸ್ಟ್‌ 1ರಂದು ದಿಲ್ಲಿಯ ಓಲ್ಡ್‌ ನಂಗಾಲ್‌ನಲ್ಲಿ ಬಾಲಕಿಯ ಅತ್ಯಾಚಾರಗೈದು, ಕೊಲೆ ಮಾಡಿದ ಹಿನ್ನೆಲೆಯಲ್ಲಿ ಬಾಲಕಿಯ ಕುಟುಂಬಸ್ಥರನ್ನು ಭೇಟಿಯಾಗಿದ್ದ ರಾಹುಲ್‌ ಗಾಂಧಿ, ಕುಟುಂಬ ಸದಸ್ಯರ ಜತೆಗಿನ ಫೋಟೊಗಳನ್ನು ಟ್ವೀಟ್‌ ಮಾಡಿದ್ದರು. ಅತ್ಯಾಚಾರಕ್ಕೀಡಾದ ಬಾಲಕಿಯ ಫೋಟೊ ಟ್ವೀಟ್‌ ಮಾಡುವ ಮೂಲಕ ಅವರ ಮಾಹಿತಿ ಬಹಿರಂಗಗೊಳಿಸಿದ ರಾಹುಲ್‌ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗ (ಎನ್‌ಸಿಪಿಸಿಆರ್‌)ವು ಟ್ವಿಟರ್‌ಗೆ ನೋಟಿಸ್‌ ನೀಡಿತ್ತು. ಇದಾದ ಬಳಿಕ ಆಗಸ್ಟ್‌ ಒಂಬತ್ತರಂದು ರಾಹುಲ್‌ ಗಾಂಧಿ ಖಾತೆಯನ್ನು ಟ್ವಿಟರ್‌ ಅಮಾನತುಗೊಳಿಸಿತ್ತು.