ಕನ್ನಡ ಸಿನಿಮಾಗಳಿಗೆ ಸಾಥ್ ನೀಡಿದ ತಮಿಳು ನಟ ವಿಜಯ್ ಸೇತುಪತಿ; ಯಾವ ಸಿನಿಮಾ?

ನಟ ವಿಜಯ್ ಸೇತುಪತಿ ಅವರು ಕನ್ನಡದ ಸಿನಿಮಾವೊಂದಕ್ಕೆ ಸಾಥ್ ನೀಡುತ್ತಿದ್ದಾರೆ. ದಶಕಗಳ ಹಿಂದೆ ಅವರು ಕನ್ನಡದ ಸಿನಿಮಾದಲ್ಲಿ ನಟಿಸಿದ್ದರು. ಯಾವ ಸಿನಿಮಾ? ಏನು ಕಥೆ? ಆ ಬಗ್ಗೆ ಮಾಹಿತಿ ಇಲ್ಲಿದೆ.

ಕನ್ನಡ ಸಿನಿಮಾಗಳಿಗೆ ಸಾಥ್ ನೀಡಿದ ತಮಿಳು ನಟ ವಿಜಯ್ ಸೇತುಪತಿ; ಯಾವ ಸಿನಿಮಾ?
Linkup
ತಮಿಳು ನಟ ವಿಜಯ್‌ ಸೇತುಪತಿ ಹಲವು ಹೊಸಬರ ತಂಡಕ್ಕೆ ಬೆಂಬಲವಾಗಿ ನಿಲ್ಲುತ್ತಾರೆ. ಈ ಹಿಂದೆ ಕನ್ನಡದ ಸಿನಿಮಾವೊಂದಕ್ಕೆ ತಮ್ಮ ಪ್ರೊಡಕ್ಷನ್‌ ಹೌಸ್‌ ಹೆಸರನ್ನು ನೀಡಿದ್ದ ಸೇತುಪತಿ ಈಗ ಮತ್ತೊಂದು ಕನ್ನಡ ಸಿನಿಮಾದ ಫಸ್ಟ್‌ ಲುಕ್‌ ಅನ್ನು ತಮ್ಮ ಸೋಷಿಯಲ್‌ ಮೀಡಿಯಾದ ಮೂಲಕ ಲಾಂಚ್‌ ಮಾಡಿದ್ದಾರೆ. ಗಣೇಶ್‌ ಹೆಗಡೆ ನಿರ್ದೇಶನ ಮಾಡಿರುವ 'ನೀಲಿ ಹಕ್ಕಿ' ಚಿತ್ರವನ್ನು ತಮ್ಮದೇ ನಿರ್ಮಾಣ ಸಂಸ್ಥೆಯಿಂದ ವಿಜಯ್ ಅರ್ಪಣೆ ಮಾಡಿದ್ದರು. 'ಕ್ರಿಮಿನಲ್' ಸಿನಿಮಾಕ್ಕೆ ಸಾಥ್ ‘ಐ ಆ್ಯಮ್‌ ಇನ್‌ ಲವ್‌’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಮಹೇಶ್‌ ಎಂಬವರ ಎರಡನೇ ಸಿನಿಮಾ ‘ಕ್ರಿಮಿನಲ್‌’. ಈ ಸಿನಿಮಾದ ಫಸ್ಟ್‌ ಲುಕ್‌ ಅನ್ನು ವಿಜಯ್‌ ಸೇತುಪತಿ ರಿಲೀಸ್‌ ಮಾಡಿದ್ದಾರೆ. ಮಿಸ್ಟ್ರಿ ಥ್ರಿಲ್ಲರ್‌ ಮಾದರಿಯ ಈ ಸಿನಿಮಾವನ್ನು ಎಲ್ಲ ಭಾಷೆಗಳಲ್ಲಿಯೂ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ. ಈ ತಂಡ ಇತ್ತೀಚಿಗೆ ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕರಾದ ಕಲೈಪುಲಿ ಎಸ್‌. ತಾನು ಅವರಿಂದ ಚಿತ್ರದ ಟೈಟಲ್ ಪೋಸ್ಟರ್‌ ಲಾಂಚ್‌ ಮಾಡಿಸಿತ್ತು. 'ಕ್ರಿಮಿನಲ್' ಸಿನಿಮಾ ಯಾರದ್ದು? ಪ್ರೇಕ್ಷಕರನ್ನು ಸೀಟಿನ ತುದಿಯಂಚಿನಲ್ಲಿ ಕೂರಿಸುವ ಕಥೆ, ಚಿತ್ರಕಥೆ ಸಿನಿಮಾದಲ್ಲಿದೆ ಎನ್ನಲಾಗಿದೆ. ಆರ್ಮುಗಂ ಎಂಬವರು ಈ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ. ತಮಿಳು, ಮಲಯಾಳಂ ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ದುಡಿದ ಅನುಭವ ಇರುವ ಇವರಿಗೆ ಇದು ಚೊಚ್ಚಲ ನಿರ್ದೇಶನದ ಸಿನಿಮಾ. ಚಿತ್ರೀಕರಣ ಪೂರ್ತಿಯಾಗಿ ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ಚಿತ್ರತಂಡ ನಿರತವಾಗಿದೆ. ಸದ್ಯದಲ್ಲೇ ಚಿತ್ರದ ಸ್ಪೆಷಲ್ ಪೋಸ್ಟರ್‌ ಒಂದನ್ನು ಸ್ಪೆಷಲ್ ಆಗಿ ಬಿಡುಗಡೆ ಮಾಡಲು ಪ್ಲ್ಯಾನ್‌ ಮಾಡಿಕೊಂಡಿದೆ. ಚಿತ್ರದಲ್ಲಿ ನಾಯಕಿಯರಾಗಿ ಜಾನ್ವಿ ಹಾಗೂ ಫೆಸ್ಸಿ ಎಂಬವರು ನಟಿಸಿದ್ದಾರೆ. ಕನ್ನಡದಲ್ಲಿ ನಟಿಸಲು ವಿಜಯ್ ಸೇತುಪತಿಗೆ ಆಫರ್ ವಿಜಯ್ ಸೇತುಪತಿ ಅವರು ಕನ್ನಡದ 'ಅಖಾಡ' ಸಿನಿಮಾದಲ್ಲಿ ನಟಿಸಿದ್ದರು. ತಮಿಳು ಭಾಷೆಯಲ್ಲಿ ಇಲ್ಲದ ಸಾಕಷ್ಟು ಅಕ್ಷರಗಳು, ಕಾಗುಣಿತಗಳು ಕನ್ನಡದಲ್ಲಿವೆ. ಅದನ್ನು ಕಲಿತೇ ಹೇಳಬೇಕು ಎಂದು ವಿಜಯ್ ಪ್ರಯತ್ನಪಟ್ಟಿದ್ದರು. ಈ ಸಿನಿಮಾ ತೆರೆಕಂಡು ದಶಕ ಕಳೆದಿವೆ. ಎರಡು ವರ್ಷಗಳ ಹಿಂದೆ ಕನ್ನಡದಲ್ಲಿ ನಟಿಸಲು ಅವಕಾಶ ಬಂದಿದ್ದರೂ ಕೂಡ ಡೇಟ್ಸ್ ಸಮಸ್ಯೆಯಿಂದ ನಟಿಸಲು ಆಗಿರಲಿಲ್ಲವಂತೆ. ಶಿವಮೊಗ್ಗ, ಬೆಂಗಳೂರಿನ ಬಗ್ಗೆ ವಿಜಯ್ ಸೇತುಪತಿ ಮೆಚ್ಚುಗೆ ಕನ್ನಡ, ಕರ್ನಾಟಕದ ಬಗ್ಗೆ ವಿಜಯ್ ಸೇತುಪತಿಗೆ ಒಲವಿದೆ. ಇತ್ತೀಚೆಗೆ ಬೆಂಗಳೂರಿಗೆ ಬಂದಾಗ ಅವರು 'ಅಖಾಡ' ಸಿನಿಮಾ ಡೈಲಾಗ್ ಹೇಳಿದ್ದರು. ಕಬ್ಬನ್ ಪಾರ್ಕ್, ಶಿವಮೊಗ್ಗದ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸದ್ಯ ವಿಜಯ್ ಸೇತುಪತಿ ಅವರು ತೆಲುಗು, ತಮಿಳು ಚಿತ್ರರಂಗದಲ್ಲಿ ಭಾರೀ ಬೇಡಿಕೆಯಿದೆ. ಹೀರೋ, ಖಳನಾಯಕನ ಪಾತ್ರವನ್ನು ಅವರು ಸಲೀಸಾಗಿ ಮಾಡಿಕೊಂಡು ಹೋಗುತ್ತಿದ್ದಾರೆ. ಮಗಳ ಪಾತ್ರ ಮಾಡಿದ ನಟಿ ಜೊತೆ ರೊಮ್ಯಾನ್ಸ್ ಮಾಡಲಾರೆ: ವಿಜಯ್ ಸೇತುಪತಿ ಸದ್ಯ ವಿಜಯ್ ಸೇತುಪತಿ ನಟನೆಯ 12ಕ್ಕೂ ಅಧಿಕ ಸಿನಿಮಾಗಳು ರಿಲೀಸ್ ಆಗಬೇಕಿವೆ. ಕೆಲ ಸಿನಿಮಾಗಳಲ್ಲಿ ಅವರು ಅತಿಥಿ ಪಾತ್ರ ಮಾಡುತ್ತಿದ್ದಾರೆ. . 'ಉಪ್ಪೆನ' ಸಿನಿಮಾದಲ್ಲಿ ನಟಿ ಕೃತಿ ಶೆಟ್ಟಿಯ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟ ವಿಜಯ್ ಸೇತುಪತಿ ಅವರು, ಇನ್ನೊಂದು ಸಿನಿಮಾದಲ್ಲಿ ಕೃತಿ ಶೆಟ್ಟಿ ನಾಯಕಿ ಆಗಿ ಆಯ್ಕೆ ಮಾಡಿಕೊಳ್ಳುತ್ತೀವಿ ಎಂದಾಗ ಅವರು 'ಮಗಳ ಪಾತ್ರ ಮಾಡಿದ ನಟಿ ಜೊತೆ ರೊಮ್ಯಾನ್ಸ್ ಮಾಡಲಾರೆ' ಎಂದು ಹೇಳಿದ್ದರು.