ಸರಕಾರದ ಡಿಜಿಟಲ್‌ ಕರೆನ್ಸಿ 2022ಕ್ಕೆ ಪ್ರಾಯೋಗಿಕ ಬಿಡುಗಡೆ - ಆರ್‌ಬಿಐ ಹಿರಿಯ ಅಧಿಕಾರಿ

ಆರ್‌ಬಿಐ ಮುಂದಿನ ವರ್ಷ ತನ್ನ ಮೊದಲ ಡಿಜಿಟಲ್‌ ಕರೆನ್ಸಿಯನ್ನು ಬಿಡುಗಡೆಗೊಳಿಸುವ ನಿರೀಕ್ಷೆ ಇದೆ. ಮುಂದಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಪ್ರಾಯೋಗಿಕವಾಗಿ ಕರೆನ್ಸಿ ಬಿಡುಗಡೆಯಾಗಲಿದೆ ಎಂದು ಹಿರಿಯ ಕೇಂದ್ರೀಯ ಬ್ಯಾಂಕ್‌ನ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸರಕಾರದ ಡಿಜಿಟಲ್‌ ಕರೆನ್ಸಿ 2022ಕ್ಕೆ ಪ್ರಾಯೋಗಿಕ ಬಿಡುಗಡೆ - ಆರ್‌ಬಿಐ ಹಿರಿಯ ಅಧಿಕಾರಿ
Linkup
ಮುಂಬೈ: ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ () ಮುಂದಿನ ವರ್ಷ ತನ್ನ ಮೊದಲ ಡಿಜಿಟಲ್‌ ಕರೆನ್ಸಿಯನ್ನು ಬಿಡುಗಡೆಗೊಳಿಸುವ ನಿರೀಕ್ಷೆ ಇದೆ. ಭಾರತೀಯ ರಿಸರ್ವ್ ಬ್ಯಾಂಕ್‌ನ ಡಿಜಿಟಲ್ ಕರೆನ್ಸಿಯು ಮುಂದಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಪ್ರಾಯೋಗಿಕವಾಗಿ ಬಿಡುಗಡೆಯಾಗಲಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ‘ಬ್ಯಾಂಕಿಂಗ್ ಮತ್ತು ಎಕನಾಮಿಕ್ ಕಾನ್‌ಕ್ಲೇವ್‌’ನಲ್ಲಿ ಹಿರಿಯ ಕೇಂದ್ರೀಯ ಬ್ಯಾಂಕ್‌ನ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ. ''2022ರ ಜನವರಿ - ಮಾರ್ಚ್ ಅವಧಿಯಲ್ಲಿ ಪ್ರಾಯೋಗಿಕವಾಗಿ ಆರ್‌ಬಿಐ ತನ್ನ ಡಿಜಿಟಲ್‌ ಕರೆನ್ಸಿಯನ್ನು ಬಿಡುಗಡೆಗೊಳಿಸುವ ಸಾಧ್ಯತೆ ಇದೆ," ಎಂದು ಆರ್‌ಬಿಐನ ಪೇಮೆಂಟ್‌ ಆ್ಯಂಡ್‌ ಸೆಟ್ಲ್‌ಮೆಂಟ್‌ ವಿಭಾಗದ ಹಿರಿಯ ಅಧಿಕಾರಿ ಪಿ. ವಾಸುದೇವನ್‌ ಹೇಳಿರುವುದಾಗಿ ವರದಿಯಾಗಿದೆ. ಸೆಂಟ್ರಲ್‌ ಬ್ಯಾಂಕ್‌ (ಸಿಬಿಡಿಸಿ) ಕರೆನ್ಸಿಯ ವರ್ಚುವಲ್‌ ರೂಪವಾಗಿದ್ದು, ಇದರ ಬಿಡುಗಡೆ ಬಗ್ಗೆ ಅಧಿಕೃತ ವೇಳಾಪಟ್ಟಿ ನಿಗದಿಯಾಗಿಲ್ಲ. ಸಿಬಿಡಿಸಿ ಎಂಬುದು ಸಾಮಾನ್ಯ ಸಂಗತಿಯಲ್ಲ. ಅವಸರದಲ್ಲಿ ಇದರ ಬಿಡುಗಡೆ ಅಸಾಧ್ಯ. ಎಲ್ಲ ಆಯಾಮಗಳಲ್ಲೂ ಸಿದ್ಧತೆಗಳನ್ನು ಮಾಡುವುದು ಅನಿವಾರ್ಯ ಎಂದು ವಾಸುದೇವನ್‌ ಹೇಳಿದ್ದಾರೆ. ಡಿಜಿಟಲ್‌ ಕರೆನ್ಸಿಯ ನಿಯಂತ್ರಣದ ಸ್ವರೂಪದ ಬಗ್ಗೆಯೂ ಪರಾಮರ್ಶೆ ನಡೆಯುತ್ತಿದೆ. ಕ್ರಿಪ್ಟೋ ಕರೆನ್ಸಿಗಳು ಹಣಕಾಸು ಸ್ಥಿರತೆಗೆ ಅಡ್ಡಿ ಮಾಡಬಹುದು ಎಂಬ ಕಳವಳವನ್ನು ಆರ್‌ಬಿಐ ಹಲವು ಸಲ ವ್ಯಕ್ತಪಡಿಸಿದೆ. ಏನಿದು ಆರ್‌ನಿಐ ಡಿಜಿಟಲ್‌ ಕರೆನ್ಸಿ? ಈಗ ಚಲಾವಣೆಯಲ್ಲಿರುವ ಕರೆನ್ಸಿ ರೂಪಾಯಿಗೆ ಪರ್ಯಾಯವಾಗಿ ಬಳಸಬಹುದಾದ ವರ್ಚುವಲ್‌ ಕರೆನ್ಸಿಯೇ ಡಿಜಿಟಲ್‌ ಕರೆನ್ಸಿ. ಸೆಂಟ್ರಲ್‌ ಬ್ಯಾಂಕ್‌ ಡಿಜಿಟಲ್‌ ಕರೆನ್ಸಿಯನ್ನು (ಸಿಬಿಡಿಸಿ) ಚಲಾವಣೆಗೆ ತರಲು ಆರ್‌ಬಿಐ ಸಜ್ಜಾಗುತ್ತಿದೆ. ವ್ಯತ್ಯಾಸವೇನು? ಇದು ಬಿಟ್‌ ಕಾಯಿನ್‌ ಮಾದರಿಯ ಅಲ್ಲ. ಬಿಟ್‌ ಕಾಯಿನ್‌ ಡಿಜಿಟಲ್‌ ದತ್ತಾಂಶಗಳೊಂದಿಗೆ ಸ್ಟೋರ್‌ ಆಗಿರುತ್ತದೆ. ಹಾಗೂ ವಿಕೇಂದ್ರೀಕರಣವಾಗಿರುತ್ತದೆ. ಹಾಗೂ ಯಾವುದೇ ಸರಕಾರಿ ನಿಯಂತ್ರಕ ವ್ಯವಸ್ಥೆಗೆ ಸಂಬಂಧಿಸಿರುವುದಿಲ್ಲ. ಮತ್ತೊಂದು ಕಡೆ ಆರ್‌ಬಿಐ ಡಿಜಿಟಲ್‌ ಕರೆನ್ಸಿ (ಸಿಬಿಡಿಸಿ) ಸರಕಾರದ ಮಾನ್ಯತೆ ಗಳಿಸಿರುತ್ತದೆ. ಪ್ರಯೋಜನವೇನು? ಕಾಗದದ ನೋಟುಗಳ ಮೇಲಿನ ಅವಲಂಬನೆ ಕಡಿಮೆಯಾಗಲಿದೆ. ಹಣಕಾಸು ವರ್ಗಾವಣೆ ತಂತ್ರಜ್ಞಾನದ ನೆರವಿನಿಂದ ಮತ್ತಷ್ಟು ಸುಗಮವಾಗಲಿದೆ. ಜತೆಗೆ ಖಾಸಗಿ ಕ್ರಿಪ್ಟೊ ಕರೆನ್ಸಿಗಳಿಗೆ ಪರ್ಯಾಯವಾಗಿ ಡಿಜಿಟಲ್‌ಕರೆನ್ಸಿಯನ್ನು ಚಲಾವಣೆಗೊಳಿಸಬಹುದು. ಕ್ರಿಪ್ಟೊ ಬಗ್ಗೆ ಅಂತಾರಾಷ್ಟ್ರೀಯ ಸಹಕಾರಕ್ಕೆ ಪ್ರಧಾನಿ ಮೋದಿ ಕರೆ ಕ್ರಿಪ್ಟೊ ಕರೆನ್ಸಿಗಳ ಬಗ್ಗೆ ಎಲ್ಲ ಪ್ರಜಾಸತ್ತಾತ್ಮಕ ರಾಷ್ಟ್ರಗಳು ಸಂಘಟಿತವಾಗಿ ಕಾರ್ಯಪ್ರವೃತ್ತವಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೈಬರ್‌ ತಂತ್ರಜ್ಞಾನ ಕುರಿತ ಸಿಡ್ನಿ ಡೈಲಾಗ್‌ ವಾರ್ಷಿಕ ಶೃಂಗವನ್ನು ಉದ್ದೇಶಿಸಿ ಕರೆ ನೀಡಿದ್ದಾರೆ. ಡಿಜಿಟಲ್‌ ಕರೆನ್ಸಿಗಳ ನಿಯಂತ್ರಣಕ್ಕೆ ಸರಕಾರ ಆಲೋಚಿಸುತ್ತಿದೆ. ಡಿಜಿಟಲ್‌ ಯುಗವು ರಾಜಕೀಯ, ಆರ್ಥಿಕತೆ, ಸಮಾಜದ ಮೇಲೆ ಪ್ರಭಾವ ಬೀರುತ್ತಿದೆ. ಹೀಗಿರುವಾಗ ಬಿಟ್‌ ಕಾಯಿನ್‌ ರೀತಿಯ ಕ್ರಿಪ್ಟೊ ಕರೆನ್ಸಿಗಳು ದುಷ್ಟರ ಕೈಸೇರದಂತೆ ಅಂತಾರಾಷ್ಟ್ರೀಯ ಸಹಕಾರ ಅಗತ್ಯ ಎಂದರು.