2016ರ ನೋಟು ಅಮಾನ್ಯತೆ ನಂತರ ವಸತಿ ಮಾರುಕಟ್ಟೆಯಲ್ಲಿ ಕಪ್ಪುಹಣದ ಬಳಕೆ ಇಳಿಕೆ!

​​ಕಳೆದ 2016ರ ನವೆಂಬರ್‌ 8ರಂದು ಘೋಷಣೆಯಾದ ನೋಟು ಅಮಾನ್ಯತೆಯ ನಂತರ ಪ್ರಾಥಮಿಕ ವಸತಿ ಮಾರುಕಟ್ಟೆಯಲ್ಲಿ ಕಪ್ಪುಹಣದ ಚಲಾವಣೆಯಲ್ಲಿ ಕನಿಷ್ಠ ಶೇ.75-80 ಇಳಿಕೆಯಾಗಿದೆ ಎಂದು ಹೌಸಿಂಗ್‌ ಬ್ರೋಕರೇಜ್‌ ಸಂಸ್ಥೆ ಅನಾರಾಕ್‌ ವರದಿ ತಿಳಿಸಿದೆ.

2016ರ ನೋಟು ಅಮಾನ್ಯತೆ ನಂತರ ವಸತಿ ಮಾರುಕಟ್ಟೆಯಲ್ಲಿ ಕಪ್ಪುಹಣದ ಬಳಕೆ ಇಳಿಕೆ!
Linkup
ಹೊಸದಿಲ್ಲಿ: ಕಳೆದ 2016ರ ನವೆಂಬರ್‌ 8ರಂದು ಘೋಷಣೆಯಾದ ನೋಟು ಅಮಾನ್ಯತೆಯ ನಂತರ ಪ್ರಾಥಮಿಕ ಮಾರುಕಟ್ಟೆಯಲ್ಲಿ ಕಪ್ಪುಹಣದ ಚಲಾವಣೆಯಲ್ಲಿ ಕನಿಷ್ಠ ಶೇ.75-80 ಇಳಿಕೆಯಾಗಿದೆ ಎಂದು ಹೌಸಿಂಗ್‌ ಬ್ರೋಕರೇಜ್‌ ಸಂಸ್ಥೆ ಅನಾರಾಕ್‌ ವರದಿ ತಿಳಿಸಿದೆ. ವರದಿ ಸಿದ್ಧಪಡಿಸಿದ್ದು ಹೇಗೆ? ದೇಶದ 7 ಪ್ರಮುಖ ನಗರಗಳಲ್ಲಿ ಡೆವಲಪರ್‌ಗಳ ಜತೆಗೆ ಸಮಾಲೋಚನೆ ನಡೆಸಿರುವ ಅನಾರಾಕ್‌, ಬ್ಯಾಂಕ್‌ಗಳಲ್ಲಿ ಗೃಹಸಾಲ ವಿತರಣೆ, 1500ಕ್ಕೂ ಹೆಚ್ಚು ಸೇಲ್ಸ್‌ ಏಜೆಂಟ್‌ಗಳಿಂದ ಪಡೆದ ಮಾಹಿತಿಯನ್ನು ಆಧರಿಸಿ ವರದಿಯನ್ನು ಸಿದ್ಧಪಡಿಸಿರುವುದಾಗಿ ಅನಾರಾಕ್‌ ತಿಳಿಸಿದೆ. ಚಲಾವಣೆ ಇಳಿಕೆಗೆ ಕಾರಣವೇನು? ಈ ಹಿಂದೆ ಇದ್ದಂತೆ ಜನರಿಗೆ ಅಘೋಷಿತ ಆದಾಯವನ್ನು (ಕಪ್ಪು ಹಣ) ವಸತಿ ವಲಯದಲ್ಲಿ ಹೂಡಿಕೆ ಮಾಡಲು ಈಗ ಸಾಧ್ಯವಾಗುತ್ತಿಲ್ಲ. ಕಪ್ಪುಹಣವನ್ನು ಪರಿವರ್ತಿಸುವ ಉದ್ದೇಶಕ್ಕೆ ನಗದು ಕೊಟ್ಟು ಮನೆ ಖರೀದಿಸುವವರ ಸಂಖ್ಯೆ ಈಗ ಕಡಿಮೆಯಾಗಿದೆ. ಸ್ವಂತಕ್ಕೊಂದು ಮನೆ ಬೇಕು ಎನ್ನುವವರು ಖರೀದಿಸುತ್ತಿದ್ದಾರೆ. ಬಹುತೇಕ ಖರೀದಿದಾರರು ಈಗ ಗೃಹ ಖರೀದಿ ಪಾರದರ್ಶಕವಾಗಿರಲು ಬಯಸುತ್ತಿದ್ದಾರೆ. ಕಪ್ಪು ಹಣ ಬಳಕೆ ಶೇ.75-80 ಇಳಿಕೆಯಾಗಿದೆ. ಈಗ್‌ ನಿಜವಾದ ಬೇಡಿಕೆಗೋಸ್ಕರ ವಸತಿ ರಿಯಾಲ್ಟಿ ಬೆಳೆಯುತ್ತಿದೆ ಎಂದು ಅನಾರಾಕ್‌ ಅಧ್ಯಕ್ಷ ಅಂಜ್‌ ಪುರಿ ತಿಳಿಸಿದ್ದಾರೆ. ನೋಟು ಅಮಾನ್ಯತೆ ಮಾತ್ರವಲ್ಲದೆ ರಿಯಲ್‌ ಎಸ್ಟೇಟ್‌ ವಲಯದ ನಿಯಂತ್ರಣ ಮತ್ತು ಸುಧಾರಣೆಗೆ ಕ್ರಮಗಳನ್ನು ಕೇಂದ್ರ ಸರಕಾರ ಕೈಗೊಂಡಿತ್ತು. ರೇರಾ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿತ್ತು. ನೋಟು ಅಮಾನ್ಯತೆ, ರೇರಾ ಮತ್ತು ಜಿಎಸ್‌ಟಿಯ ಪರಿಣಾಮ ರಿಯಾಲ್ಟಿ ವಲಯದಲ್ಲಿ ಕಪ್ಪುಹಣದ ಬಳಕೆ ಮತ್ತು ಅದನ್ನು ಈಡೇರಿಸಲು ಹೊಸ ಪ್ರಾಪರ್ಟಿ ಯೋಜನೆಗಳ ಗಣನೀಯ ಬಿಡುಗಡೆ ನಿಂತಿದೆ ಎಂದು ವರದಿ ತಿಳಿಸಿದೆ. ಹೊಸ ಪ್ರಾಪರ್ಟಿ ಯೋಜನೆಗಳ ರಶ್‌ ಇಲ್ಲ: ಅನಾರಾಕ್‌ ವರದಿಯ ಪ್ರಕಾರ ನೋಟು ಅಮಾನ್ಯತೆಗೆ ಮೊದಲು 2013-2016ರ ಅವಧಿಯಲ್ಲಿ 7 ನಗರಗಳಲ್ಲಿ ಅಂದಾಜು 16.5 ಲಕ್ಷ ಹೊಸ ಯುನಿಟ್‌ (ಫ್ಲ್ಯಾಟ್‌) ಗಳು ಮಾರಾಟಕ್ಕಿತ್ತು. ನೋಟು ಅಮಾನ್ಯತೆಯ ನಂತರ ಇದೇ 7 ನಗರಗಳಲ್ಲಿ 2016-2021ರ ಅವಧಿಯಲ್ಲಿ ಹೊಸ ಯುನಿಟ್‌ಗಳ ಸಂಖ್ಯೆ 9.04 ಲಕ್ಷಕ್ಕೆ ಇಳಿದಿದೆ. ಸುಮಾರು ಶೇ.44 ತಗ್ಗಿದೆ. ಸೆಕೆಂಡರಿ ಸೇಲ್ಸ್‌ನಲ್ಲಿ ನಗದು ಬಳಕೆ: ರಿಸೇಲ್‌ ಹೌಸಿಂಗ್‌ ಅಥವಾ ಸೆಕೆಂಡರಿ ಸೇಲ್ಸ್‌ ಮಾರುಕಟ್ಟೆಯಲ್ಲಿ ಪ್ರಾಥಮಿಕ ಮಾರುಕಟ್ಟೆಗಿಂತ ( ರಿಯಲ್‌ ಎಸ್ಟೇಟ್‌ ಡೆವಲಪರ್‌ಗಳು ಮಾರಾಟ ಮಾಡುವ ವಸತಿ) ಹೆಚ್ಚಿನ ಪ್ರಮಾಣದಲ್ಲಿ ನಗದು ಬಳಕೆಯಾಗುತ್ತಿತ್ತು. ಇದಕ್ಕೆ ನೋಟು ಅಮಾನ್ಯತೆ ನಂತರ ಹೊಡೆತ ಬಿದ್ದಿತ್ತು ಎಂದು ವರದಿ ತಿಳಿಸಿದೆ.