ಮುದ್ದಿನ ರೋಬೋ ಇನ್ನಿಲ್ಲ: ಕ್ರೇಜಿಸ್ಟಾರ್ ರವಿಚಂದ್ರನ್ ದುಃಖತಪ್ತ

ತಮ್ಮ ಮುದ್ದಿನ ಶ್ವಾನ ರೋಬೋವನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ ನಟ ರವಿಚಂದ್ರನ್.

ಮುದ್ದಿನ ರೋಬೋ ಇನ್ನಿಲ್ಲ: ಕ್ರೇಜಿಸ್ಟಾರ್ ರವಿಚಂದ್ರನ್ ದುಃಖತಪ್ತ
Linkup
ರವಿಚಂದ್ರನ್‌ಗೆ ಅಗಲಿಕೆಯ ದುಃಖ ಕಾಡುತ್ತಿದೆ. ಪ್ರೀತಿಯ ಶ್ವಾನ ರೋಬೋ ಕೊನೆಯುಸಿರೆಳೆದಿದ್ದು, ದುಃಖತಪ್ತರಾಗಿದ್ದಾರೆ. ಶ್ವಾನ ಪ್ರೇಮಿ ರವಿಚಂದ್ರನ್ ಕ್ರೇಜಿಸ್ಟಾರ್ ರವಿಚಂದ್ರನ್ ಪ್ರಾಣಿ ಪ್ರಿಯ. ಅದರಲ್ಲೂ ಅವರು ಶ್ವಾನ ಪ್ರೇಮಿ. ಕ್ರೇಜಿಸ್ಟಾರ್ ರವಿಚಂದ್ರನ್ ಮನೆಯಲ್ಲಿ ಗ್ರೇಟ್ ಡೇನ್, ಸೈಬೀರಿಯನ್ ಹಸ್ಕಿ, ಪಗ್, ಬೀಗಲ್ ತಳಿಯ ಶ್ವಾನಗಳಿವೆ. ಎಲ್ಲಾ ಶ್ವಾನಗಳನ್ನೂ ರವಿಚಂದ್ರನ್ ಮತ್ತು ಫ್ಯಾಮಿಲಿ ಮುದ್ದಾಗಿ ಪ್ರೀತಿಯಿಂದ ಸಾಕುತ್ತಿದ್ದಾರೆ. ರವಿಚಂದ್ರನ್‌ರವರ ಮುದ್ದಿನ ಶ್ವಾನಗಳಲ್ಲಿ ರೋಬೋ ಕೂಡ ಒಂದು. ಕಳೆದ 12 ವರ್ಷಗಳಿಂದ ರವಿಚಂದ್ರನ್‌ರವರ ಆರೈಕೆಯಲ್ಲಿ ಬೆಳೆದ ಗ್ರೇಟ್ ಡೇನ್ ತಳಿಯ ರೋಬೋ ಶ್ವಾನ ಕೆಲ ದಿನಗಳ ಹಿಂದೆ ಅಸುನೀಗಿದೆ. ರವಿಚಂದ್ರನ್ ಫೇಸ್‌ಬುಕ್ ಪೋಸ್ಟ್ ತಮ್ಮ ಮುದ್ದಿನ ಶ್ವಾನ ರೋಬೋನನ್ನ ಕಳೆದುಕೊಂಡ ವಿಚಾರವನ್ನು ರವಿಚಂದ್ರನ್‌ ತಮ್ಮ ಫೇಸ್‌ಬುಕ್ ಅಕೌಂಟ್‌ ಮೂಲಕ ತಿಳಿಸಿದ್ದಾರೆ. ''ಸಾಮಾನ್ಯವಾಗಿ ಗ್ರೇಟ್ ಡೇನ್ ತಳಿಯ ಶ್ವಾನ 8-10 ವರ್ಷ ಬದುಕುತ್ತದೆ ಎಂದು ಹೇಳುತ್ತಾರೆ. ಆದರೆ, ರೋಬೋ ನನ್ನ ಹಾಗೂ ಕುಟುಂಬವನ್ನು ಕಳೆದ 12 ವರ್ಷಗಳಿಂದ ರಕ್ಷಣೆ ಮಾಡಿದ್ದಾನೆ. ಕೆಲವೇ ದಿನಗಳ ಹಿಂದೆ ರೋಬೋ ಕೊನೆಯುಸಿರೆಳೆದ. ಮಿಸ್ ಯೂ ರೋಬೋ'' ಎಂದು ಫೇಸ್‌ಬುಕ್‌ನಲ್ಲಿ ರವಿಚಂದ್ರನ್ ಬರೆದುಕೊಂಡಿದ್ದಾರೆ. ಸಾಕು ಪ್ರಾಣಿಗಳಿಗೆ ತನ್ನ ಒಡೆಯ ಹಾಗೂ ತನ್ನ ಮನೆಯೇ ಪ್ರಪಂಚ. ಸಾಕು ಪ್ರಾಣಿಗಳಿಂದ ಒಡೆಯನಿಗೆ ಸಿಗುವ ನಿಷ್ಕಲ್ಮಷ ಪ್ರೀತಿಗೆ ಸರಿಸಾಟಿಯಿಲ್ಲ. ಸಾಕು ಪ್ರಾಣಿಯ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ರವಿಚಂದ್ರನ್‌ಗೆ ಸಿಗಲಿ.. ಮರೆಯಾದ ರೋಬೋಗೆ ನಮ್ಮಿಂದಲೂ ಭಾವಪೂರ್ಣ ಶ್ರದ್ಧಾಂಜಲಿ..