ಗೆಳೆಯ ಮೋಹನ್‌ ಬಾಬು ಮನೆಯಲ್ಲಿ ರಜನಿಕಾಂತ್‌; ಇವರಿಬ್ಬರು 'ಒರಿಜಿನಲ್ ಗ್ಯಾಂಗ್‌ಸ್ಟರ್ಸ್‌'!

ಸೂಪರ್ ಸ್ಟಾರ್ ರಜನಿಕಾಂತ್‌ ಅವರಿಗೆ ಸ್ಯಾಂಡಲ್‌ವುಡ್‌ನ 'ರೆಬೆಲ್ ಸ್ಟಾರ್' ಅಂಬರೀಷ್‌ ಜೊತೆಗೆ ಒಳ್ಳೆಯ ಒಡನಾಟ ಇತ್ತು. ಅದೇ ಥರ ಇವರಿಬ್ಬರಿಗೆ ಇದ್ದ ಒಬ್ಬ ಕಾಮನ್ ಫ್ರೆಂಡ್ ಎಂದರೆ, ಅದು ಮೋಹನ್ ಬಾಬು. ಈಚೆಗೆ ಅವರ ಮನೆಗೆ ರಜನಿಕಾಂತ್ ಹೋಗಿದ್ದರು.

ಗೆಳೆಯ ಮೋಹನ್‌ ಬಾಬು ಮನೆಯಲ್ಲಿ ರಜನಿಕಾಂತ್‌; ಇವರಿಬ್ಬರು 'ಒರಿಜಿನಲ್ ಗ್ಯಾಂಗ್‌ಸ್ಟರ್ಸ್‌'!
Linkup
'ಸೂಪರ್ ಸ್ಟಾರ್' ಮತ್ತು ತೆಲುಗು ನಟ ಮೋಹನ್ ಬಾಬು ಎಂತಹ ಆತ್ಮೀಯ ಸ್ನೇಹಿತರು ಅನ್ನೋದು ಇಡೀ ಚಿತ್ರರಂಗಕ್ಕೆ ಗೊತ್ತು. ವೃತ್ತಿ ಜೀವನದ ಆರಂಭದ ದಿನಗಳಲ್ಲಿ ಮೋಹನ್ ಬಾಬು ಮತ್ತು ರಜನಿಕಾಂತ್ ಒಟ್ಟಿಗೆ ಇದ್ದರು. ಇಬ್ಬರು ತುಂಬ ಕಷ್ಟಪಟ್ಟು, ಚಿತ್ರರಂಗದಲ್ಲಿ ನೆಲೆನಿಂತು ಸ್ಟಾರ್ ಹೀರೋಗಳಾಗಿ ಮಿಂಚಿದರು. ಇಂದಿಗೂ ಕೂಡ ಅವರಿಬ್ಬರ ನಡುವೆ ಉತ್ತಮ ಸ್ನೇಹ ಸಂಬಂಧ ಇದೆ. ಈಚೆಗೆ ರಜನಿಕಾಂತ್ ಕೆಲ ದಿನಗಳ ಕಾಲ ಮೋಹನ್‌ಬಾಬು ಮನೆಯಲ್ಲಿ ವಾಸ್ತವ್ಯ ಹೂಡಿರುವುದೇ ಅದಕ್ಕೆ ಸಾಕ್ಷಿ ಮೋಹನ್ ಬಾಬು ಮನೆಯಲ್ಲಿ ತಲೈವಾ ರಜನಿಕಾಂತ್ ನಟನೆಯ ಹೊಸ ಸಿನಿಮಾ 'ಅಣ್ಣಾಥೆ' ಶೂಟಿಂಗ್‌ ಈಚೆಗೆ ಹೈದರಾಬಾದ್‌ನಲ್ಲಿ ಮುಕ್ತಾಯಗೊಂಡಿದೆ. ಆ ಸಲುವಾಗಿ 20ಕ್ಕೂ ಅಧಿಕ ದಿನಗಳ ರಜನಿಕಾಂತ್ ಹೈದರಾಬಾದ್‌ನಲ್ಲಿಯೇ ಬೀಡುಬಿಟ್ಟಿದ್ದರು. ಅದರಲ್ಲೂ ನೆಚ್ಚಿನ ಗೆಳೆಯ ಮೋಹನ್‌ಬಾಬು ಮನೆ ಕೂಡ ಅಲ್ಲಿಯೇ ಇದ್ದಿದ್ದರಿಂದ, ತುಂಬ ಸಮಯವನ್ನು ಗೆಳೆಯನ ಮನೆಯಲ್ಲೇ ಕಳೆದಿದ್ದಾರೆ ರಜನಿಕಾಂತ್‌. ಇದೇ ವೇಳೆ ಬಿಳಿ ಬಣ್ಣದ ಕುರ್ತಾ ಧರಿಸಿ, ಇಬ್ಬರು ಸಖತ್ ಆಗಿಯೇ ಮಿಂಚಿದ್ದಾರೆ. ವಿಶೇಷ ಫೋಟೋಶೂಟ್ ಕೂಡ ಮಾಡಿಸಲಾಗಿದೆ. ಸದ್ಯ ಆ ಫೋಟೋಗಳೆಲ್ಲ ಈಗ ವೈರಲ್ ಆಗಿವೆ. ಫೋಟೋ ಹಂಚಿಕೊಂಡ ಲಕ್ಷ್ಮೀ, ವಿಷ್ಣು ಇನ್ನು, ರಜನಿಕಾಂತ್‌ ಮನೆಗೆ ಬಂದಾಗ ತೆಗೆಸಿಕೊಂಡ ಫೋಟೋಗಳನ್ನು ಪುತ್ರ ಮಂಚು ವಿಷ್ಣು ಮತ್ತು ಪುತ್ರಿ ಲಕ್ಷ್ಮಿ ಮಂಚು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. 'ರಜನಿಕಾಂತ್ ಮತ್ತು ಮೋಹನ್ ಬಾಬು ಇಬ್ಬರು ನಿಜವಾದ ಗ್ಯಾಂಗ್‌ಸ್ಟರ್ಸ್‌.. ಜೊತೆಗೆ ನಾನು ದಡ್ಡ ಮಂಚು ವಿಷ್ಣು' ಎಂದು ಮಂಚು ವಿಷ್ಣು ಬರೆದುಕೊಂಡಿದ್ದಾರೆ. ರಜನಿಕಾಂತ್ ಮತ್ತು ಮೋಹನ್ ಬಾಬು ಅವರ ಸ್ನೇಹದ ಬಗ್ಗೆ ಬರೆದುಕೊಂಡಿರುವ ಲಕ್ಷ್ಮಿ ಮಂಚು, 'ಸ್ನೇಹದ ಬಗ್ಗೆ ನಂಬಿಕೆ ಇಡುವಂತೆ ಇವರಿಬ್ಬರು ಮಾಡುತ್ತಾರೆ' ಎಂದಿದ್ದಾರೆ. 'ಬೈ ಟು ಟೀ ಹಂಚಿಕೊಂಡು, ಕಾರ್‌ ಶೇಡ್‌ನಲ್ಲಿ ಸಮಯ ಕಳೆಯುತ್ತ, ಪ್ರಾಮಾಣಿಕ ಹಿನ್ನೆಲೆಯಿಂದ ಬಂದ ಇವರು ಇಂದು ತಮ್ಮದೇ ಆದ ಹಾದಿಯಲ್ಲಿ ಸೂಪರ್ ಸ್ಟಾರ್‌ಗಳಾಗಿದ್ದಾರೆ. ಒಬ್ಬರಿಗೊಬ್ಬರು ಜೊತೆಯಾಗಿ ಇರಲು ಸಮಯ ಹೊಂದಿಸಿಕೊಳ್ಳುತ್ತಾರೆ' ಎಂದು ಬರೆದುಕೊಂಡಿದ್ದಾರೆ ಅವರು. ಇನ್ನು, ರಜನಿಕಾಂತ್ ಅಭಿನಯದ 'ಅಣ್ಣಾಥೆ' ಶೂಟಿಂಗ್‌ ಈಚೆಗೆ ಮುಕ್ತಾಯಗೊಂಡಿದ್ದು, ಸದ್ಯ ಅವರು ಚೆನ್ನೈನ ತಮ್ಮ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಈಚೆಗಷ್ಟೇ ಅವರು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ಭೇಟಿ ಮಾಡಿ, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 50 ಲಕ್ಷ ರೂ. ನೀಡಿದ್ದರು.