ಶಿವಸೇನೆಯ ರಾಷ್ಟ್ರವಾದದ ರಕ್ತ ಕೆರಳಿಸಿದ ಪೂಂಚ್ ಎನ್‌ಕೌಂಟರ್: ಉಗ್ರರ ಸಂಹಾರಕ್ಕೆ ಕರೆ!

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ನಿನ್ನೆ(ಅ.11-ಸೋಮವಾರ) ನಡೆದ ಎನ್‌ಕೌಂಟರ್‌ನ್ನು, ಶಿವಸೇನೆ ಕಟು ಶಬ್ಧಗಳಲ್ಲಿ ಟೀಕಿಸಿದೆ. ಹುತಾತ್ಮರಾಗಿರುವ ನಮ್ಮ ಯೋಧರ ಸಂಖ್ಯೆಗಿಂತ ಐದು ಪಟ್ಟು ಹೆಚ್ಚು ಉಗ್ರರನ್ನು ಕೊಂದಾಗಲೇ ಮನಸ್ಸಿಗೆ ಸಮಾಧಾನ ಎಂದು ಸಾಮ್ನಾ ಕಿಡಿಕಾರಿದೆ.

ಶಿವಸೇನೆಯ ರಾಷ್ಟ್ರವಾದದ ರಕ್ತ ಕೆರಳಿಸಿದ ಪೂಂಚ್ ಎನ್‌ಕೌಂಟರ್: ಉಗ್ರರ ಸಂಹಾರಕ್ಕೆ ಕರೆ!
Linkup
ಮುಂಬಯಿ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ನಿನ್ನೆ(ಅ.11-ಸೋಮವಾರ) ನಡೆದ ಎನ್‌ಕೌಂಟರ್‌ನ್ನು, ಕಟು ಶಬ್ಧಗಳಲ್ಲಿ ಟೀಕಿಸಿದೆ. ಸೇನೆಯ ಐವರು ಹುತಾತ್ಮ ಯೋಧರಿಗೆ ಶಿವಸೇನೆ ಕಂಬನಿ ಮಿಡಿದಿದೆ. ಈ ಕುರಿತು ಶಿವಸೆನೆಯ ಮುಖವಾಣಿ ಸಾಮ್ನಾದಲ್ಲಿ ಸಂಪಾದಕೀಯ ಬರೆಯಲಾಗಿದ್ದು, ನಮ್ಮ ಯೋಧರ ಮೇಲೆ ದಾಳಿ ಮಾಡುತ್ತಿರುವ ಭಯೋತ್ಪಾದಕರು ಎಲ್ಲೇ ಅಡಗಿದ್ದರೂ ಹುಡುಕಿ ಕೊಲ್ಲಬೇಕು ಎಂದು ಹೂಂಕರಿಸಿದೆ. ಹುತಾತ್ಮರಾಗಿರುವ ನಮ್ಮ ಯೋಧರ ಸಂಖ್ಯೆಗಿಂತ ಐದು ಪಟ್ಟು ಹೆಚ್ಚು ಉಗ್ರರನ್ನು ನಾವು ಕೊಲ್ಲಬೇಕಿದೆ ಎಂದು ಶಿವಸೇನೆ ಗುಡುಗಿದೆ. ಕಣಿವೆಯಲ್ಲಿ ಉಗ್ರರ ಅಟ್ಟಹಾಸ ಮೀತಿ ಮೀರುತ್ತಿದೆ. ಮುಗ್ಧ ನಾಗರಿಕರನ್ನು ಬಲಿ ಪಡೆಯುತ್ತಿರುವ ನೀಚರು, ಇದೀಗ ನಮ್ಮ ಐವರು ವೀರ ಯೋಧರನ್ನು ಬಲಿ ಪಡೆದಿದ್ದಾರೆ. ಹುತಾತ್ಮರಾಗಿರುವ ನಮ್ಮ ಯೋಧರ ಸಂಖ್ಯೆಗಿಂತ ಐದು ಪಟ್ಟು ಹೆಚ್ಚು ಉಗ್ರರನ್ನು ಕೊಂದಾಗಲೇ ಮನಸ್ಸಿಗೆ ಸಮಾಧಾನ ಎಂದು ಸಾಮ್ನಾ ಕಿಡಿಕಾರಿದೆ. ಉಗ್ರರ ಬಂದೂಕಕುಗಳಿಗೆ ಎದೆಯೊಡ್ಡಿರುವ ನಮ್ಮ ವೀರ ಯೋಧರು, ಭಾರತ ಮಾತೆಯ ನಿಜವಾದ ಸುಪುತ್ರರು. ಅವರ ಬಲಿದಾನ ವ್ಯರ್ಥವಾಗಲು ನಾವು ಬಿಡಬಾರದು. ಹುತಾತ್ಮರಾಗಿರುವ ಐವರು ಯೋಧರ ರಕ್ತದ ಕಲೆ ಆರುವ ಮುನ್ನ, ಉಗ್ರರ ಸಂಹಾರ ನಡೆಸಬೇಕು ಎಂದು ಶಿವಸೇನೆ ಆಗ್ರಹಿಸಿದೆ. ಕಣಿವೆಯಲ್ಲಿ ಉಗ್ರರು ಮುಗ್ಧ ನಾಗರಿಕರ ಮೇಲೆ ಅದರಲ್ಲೂ ಕಾಶ್ಮೀರಿ ಪಂಡಿತರ ಮೇಲೆ ದಾಳಿಗಳನ್ನು ನಡೆಸುತ್ತಿದ್ದಾರೆ. ಕಾಶ್ಮೀರಿ ಪಂಡಿತರು ಮತ್ತೆ ಕಣಿವೆ ಬಿಟ್ಟು ವಲಸೆ ಹೋಗಲು ಆರಂಭಿಸಿದ್ದಾರೆ. ಇದು 1990ರ ದಶಕವನ್ನು ಮತ್ತೆ ನೆನೆಪಿಸುತ್ತಿದೆ ಎಂದು ಶಿವಸೇನೆ ಆತಂಕ ವ್ಯಕ್ತಪಡಿಸಿದೆ. ಕಣಿವೆಯಲ್ಲಿ ಅಲ್ಪಸಂಖ್ಯಾತ ಸಮುದಾಯದವರ ಪರಿಸ್ಥಿತಿ ಆತಂಕ ಹುಟ್ಟಿಸುವಂತಿದ್ದು, ಕೇಂದ್ರ ಸರ್ಕಾರ ಕಾಶ್ಮೀರಿ ಪಂಡಿತರ ಸುರಕ್ಷತೆಯ ತನ್ನ ವಾಗ್ದಾನವನ್ನು ಉಳಿಸಿಕೊಳ್ಳಬೇಕು ಎಂದು ಶಿವಸೇನೆ ಒತ್ತಾಯಿಸಿದೆ. ಉಗ್ರರನ್ನು ಹೆಡೆಮುರಿ ಕಟ್ಟಲು ಮತ್ತಷ್ಟು ಕಠಿಣ ನಿಲುವುಗಳನ್ನುಯ ತೆಗೆದುಕೊಳ್ಳುವ ಅವಶ್ಯಕತೆಯಿದೆ ಎಂದು ಶಿವಸೇನೆ ಅಭಿಪ್ರಾಯಪಟ್ಟಿದೆ. ಇಡೀ ದೇಶ ಕಣಿವೆಯಲ್ಲಿ ಶಾಂತಿ ಮರುಸ್ಥಾಪನೆಯ ದಿನಗಳನ್ನು ಎದುರು ನೋಡುತ್ತಿದೆ. ಉಗ್ರರ ಉಪಟಳ ಹೆಚ್ಚಲು ಕಾರಣಗಳೇನು ಎಂಬುದನ್ನು ನಾವು ಪತ್ತೆ ಮಾಡಬೇಕಿದೆ. ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆಯನ್ನು ಮಟ್ಟ ಹಾಕುವಲ್ಲಿ ಇಡೀ ದೇಶ ಒಂದಾಗಿ ನಿಂತಿದೆ ಎಂದು ಶಿವಸೇನೆ ಹೇಳಿದೆ. ನಿನ್ನೆ(ಅ.11-ಸೋಮವಾರ) ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಸೇನೆ ಮತ್ತು ಉಗ್ರರ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ಭಾರತೀಯ ಸೇನೆಯ ಐವರು ಯೋಧರು ಹುತಾತ್ಮರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.