ಅಕ್ರಮ ಹಣ ವರ್ಗಾವಣೆ ಪ್ರಕರಣ: ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್ ಬಂಧನ

ಅಕ್ರಮ ಹಣ ವರ್ಗಾವಣೆ ಮತ್ತು ಸುಲಿಗೆ ಪ್ರಕರಣಗಳ ಆರೋಪ ಎದುರಿಸುತ್ತಿರುವ ಮಹಾರಾಷ್ಟ್ರದ ಮಾಜಿ ಗೃಹಸಚಿವ ಅನಿಲ್ ದೇಶ್‌ಮುಖ್ ಅವರನ್ನು ಜಾರಿ ನಿರ್ದೇಶನಾಲಯ, 12 ಗಂಟೆಗೂ ಹೆಚ್ಚಿನ ವಿಚಾರಣೆ ಬಳಿಕ ಸೋಮವಾರ ತಡ ರಾತ್ರಿ ಬಂಧಿಸಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣ: ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್ ಬಂಧನ
Linkup
ಮುಂಬಯಿ: ಪ್ರಕರಣ ಒಂದರಲ್ಲಿ ಮಾಜಿ ಗೃಹ ಸಚಿವ ಅವರನ್ನು (ಇಡಿ) ಬಂಧಿಸಿದೆ. ಮುಂಬಯಿಯಲ್ಲಿರುವ ಇಡಿ ಕಚೇರಿಯಲ್ಲಿ 12 ಗಂಟೆಗೂ ಸತತ ವಿಚಾರಣೆಯ ಬಳಿಕ ಸೋಮವಾರ ತಡರಾತ್ರಿ ಈ ಬಂಧನ ನಡೆದಿದೆ. ಅವರನ್ನು ಮಂಗಳವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು. ಲಂಚ ಪ್ರಕರಣದಲ್ಲಿ ಎನ್‌ಸಿಪಿ ಮುಖಂಡ ಅನಿಲ್ ದೇಶ್‌ಮುಖ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಅವರು ಮಹಾರಾಷ್ಟ್ರದ ಗೃಹ ಸಚಿವ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆದರೆ ಜಾರಿ ನಿರ್ದೇಶನಾಲಯ ನೀಡಿದ್ದ ಸಮನ್‌ಗಳನ್ನು ರದ್ದುಗೊಳಿಸುವಂತೆ ದೇಶ್‌ಮುಖ್ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಶುಕ್ರವಾರ ತಿರಸ್ಕರಿಸಿತ್ತು. ಸೋಮವಾರ ವಿಡಿಯೋ ಹೇಳಿಕೆ ನೀಡಿದ್ದ 71 ವರ್ಷದ ಅನಿಲ್ ದೇಶ್‌ಮುಖ್, 'ನನ್ನ ವಿರುದ್ಧದ ಎಲ್ಲ ಆರೋಪಗಳೂ ಸುಳ್ಳು' ಎಂದು ಪ್ರತಿಪಾದಿಸಿದ್ದರು. ಕಳೆದ ನಾಲ್ಕು ತಿಂಗಳಿನಿಂದ ದೇಶ್‌ಮುಖ್ ಅವರಿಗೆ ಇ.ಡಿ ನಿರಂತರವಾಗಿ ಸಮನ್‌ಗಳನ್ನು ನೀಡುತ್ತಾ ಬಂದಿತ್ತು. ಆದರೆ ಒಮ್ಮೆಯೂ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಕೊನೆಗೂ ಸೋಮವಾರ ಅವರು ಇ.ಡಿ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಅನಿಲ್ ದೇಶ್‌ಮುಖ್ ವಿರುದ್ಧ 100 ಕೋಟಿ ರೂ ಸುಲಿಗೆ ಆರೋಪ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪಗಳಿವೆ. ದೇಶ್‌ಮುಖ್ ಅವರನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿ ಬಂಧಿಸಲಾಗಿದೆ. ಅವರು ವಿಚಾರಣೆ ವೇಳೆ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡದೆ ನುಣುಚಿಕೊಳ್ಳುತ್ತಿದ್ದರು. ಮಂಗಳವಾರ ಸ್ಥಳೀಯ ನ್ಯಾಯಾಲದ ಮುಂದೆ ಹಾಜರುಪಡಿಸಿದ ಬಳಿಕ ಅವರನ್ನು ತಮ್ಮ ವಶಕ್ಕೆ ನೀಡುವಂತೆ ಕೋರಲಾಗುವುದು ಎಂದು ಇಡಿ ಮೂಲಗಳು ತಿಳಿಸಿವೆ. '4.5 ಕೋಟಿ ರೂ ಮೊತ್ತದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ತನಿಖೆಗೆ ಸಹಕಾರ ನೀಡಿದ್ದೇವೆ. ಅವರನ್ನು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ನಾವು ಇಡಿ ವಶಕ್ಕೆ ನೀಡಬೇಕೆಂಬ ಮನವಿಗೆ ವಿರೋಧ ವ್ಯಕ್ತಪಡಿಸಲಿದ್ದೇವೆ' ಎಂದು ದೇಶ್‌ಮುಖ್ ಪರ ವಕೀಲರು ಇಂದರ್ಪಾಲ್ ಸಿಂಗ್ ತಿಳಿಸಿದ್ದಾರೆ. 'ಇಂದು ನಾನು ಜಾರಿ ನಿರ್ದೇಶನಾಲಯದ ಮುಂದೆ ಖುದ್ದು ಹಾಜರಾಗಿದ್ದೇನೆ. ಮುಂಬಯಿ ಮಾಜಿ ಪೊಲೀಸ್ ಆಯುಕ್ತ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಅವರು ಇಂದು ಎಲ್ಲಿದ್ದಾರೆ? ಮಾಧ್ಯಮ ವರದಿಗಳ ಪ್ರಕಾರ ಅವರು ದೇಶ ತೊರೆದಿದ್ದಾರೆ' ಎಂದು ದೇಶ್‌ಮುಖ್ ವಿಡಿಯೋದಲ್ಲಿ ಹೇಳಿದ್ದರು. ಪರಮ್ ಬೀರ್ ಸಿಂಗ್ ಮಾಡಿದ್ದ ಆರೋಪಗಳಿಗೆ ಸಂಬಂಧಿಸಿದಂತೆ ಇ.ಡಿ ಮತ್ತು ಸಿಬಿಐ ದೇಶ್‌ಮುಖ್ ವಿರುದ್ಧ ಭ್ರಷ್ಟಾಚಾರ ಪ್ರಕರಣಗಳನ್ನು ದಾಖಲು ಮಾಡಿದ್ದವು. ಮುಂಬಯಿಯಲ್ಲಿರುವ ಬಾರ್ ಹಾಗೂ ರೆಸ್ಟೋರೆಂಟ್‌ಗಳಿಂದ ಪ್ರತಿ ತಿಂಗಳೂ 100 ಕೋಟಿ ರೂ ವಸೂಲಿ ಮಾಡುವಂತೆ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರಿಗೆ ಅನಿಲ್ ದೇಶ್‌ಮುಖ್ ಸೂಚನೆ ನೀಡಿದ್ದರು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಬರೆದಿದ್ದ ಪತ್ರದಲ್ಲಿ ಪರಮ್ ಬೀರ್ ಸಿಂಗ್ ಆರೋಪಿಸಿದ್ದರು. ತಮ್ಮನ್ನು ಮುಂಬಯಿ ಪೊಲೀಸ್ ಕಮಿಷನರ್ ಸ್ಥಾನದಿಂದ ಕಿತ್ತು ಹಾಕಿ ಬೇರೆಡೆ ವರ್ಗಾಯಿಸಿದ ಬಳಿಕ ಅವರು ಈ ಆರೋಪ ಮಾಡಿದ್ದರು.