PM-Cares Fund ಸರ್ಕಾರಿ ನಿಧಿ ಅಲ್ಲ. ಹೀಗಾಗಿ ಆರ್‌ಟಿಐ ವ್ಯಾಪ್ತಿಗೆ ಬರುವುದಿಲ್ಲ: ಕೇಂದ್ರ ಸರ್ಕಾರ

ಪಿಎಂ ಕೇರ್ಸ್‌ ಫಂಡ್‌ ನಿಯಮದಡಿ ಬರುವ ಚಾರಿಟೇಬಲ್‌ ಟ್ರಸ್ಟ್‌ ಅಷ್ಟೇ. ಇದನ್ನು ಸಾರ್ವಜನಿಕ ಪ್ರಾಧಿಕಾರ ಅಥವಾ ರಾಜ್ಯದ ವ್ಯಾಖ್ಯೆಯಲ್ಲಿ ಪರಿಗಣಿಸಲಾಗುವುದಿಲ್ಲ. ಹೀಗಾಗಿ ಇದು ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಯ) ಒಳಪಡುವುದಿಲ್ಲ ಎಂದು ಹೇಳಿದೆ.

PM-Cares Fund ಸರ್ಕಾರಿ ನಿಧಿ ಅಲ್ಲ. ಹೀಗಾಗಿ ಆರ್‌ಟಿಐ ವ್ಯಾಪ್ತಿಗೆ ಬರುವುದಿಲ್ಲ: ಕೇಂದ್ರ ಸರ್ಕಾರ
Linkup
ಹೊಸದಿಲ್ಲಿ: ಕೊರೊನಾ ವೇಳೆಯಲ್ಲಿ ಸ್ಥಾಪಿಸಲಾದ ಪರಿಹಾರ ನಿಧಿ, ಪಿ.ಎಂ ಕೇರ್ಸ್‌ ಫಂಡ್‌, ಸರ್ಕಾರದ ನಿಧಿ ಅಲ್ಲ ಎಂದು ಹಾಗೂ ಪ್ರಧಾನ ಮಂತ್ರಿ ಕಾರ್ಯಾಲಯ ದೆಹಲಿ ಹೈ ಕೋರ್ಟ್‌ಗೆ ತಿಳಿಸಿದೆ. ಬಗ್ಗೆ ದೆಹಲಿ ಹೈ ಕೋರ್ಟ್‌ಗೆ ಲಿಖಿತ ಅಫಿಡವಿಟ್‌ ಸಲ್ಲಿಸಿರುವ ಕೇಂದ್ರ ಸರ್ಕಾರ, ಇದೊಂದು ನಿಯಮದಡಿ ಬರುವ ಚಾರಿಟೇಬಲ್‌ ಟ್ರಸ್ಟ್‌ ಅಷ್ಟೇ. ಇದನ್ನು ಸಾರ್ವಜನಿಕ ಪ್ರಾಧಿಕಾರ ಅಥವಾ ರಾಜ್ಯದ ವ್ಯಾಖ್ಯೆಯಲ್ಲಿ ಪರಿಗಣಿಸಲಾಗುವುದಿಲ್ಲ. ಹೀಗಾಗಿ ಇದು ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಯ) ಒಳಪಡುವುದಿಲ್ಲ ಎಂದು ಹೇಳಿದೆ. ಪಿಎಂ ಕೇರ್ಸ್‌ ನಿಧಿಯ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನೆ ಮಾಡಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ , ಈ ಬಗ್ಗೆ ಅಫಿಡವಿಟ್‌ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತು. ಇದಕ್ಕೆ ಉತ್ತರಿಸುವ ಕೇಂದ್ರ ಸರ್ಕಾರ, ಈ ನಿಧಿಯನ್ನು ಸಾರ್ವಜನಿಕ ಚಾರಿಟೇಬಲ್‌ ಟ್ರಸ್ಟ್‌ನಡಿ ಸ್ಥಾಪಿಸಲಾಗಿದ್ದು, ಭಾರತದ ಸಂವಿಧಾನದಡಿ ಸ್ಥಾಪನೆ ಮಾಡಿಲ್ಲ ಎಂದು ನ್ಯಾಯಮೂರ್ತಿ ಡಿ.ಎನ್‌ ಪಟೇಲ್‌ ಹಾಗೂ ಜ್ಯೋತಿ ಸಿಂಗ್‌ ಅವರಿದ್ದ ಪೀಠದ ಮುಂದೆ ಹೇಳಿದೆ. ಅಲ್ಲದೇ ಪಿಎಂ ಕೇರ್ಸ್‌ ನಿಧಿ ಕೇಂದ್ರ ಸರ್ಕಾರ ಅಥವಾ ಯಾವುದೇ ರಾಜ್ಯ ಸರ್ಕಾರದ ಮಾಲೀಕತ್ವ ಅಥವಾ ನಿಯಂತ್ರಣದಲ್ಲೂ ಇಲ್ಲ. ಅಥವಾ ಯಾವುದೇ ಸರ್ಕಾರ ಇದಕ್ಕೆ ಹಣವನ್ನೂ ಒದಗಿಸುತ್ತಲೂ ಇಲ್ಲ ಎಂದು ಕೇಂದ್ರ ಸರ್ಕಾರ ಹೈ ಕೋರ್ಟ್‌ಗೆ ಮಾಹಿತಿ ನೀಡಿದೆ. ಪಿಎಂ ಕೇರ್ಸ್‌ ನಿಧಿಯಲ್ಲಿ ಸಾರ್ವಜನಿಕರು ಅಥವಾ ಸಂಸ್ಥೆಗಳು ಸ್ವ ಇಚ್ಛೆಯಿಂದ ನೀಡಿದ ಹಣ ಇದ್ದು, ಕೇಂದ್ರ ಸರ್ಕಾರದ ಯಾವುದೇ ಉದ್ದಿಮೆಯ ಭಾಗ ಅಲ್ಲ. ಕೇಂದ್ರ ಸರ್ಕಾರದ ಯಾವುದೇ ಯೋಜನೆಯ ಭಾಗವೂ ಅಲ್ಲ. ಇದೊಂದು ಸಾರ್ವಜನಿಕ ಟ್ರಸ್ಟ್ ಆಗಿದ್ದಿ, ಮಹಾಲೇಖಪಾಲಕರ ಆಡಿಟ್‌ಗೂ ಇದು ಒಳ ಪಡುವುದಿಲ್ಲ ಎಂದು ಕೇಂದ್ರ ಸರ್ಕಾರ ತನ್ನ ಉತ್ತರದಲ್ಲಿ ಹೇಳಿದೆ. ಅಲ್ಲದೇ, ಆರ್‌ಟಿಐ ಕಾಯ್ದೆ ಸೆಕ್ಷನ್‌ 2(h) ರಲ್ಲಿ ಹೇಳಲಾಗಿರುವ 'ಸಾರ್ವಜನಿಕ ಪ್ರಾಧಿಕಾರ'ದ ವ್ಯಾಖ್ಯೆಯಡಿ ಕೂಡ ಪಿಎಂ ಕೇರ್ಸ್‌ ಫಂಡ್‌ ಬರುವುದಿಲ್ಲ. ಹೀಗಾಗಿ ಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ಅರ್ಜಿಗಳು ಮಾನ್ಯವಲ್ಲ ಎಂದು ತನ್ನ ಹೇಳಿಕೆಯಲ್ಲಿ ಕೇಂದ್ರ ಸರ್ಕಾರ ಹೇಳಿದೆ. ಸೆ.14 ರಂದು ಕೇಂದ್ರ ಸರ್ಕಾರ ಈ ಉತ್ತರವನ್ನು ದೆಹಲಿ ಹೈ ಕೋರ್ಟ್‌ಗೆ ನೀಡಿದ್ದು, ಪಿಎಂ ಕೇರ್ಸ್ ಫಂಡ್‌ ಕೇಂದ್ರ ಅಥವಾ ಯಾವುದೇ ರಾಜ್ಯ ಸರ್ಕಾರದ ನಿಯಂತ್ರಣದಲ್ಲಿ ಇಲ್ಲ. ಈ ಟ್ರಸ್ಟ್‌ನ ಕಾರ್ಯಾಚರಣೆಗೆ ಉಭಯ ಸರ್ಕಾರಗಳೂ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಭಾಗಿಯಾಗುವುದಿಲ್ಲ ಎಂದು ಸ್ಪಷ್ಟ ಪಡಿಸಿದೆ. ಅಲ್ಲದೇ ಪಿಎಂ ಕೇರ್ಸ್‌ ನಿಧಿಯನ್ನು ಸಂವಿಧಾನದಡಿ ವ್ಯಾಖ್ಯಾನಿಸಲಾಗಿರುವ 'ರಾಜ್ಯ' ದ ಪರಿಧಿಗೆ ಸೇರಿಸಬೇಕು ಎಂದು ಆಗ್ರಹಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯೂ ಮುಂದುವರಿದಿದ್ದು, ಸೆ. 27 ರಂದು ಮುಂದಿನ ವಿಚಾರಣೆ ನಿಗದಿ ಪಡಿಸಲಾಗಿದೆ. ಪ್ರಧಾನ ಮಂತ್ರಿ ವಿಪತ್ತು ನಿರ್ವಹಣಾ ನಿಧಿಯ ಬದಲಾಗಿ 2020 ರ ಮಾರ್ಚ್‌ 27ರಂದು ಈ ನಿಧಿಯನ್ನು ಸ್ಥಾಪನೆ ಮಾಡಲಾಗಿತ್ತು. ಆದರೆ ಇದು ಹಲವು ರಾಜಕೀಯ ನಾಯಕರ, ಹೋರಾಟಗಾರರ ವಿರೋಧಕ್ಕೆ ಕಾರಣವಾಗಿತ್ತು. ಇದರ ಪಾರದರ್ಶಕತೆ ಬಗ್ಗೆ ಹಲವು ಪ್ರಶ್ನೆಗಳು ಎದ್ದಿದ್ದವು.