ಸಾಮೂಹಿಕ ಥಳಿತದಲ್ಲಿ ಭಾಗವಹಿಸುವವರು ಹಿಂದುತ್ವ ವಿರೋಧಿಗಳು: ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌

ಸಾಮೂಹಿಕ ಹಲ್ಲೆಯಂತಹ ಕೃತ್ಯಗಳಲ್ಲಿ ತೊಡಗುವವರು ಹಿಂದುತ್ವದ ವಿರೋಧಿಗಳು" ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ.

ಸಾಮೂಹಿಕ ಥಳಿತದಲ್ಲಿ ಭಾಗವಹಿಸುವವರು ಹಿಂದುತ್ವ ವಿರೋಧಿಗಳು: ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌
Linkup
ಹೊಸದಿಲ್ಲಿ: "ಸಾಮೂಹಿಕ ಹಲ್ಲೆಯಂತಹ ಕೃತ್ಯಗಳಲ್ಲಿ ತೊಡಗುವವರು ಹಿಂದುತ್ವದ ವಿರೋಧಿಗಳು" ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ () ಮುಖ್ಯಸ್ಥ ಮೋಹನ್‌ ಭಾಗವತ್‌ ಪ್ರತಿಪಾದಿಸಿದ್ದಾರೆ. ಸಂಘದ ಘಟಕವಾದ ರಾಷ್ಟ್ರೀಯ ಮಂಚ್‌ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದ ಅವರು, "ಭಾರತದಂತಹ ಪ್ರಜಾಪ್ರಭುತ್ವದಲ್ಲಿ ಹಿಂದೂಗಳು ಅಥವಾ ಮುಸ್ಲಿಮರ ಪ್ರಾಬಲ್ಯ ಎನ್ನುವ ಸಾಧ್ಯತೆಯೇ ಉದ್ಭವಿಸುವುದಿಲ್ಲ. ಹಾಗಾಗಿ ಕೇವಲ ಭಾರತೀಯರ ಪ್ರಾಬಲ್ಯ ಮಾತ್ರವೇ ಇರುವಂತಹ ಪ್ರಜಾಪ್ರಭುತ್ವ ನಮ್ಮ ದೇಶದ್ದಾಗಿದೆ" ಎಂದರು. "ಮುಸ್ಲಿಮನೊಬ್ಬ ದೇಶದಲ್ಲಿಇರಬಾರದು ಎನ್ನುವ ಹಿಂದೂ ವ್ಯಕ್ತಿ, ನಿಜವಾಗಿಯೂ ಹಿಂದೂವೇ ಅಲ್ಲ. ಧರ್ಮಗಳ ಹೊರತಾಗಿ ಎಲ್ಲ ಭಾರತೀಯರ ಡಿಎನ್‌ಎ ಒಂದೇ ಆಗಿದೆ ಎನ್ನುವುದನ್ನು ಮರೆಯದಿರೋಣ. ನಮ್ಮ ಪೂರ್ವಜರ ಸಾಧನೆಯೇ ನಮಗೆ ಪ್ರೇರಕಶಕ್ತಿಯಾಗಿದೆ. ಯಾವುದೇ ಸಂದರ್ಭದಲ್ಲಿ ಮುಸ್ಲಿಮರು ಸೇರಿದಂತೆ ಯಾರ ಮೇಲೂ ಸಾಮೂಹಿಕ ಥಳಿತಕ್ಕೆ ಮುಂದಾಗುವವರು ವಿರೋಧಿಗಳು. ಅದರಲ್ಲಿ ಯಾವ ಅನುಮಾನವೂ ಬೇಡ. ಇಂತಹ ದುಷ್ಕೃತ್ಯ ಎಸಗುವವರ ವಿರುದ್ಧ ನಿಷ್ಪಕ್ಷಪಾತ ಕಾನೂನು ಕ್ರಮ ಜರುಗಬೇಕು. ಹಾಗೆಯೇ ಕೆಲವು ಸಲ ವಿನಾಕಾರಣ ಸಾಮೂಹಿಕ ಥಳಿತದ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಅದು ಕೂಡ ತಪ್ಪು" ಎಂದು ಭಾಗವತ್‌ ಹೇಳಿದರು. ''ರಾಜಕಾರಣವು ಜನರನ್ನು ಒಂದುಗೂಡಿಸುವುದಿಲ್ಲ. ರಾಜಕಾರಣವು ಜನರನ್ನು ಒಂದುಗೂಡಿಸುವ ಸಾಧನವೂ ಅಲ್ಲ. ಭಾರತದಲ್ಲಿನ ಮುಸ್ಲಿಮರು ಅಪಾಯದಲ್ಲಿದ್ದಾರೆ ಎನ್ನುವುದು ನಿಜವಲ್ಲ. ದೇಶದಲ್ಲಿಇಸ್ಲಾಂ ಅಪಾಯದಲ್ಲಿದೆ ಎಂದು ಭ್ರಮೆ ಸೃಷ್ಟಿಸುವವರ ಜಾಲಕ್ಕೆ ಯಾರೂ ಸಿಲುಕಬಾರದು. ಏಕೆಂದರೆ ದೇಶದ ಅಭಿವೃದ್ಧಿ ಸಾಧ್ಯವಾಗುವುದು ಒಗ್ಗಟ್ಟಿನಿಂದ ಮಾತ್ರ. ಅಂತಹ ಒಗ್ಗಟ್ಟು ಸಾಧಿಸಲು ರಾಷ್ಟ್ರೀಯತೆಯೊಂದೇ ಸಾಧನ" ಎಂದು ಅವರು ಹೇಳಿದರು. ''ಸಂಘಕ್ಕೆ ಯಾವುದೇ ರೀತಿಯ ವರ್ಚಸ್ಸು ನಿಭಾಯಿಸುವ ಅಗತ್ಯವಿಲ್ಲ ಮತ್ತು ಸಂಘವು ರಾಜಕಾರಣದಲ್ಲಿ ಭಾಗಿ ಆಗಿಯೂ ಇಲ್ಲ. ಕೇವಲ ರಾಷ್ಟ್ರ ನಿರ್ಮಾಣ ಮತ್ತು ಸಮಾಜದ ಎಲ್ಲ ವರ್ಗಗಳ ಕಲ್ಯಾಣಕ್ಕಾಗಿ ಮಾತ್ರವೇ ಸಂಘವು ಶ್ರಮಿಸುತ್ತಿದೆ. ಅದೇ ರೀತಿ, ಮುಸ್ಲಿಂ ರಾಷ್ಟ್ರೀಯ ಮಂಚ್‌ ಕಾರ್ಯಕ್ರಮದಲ್ಲಿ ತಾವು ಭಾಗಿಯಾಗಿರುವುದು ಕೂಡ ಮತ ಬ್ಯಾಂಕ್‌ ರಾಜಕಾರಣ ಅಥವಾ ವರ್ಚಸ್ಸು ಕಾಯ್ದುಕೊಳ್ಳಲು ಅಲ್ಲ" ಎಂದು ಭಾಗವತ್‌ ಸ್ಪಷ್ಟಪಡಿಸಿದರು.