ಶರದ್ ಪವಾರ್ ವಿರುದ್ಧ ಹೇಳಿಕೆ: ಬಿಜೆಪಿ ಶಾಸಕ, ಸಹೋದರನ ವಿರುದ್ಧ ಎಫ್‌ಐಆರ್

ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ವಿರುದ್ಧ ಅವಹೇಳನಾಕಾರಿ ಮತ್ತು ಗಲಭೆಗೆ ಪ್ರಚೋದನೆ ನೀಡುವ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕೇಂದ್ರ ಸಚಿವ ನಾರಾಯಣ ರಾಣೆ ಅವರ ಮಕ್ಕಳಾದ ಬಿಜೆಪಿ ಶಾಸಕ ನಿತೇಶ್ ರಾಣೆ ಹಾಗೂ ಅವರ ಸಹೋದರ ನೀಲೇಶ್ ರಾಣೆ ವಿರುದ್ಧ ಎನ್‌ಸಿಪಿ ಮುಖಂಡರೊಬ್ಬರು ನೀಡಿದ ದೂರಿನ ಅನ್ವಯ ಎಫ್‌ಐಆರ್ ದಾಖಲು ಮಾಡಲಾಗಿದೆ. ಎನ್‌ಸಿಪಿ ಪದಾಧಿಕಾರಿ ಶ್ರೀನಿವಾಸ್ ಅಲಿಯಾಸ್ ವೆಂಕಟರಾವ್ ಸೂರಜ್ ಚವಾಣ್ ಅವರು ನೀಡಿದ್ದ ದೂರಿನ ಅನ್ವಯ ಎಫ್‌ಐಆರ್ ದಾಖಲು ಮಾಡಲಾಗಿದೆ.

ಶರದ್ ಪವಾರ್ ವಿರುದ್ಧ ಹೇಳಿಕೆ: ಬಿಜೆಪಿ ಶಾಸಕ, ಸಹೋದರನ ವಿರುದ್ಧ ಎಫ್‌ಐಆರ್
Linkup
ಮುಂಬಯಿ: ಮುಖ್ಯಸ್ಥ ಅವರ ವಿರುದ್ಧ ಹೇಳಿಕೆ ನೀಡಿದ ಆರೋಪದಲ್ಲಿ ಬಿಜೆಪಿ ಶಾಸಕ ನಿತೀಶ್ ರಾಣೆ ಮತ್ತು ಅವರ ಸಹೋದರ ನೀಲೇಶ್ ರಾಣೆ ವಿರುದ್ಧ ಮುಂಬಯಿ ಪೊಲೀಸರು ಭಾನುವಾರ ಎಫ್‌ಐಆರ್ ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆ 120 ಬಿ (ಅಪರಾಧ ಸಂಚು), 499 (ಮಾನಹಾನಿ), 153 (ಗಲಭೆ ಸೃಷ್ಟಿಸುವ ಉದ್ದೇಶದಿಂದ ಪ್ರಚೋದನಾಕಾರಿ ಹೇಳಿಕೆ ನೀಡುವುದು) ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿ ಆಜಾದ್ ಮೈದಾನ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಎನ್‌ಸಿಪಿ ಪದಾಧಿಕಾರಿ ಶ್ರೀನಿವಾಸ್ ಅಲಿಯಾಸ್ ವೆಂಕಟರಾವ್ ಸೂರಜ್ ಚವಾಣ್ ಅವರು ನೀಡಿದ್ದ ದೂರಿನ ಅನ್ವಯ ಎಫ್‌ಐಆರ್ ದಾಖಲು ಮಾಡಲಾಗಿದೆ. ಕೇಂದ್ರ ಸಚಿವ ನಾರಾಯಣ ರಾಣೆ ಅವರ ಮಕ್ಕಳಾದ ರಾಣೆ ಸಹೋದರರು ಅವಹೇಳನಾಕಾರಿ ಹೇಳಿಕೆ ನೀಡಿದ್ದಾರೆ ಎನ್ನಲಾದ ಕೆಲವು ವಿಡಿಯೋಗಳನ್ನು ಚವಾಣ್ ಅವರು ಪೊಲೀಸರಿಗೆ ನೀಡಿದ್ದಾರೆ. ಕಳೆದ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಅವರು, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಎನ್‌ಸಿಪಿ ಮುಖ್ಯ ವಕ್ತಾರ ಹಾಗೂ ಸಚಿವ ಅವರನ್ನು ಬಂಧಿಸಿದ್ದರೂ ಶರದ್ ಪವಾರ್ ಅವರು ಅವರಿಂದ ಏಕೆ ರಾಜೀನಾಮೆ ಪಡೆದಿಲ್ಲ ಎಂದು ಪ್ರಶ್ನಿಸಿದ್ದರು. ಶರದ್ ಪವಾರ್ ಅವರು ಕೂಡ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಹವರ್ತಿಯಾಗಿರಬಹುದು ಎಂದು ಶಾಸಕ ರಾಣೆ ಹೇಳಿದ್ದರು ಎಂಬುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಅದೇ ದಿನ ಮಾಜಿ ಸಂಸದ ನೀಲೇಶ್ ರಾಣೆ ಅವರು ಕೂಡ ಟ್ವಿಟ್ಟರ್‌ನಲ್ಲಿ ಇದೇ ರೀತಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ದೂರಿನಲ್ಲಿ ಅವರು ಉಲ್ಲೇಖಿಸಿದ್ದಾರೆ. "ಅಪರಾಧವೊಂದು ದಾಖಲಾದರೆ ಏನು ಮಾಡಬೇಕು ಎಂದು ನಾವು ಪೊಲೀಸರಿಗೆ ಹೇಳುತ್ತೇವೆ. ನಾವು ಹೇಳಿದ್ದರಲ್ಲಿ ಯಾವ ತಪ್ಪಿದೆ? ನಾವು ಹಿಂದುತ್ವದ ಜತೆಗಿದ್ದೇವೆ. ನಾವು ಗಲಭೆ ಹುಟ್ಟಿಸಲು ಪ್ರಯತ್ನಿಸಿಲ್ಲ. ಹಿಂದುತ್ವದ ಪರ ಇರುವುದು ತಪ್ಪು ಎನ್ನುವುದಾದರೆ ನಾವು ಆ ತಪ್ಪನ್ನು ನೂರು ಬಾರಿ ಮಾಡುತ್ತೇವೆ" ಎಂದು ನಿತೇಶ್ ರಾಣೆ ಗುಡುಗಿದ್ದಾರೆ. "ಅಲ್ಪಸಂಖ್ಯಾತ ಖಾತೆ ಸಚಿವ ನವಾಬ್ ಮಲಿಕ್ ಅವರು ಮುಸ್ಲಿಂ ಸಮುದಾಯಕ್ಕೆ ಸೇರಿರುವುದರಿಂದ ಅವರನ್ನು ದಾವೂದ್ ಇಬ್ರಾಹಿಂ ಜತೆ ಥಳಕು ಹಾಕಲಾಗುತ್ತಿದೆ ಎಂದು ಪವಾರ್ ಆರೋಪಿಸಿದ್ದಾರೆ. ಹಾಗಾದರೆ ಮಹಾರಾಷ್ಟ್ರ ಸಚಿವ ಅನಿಲ್ ದೇಶ್‌ಮುಖ್ ಅವರನ್ನು ಹಿಂದೂ ಎಂಬ ಕಾರಣಕ್ಕೆ ರಾಜೀನಾಮೆ ನೀಡಲು ಕೇಳಿದ್ದೇವೆಯೇ ಎಂದು ನಾನು ಪ್ರಶ್ನಿಸಿದ್ದೇನೆ. ನಾವು ಪವಾರ್ ಸಾಹೇಬರು ಪ್ರಸ್ತಾಪಿಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಲು ಪ್ರಯತ್ನ ಮಾಡಿದ್ದೇವಷ್ಟೇ. ಇದರಲ್ಲಿ ಗಲಭೆಗೆ ಪ್ರಚೋದನೆ ನೀಡುವ ಪ್ರಶ್ನೆ ಎಲ್ಲಿದೆ?" ಎಂದು ಅವರು ಕೇಳಿದ್ದಾರೆ.