ಕಾಂಗ್ರೆಸ್ಸಿಗರ ರೀತಿ ಅಳುವುದನ್ನು ನಿಲ್ಲಿಸಿ: ಬಿಜೆಪಿ ದಿಲ್ಲಿ ಡಿಸಿಎಂ ಮನೀಶ್ ಸಿಸೋಡಿಯಾ ಚಾಟಿ

ದಿಲ್ಲಿ ಮುನಿಸಿಪಲ್ ಕಾರ್ಪೊರೇಷನ್ ಚುನಾವಣೆ (ಎಂಸಿಡಿ) ದಿನಾಂಕ ಪ್ರಕಟಿಸಲು ತಡ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿರುವ ದಿಲ್ಲಿ ಡಿಸಿಎಂ ಮನೀಶ್ ಸಿಸೋಡಿಯಾ, ಕಾಂಗ್ರೆಸ್ ರೀತಿ ಅಳುವುದನ್ನು ನಿಲ್ಲಿಸಿ, ಮೊದಲು ಚುನಾವಣೆ ಪ್ರಕಟಿಸಿ ಎಂದು ಬಿಜೆಪಿಗೆ ತಾಕೀತು ಮಾಡಿದ್ದಾರೆ.

ಕಾಂಗ್ರೆಸ್ಸಿಗರ ರೀತಿ ಅಳುವುದನ್ನು ನಿಲ್ಲಿಸಿ: ಬಿಜೆಪಿ ದಿಲ್ಲಿ ಡಿಸಿಎಂ ಮನೀಶ್ ಸಿಸೋಡಿಯಾ ಚಾಟಿ
Linkup
ಹೊಸದಿಲ್ಲಿ: ದಿಲ್ಲಿ ಮುನಿಸಿಪಲ್ ಕಾರ್ಪೊರೇಷನ್ (ಎಂಸಿಡಿ) ಚುನಾವಣೆಯನ್ನು ಘೋಷಣೆ ಮಾಡುವುದರಲ್ಲಿ ವಿಳಂಬ ಮಾಡುತ್ತಿರುವ ವಿಚಾರದಲ್ಲಿ ವಿರುದ್ಧ ವಾಗ್ದಾಳಿ ನಡೆಸಿರುವ ದಿಲ್ಲಿ ಉಪ ಮುಖ್ಯಮಂತ್ರಿ , ಬಿಜೆಪಿಯವರು ಕಾಂಗ್ರೆಸ್ಸಿಗರ ರೀತಿ ಅಳುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ. "ಕಾಂಗ್ರೆಸ್ ರೀತಿ ಅಳುವುದನ್ನು ನಿಲ್ಲಿಸಿ. ನಿಮಗೆ ಧೈರ್ಯವಿದ್ದರೆ ಓಡಬೇಡಿ, ನಮ್ಮ ಜತೆ ಎಂಸಿಡಿ ಚುನಾವಣೆಯಲ್ಲಿ ಸ್ಪರ್ಧಿಸಿ ಹೋರಾಟ ನಡೆಸಿ. ನೀವು 10 ಸೀಟುಗಳನ್ನು ಪಡೆಯುವುದು ಸಾಧ್ಯವಾದರೂ ಅದು ನಿಮಗೆ ದೊಡ್ಡ ಸಾಧನೆಯಾಗಲಿದೆ" ಎಂದು ಸಿಸೋಡಿಯಾ ಶುಕ್ರವಾರ ವ್ಯಂಗ್ಯವಾಡಿದ್ದಾರೆ. ದಿಲ್ಲಿ ಸರ್ಕಾರವು ಎಂಸಿಡಿ ಉದ್ಯೋಗಿಗಳಿಗೆ 13,000 ಕೋಟಿ ರೂ ವಂಚನೆ ಮಾಡುತ್ತಿದೆ ಎಂದು ಕೇಂದ್ರ ಸಚಿವೆ ಅವರು ಆರೋಪಿಸಿದ ಬಳಿಕ ಸಿಸೋಡಿಯಾ ಈ ಹೇಳಿಕೆ ನೀಡಿದ್ದಾರೆ. ಇದಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸಿದ್ದ ದಿಲ್ಲಿ ಮುಖ್ಯಮಂತ್ರಿ , ರಾಷ್ಟ್ರ ರಾಜಧಾನಿಯಲ್ಲಿನ ಪಾಲಿಕೆ ಚುನಾವಣೆಯನ್ನು ಮುಂದೂಡುತ್ತಿರುವ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ರೀತಿಯ ವಿಳಂಬ ನೀತಿಯು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಎಂದು ಅವರು ಆರೋಪಿಸಿದ್ದರು. "ದಿಲ್ಲಿಯಲ್ಲಿನ ಎಂಸಿಡಿ ಚುನಾವಣೆಯಲ್ಲಿನ ವಿಳಂಬದ ಬಗ್ಗೆ ಕೇಜ್ರಿವಾಲ್ ಸುದ್ದಿಗೋಷ್ಠಿ ನಡೆಸಿದ್ದರು. ನಾನು ಅವರಿಗೆ ಕೇಳಲು ಬಯಸುತ್ತೇನೆ... ಕಳೆದ ವರ್ಷ ನಗರ ನಿಗಮ ಸುಧಾರಣೆಗೆ ಕೇಳಿರುವುದು ಅವರಿಗೆ ತಿಳಿದಿದೆಯೇ? ದಿಲ್ಲಿ ಸರ್ಕಾರ ಉದ್ದೇಶಪೂರ್ವಕವಾಗಿ ಎಂಸಿಡಿ ಉದ್ಯೋಗಿಗಳಿಗೆ 13,000 ಕೋಟಿ ರೂ ವಂಚಿಸುತ್ತಿದ್ದಾರೆ. ನಗರ ನಿಗಮ ಖಜಾನೆಯನ್ನು ಖಾಲಿ ಮಾಡಲು ಕೇಜ್ರಿವಾಲ್ ಬಯಸಿದ್ದಾರೆ" ಎಂದು ಸ್ಮೃತಿ ಇರಾನಿ ಆರೋಪಿಸಿದ್ದರು. ಎಂಸಿಡಿ ಬ್ಯಾಂಕ್ ಖಾತೆಗೆ ಕೇಜ್ರಿವಾಲ್ ಅವರು 13,000 ಕೋಟಿ ರೂ ಹಣವನ್ನು ಜಮೆ ಮಾಡಬೇಕು ಎಂದು ಸ್ಮೃತಿ ಆಗ್ರಹಿಸಿದ್ದರು. ಇದಕ್ಕೂ ಮುನ್ನ, ಚುನಾವಣಾ ಆಯೋಗವು ಕಾನೂನಾತ್ಮಕವಾಗಿ ಪರಿಶೀಲಿಸಬೇಕಾದ ಕೆಲವು ಸಮಸ್ಯೆಗಳ ಕುರಿತು ಕೇಂದ್ರ ಸರ್ಕಾರ ಪ್ರಸ್ತಾಪಿಸಿದ್ದರಿಂದ ದಿಲ್ಲಿ ಪಾಲಿಕೆ ಚುನಾವಣೆಯ ದಿನಾಂಕದ ಪ್ರಕಟಣೆಯನ್ನು ಕೇಂದ್ರ ಮುಂದೂಡಿದೆ ಎಂದು ರಾಜ್ಯ ಚುನಾವಣಾ ಆಯುಕ್ತ ಎಸ್‌ಕೆ ಶ್ರೀವಾಸ್ತವ ಹೇಳಿದ್ದರು. ದಿಲ್ಲಿಯ ಮೂರು ಮುನಿಸಿಪಲ್ ಕಾರ್ಪೊರೇಷನ್‌ಗಳನ್ನು ಒಗ್ಗೂಡಿಸುವ ಸಂಬಂಧ ಬಜೆಟ್ ಅಧಿವೇಶನದಲ್ಲಿ ಮಸೂದೆ ಮಂಡಿಸಲು ಕೇಂದ್ರ ಸರ್ಕಾರ ಆಲೋಚನೆ ಮಾಡುತ್ತಿದೆ ಎಂದಿದ್ದರು. ಈ ವೇಳೆಗೆ ಚುನಾವಣಾ ದಿನಾಂಕ ಪ್ರಕಟಿಸಲು ಸಿದ್ಧತೆ ನಡೆಸಿದ್ದವು. ಆದರೆ ಅದರ ಪ್ರಕಟಣೆಗೆ ಐದರಿಂದ ಏಳು ದಿನ ಬೇಕಾಗಬಹುದು ಎಂದು ತಿಳಿಸಿದ್ದರು.