ಶ್ರೀ ಕೃಷ್ಣನಂತೆ ಪ್ರಧಾನಿ ಮೋದಿ ಇಂದು ಧರ್ಮ ರಕ್ಷಣೆ ಮಾಡುತ್ತಿದ್ದಾರೆ; ಸಂಸದ ತೇಜಸ್ವಿ ಸೂರ್ಯ

ಧರ್ಮ ಸಂರಕ್ಷಣೆ ಸಕ್ರಿಯಗೊಳ್ಳದಿದ್ದರೆ ಆಗುವ ಅನಾಹುತಕ್ಕೆ ಇಂದಿನ ಅಫಘಾನಿಸ್ತಾನವೇ ಸಾಕ್ಷಿ. ಸಮಾಜಕ್ಕೆ ಅಗತ್ಯವಿರುವ ಧರ್ಮ, ಸಂಸ್ಕೃತಿಯ ಮೌಲ್ಯಗಳನ್ನು ರಕ್ಷಿಸಲು ಕಾಲಕ್ಕೆ ತಕ್ಕಂತೆ ಅವತಾರ ಪುರುಷರು, ಜನ ನಾಯಕರು ಜನ್ಮತಾಳುತ್ತಾರೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.

ಶ್ರೀ ಕೃಷ್ಣನಂತೆ ಪ್ರಧಾನಿ ಮೋದಿ ಇಂದು ಧರ್ಮ ರಕ್ಷಣೆ ಮಾಡುತ್ತಿದ್ದಾರೆ; ಸಂಸದ ತೇಜಸ್ವಿ ಸೂರ್ಯ
Linkup
ಬೆಂಗಳೂರು: ಧರ್ಮ ನಿಷ್ಠ ರಾಜಕಾರಣಕ್ಕೆ ಕೊನೆಯಿಲ್ಲ. ಶ್ರೀಕೃಷ್ಣನ ಕಾಲದಲ್ಲಿ ಧರ್ಮನಿಷ್ಠ ರಾಜಕಾರಣ ವಿಸ್ತರಿಸಿರುವುದು ಕಾಣಬಹುದು. ಅಂತೆಯೇ ಪ್ರಧಾನಿ ಇಂದು ಧರ್ಮ ರಕ್ಷಣೆ ಮಾಡುತ್ತಿದ್ದಾರೆ ಎಂದು ಸಂಸದ ಹೇಳಿದರು. ನಗರದಲ್ಲಿ ಭಾನುವಾರ ಸಂಜೆ ಜರುಗಿದ ನಾಗರಾಜ ರಚಿತ 'ಧರ್ಮ ಸಂರಕ್ಷಕ ಶ್ರೀ ಕೃಷ್ಣ' ಕೃತಿ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಧರ್ಮ ಸಂರಕ್ಷಣೆ ಸಕ್ರಿಯಗೊಳ್ಳದಿದ್ದರೆ ಆಗುವ ಅನಾಹುತಕ್ಕೆ ಇಂದಿನ ಅಫಘಾನಿಸ್ತಾನವೇ ಸಾಕ್ಷಿ. ಸಮಾಜಕ್ಕೆ ಅಗತ್ಯವಿರುವ ಧರ್ಮ, ಸಂಸ್ಕೃತಿಯ ಮೌಲ್ಯಗಳನ್ನು ರಕ್ಷಿಸಲು ಕಾಲಕ್ಕೆ ತಕ್ಕಂತೆ ಅವತಾರ ಪುರುಷರು, ಜನ ನಾಯಕರು ಜನ್ಮತಾಳುತ್ತಾರೆ ಎಂದರು. ನಿರ್ದೇಶಕ ಪಿ.ಶೇಷಾದ್ರಿ ಮಾತನಾಡಿ, ಯುವ ಪೀಳಿಗೆಗೆ ಇದು ಅಗತ್ಯ ಮತ್ತು ತುರ್ತು ಪುಸ್ತಕ. ಸ್ಮರಣಿಕೆ, ಶಾಲು, ಹೂವು ಊಡುಗೊರೆಯಾಗಿ ನೀಡುವ ಬದಲಾಗಿ ಪುಸ್ತಕ ನೀಡಿ ಎಂದು ಸರಕಾರವೇ ಹೇಳಿದೆ. ತತ್ವಾಧಾರಿತ ಪುಸ್ತಕ ನೀಡಿ ಜ್ಞಾನ ಭಂಡಾರವನ್ನು ಯುವಕರು ವಿಸ್ತರಿಸಬೇಧಿಕು ಎಂದು ಕರೆ ನೀಡಿದರು. ಕಷ್ಟಕಾಲದಲ್ಲಿ ಆತ್ಮ ವಿಮರ್ಶೆ ಮಾಡಿಕೊಳ್ಳುವುದು ಶ್ರೀಕೃಷ್ಣ ಕಲಿಸಿದ ಪಾಠ. ದುರ್ಬಲ ಮನಸ್ಥಿತಿಯವರು ಕೃಷ್ಣನ ತತ್ವಗಳನ್ನು ಅನುಸರಿಸಬೇಧಿಕು ಎಂದು ಸಲಹೆ ಮಾಡಿದರು. ವಿಜಯವಾಣಿ ಸಂಪಾದಕ ಚನ್ನೇಗೌಡ ಮಾತನಾಡಿ, ಪ್ರಸ್ತುತ ರಾಜಕೀಯ ಸಂದಿಗ್ಧತೆಯಲ್ಲಿ ಶ್ರೀಕೃಷ್ಣನ ತತ್ವಗಳೇ ಮಾದರಿ. ಯುವಕರು ಅಧ್ಯಯನ ಶೀಲರಾಗಿ ತತ್ವಬೋಧನೆಗಳನ್ನು ಅಳವಡಿಸಿಕೊಳ್ಳಬೇಕು ಎಂದರು.