![](https://vijaykarnataka.com/photo/83308030/photo-83308030.jpg)
ಇದು ನಿಜಕ್ಕೂ ಆತಂಕದ ಸಮಯ. ಹಾಗಂತ ಧೈರ್ಯಗೆಡುವಂತಿಲ್ಲ. ಸಾಧ್ಯವಾದಷ್ಟು ಧೈರ್ಯದಿಂದ ಇದ್ದು, ಕೋವಿಡ್ ಅನ್ನು ಗೆಲ್ಲಬೇಕಿದೆ. ಸದ್ಯ ಕೋವಿಡ್ 2ನೇ ಅಲೆಯಿಂದಾಗಿ ಮತ್ತೆ ಲಾಕ್‌ಡೌನ್ ಜಾರಿಯಾಗಿದೆ. ಒಂದು ಕಡೆ ಆರೋಗ್ಯ ಸಮಸ್ಯೆಯಿಂದ ಜನರು ನರಳುತ್ತಿದ್ದಾರೆ. ಮತ್ತೊಂದು ಕಡೆ ಕೆಲಸವಿಲ್ಲದೆ, ಒಂದಷ್ಟು ಜನರು ಒಂದೊತ್ತಿನ ಊಟಕ್ಕೂ ಪರಿತಪಿಸುವಂತೆ ಆಗಿದೆ. ಒಟ್ಟಿನಲ್ಲಿ ಇಡೀ ಜಗತ್ತೇ ಈ ಮಹಾಮಾರಿಯಿಂದಾಗಿ ನಲುಗುವಂತೆ ಆಗಿದೆ. ಇಂತಹ ಸಮಯದಲ್ಲಿ ಜನರಲ್ಲಿ ಧೈರ್ಯ ತುಂಬುವಂತಹ ಕೆಲಸ ಮಾಡಿದ್ದಾರೆ ನಟಿ .
ಬಹಳ ಸಮಯದ ನಂತರ ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಒಂದು ಪೋಸ್ಟ್ ಮಾಡಿರುವ ರಾಧಿಕಾ ಅವರು, 'ಈಗ ಇರುವುದು ತುಂಬ ಕಷ್ಟದ ಸಮಯ. ನಾವೆಲ್ಲರೂ ಬಹಳ ನೋವು ಅನುಭವಿಸಿದ್ದೇವೆ. ನಮ್ಮ ಆತ್ಮೀಯರನ್ನು ನಾವು ಕಳೆದುಕೊಂಡಿದ್ದೇವೆ. ಎಲ್ಲರಿಗೂ ಈಗ ಹತಾಶೆ, ಭಯ ಕಾಡುತ್ತಿದೆ. ಮುಂದೇನಾಗುವುದೋ ಎಂಬ ಆತಂಕವಂತೂ ಇದ್ದೇ ಇದೆ ಎಂಬುದು ನನಗೆ ತಿಳಿದಿದೆ. ಆದರೆ ದಯವಿಟ್ಟು ಎಲ್ಲರೂ ಒಂದು ಮಾತನ್ನು, ಪ್ರತಿ ದಿನವೂ ನಿಮಗೆ ನೀವೇ ಹೇಳಿಕೊಳ್ಳಿ. ಈ ಪರಿಸ್ಥಿತಿ ಎಷ್ಟೇ ಕೆಟ್ಟದಾಗಿದ್ದರೂ, ನಾವು ನಮ್ಮ ಮೇಲೆ ಭರವಸೆ, ನಂಬಿಕೆ ಇಟ್ಟುಕೊಳ್ಳುತ್ತೇವೆ ಮತ್ತು ಇದರ ವಿರುದ್ಧ ಜೊತೆಯಾಗಿ ಹೋರಾಡುತ್ತೇವೆ' ಎಂದು ಪೋಸ್ಟ್ ಹಾಕಿದ್ದಾರೆ.
ಜೊತೆಗೆ ಅವರು ಈ ಕೊರೊನಾ ಸಮಯದಲ್ಲಿ ಹಿತೈಷಿಗಳು, ಅಭಿಮಾನಿಗಳ ಸಂಪರ್ಕದಲ್ಲಿ ಇರಲು ಸಾಧ್ಯವಾಗಿರಲಿಲ್ಲ. ಹೀಗೆ ಸಂಪರ್ಕದಲ್ಲಿ ಇರಲು ಸಾಧ್ಯವಾಗದೇ ಇರುವುದಕ್ಕೆ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ. ಜೊತೆಗೆ ಎಲ್ಲರಲ್ಲಿಯೂ ನಗು ಮೂಡಿಸುವ ಸಲುವಾಗಿ ಸಕಾರಾತ್ಮಕ ವಿಚಾರಗಳ ಕುರಿತು ಪೋಸ್ಟ್ ಹಾಕುವುದಾಗಿ ಅವರು ಹೇಳಿದ್ದಾರೆ.
ಚಿತ್ರೋದ್ಯಮಕ್ಕೆ ಆಸರೆಯಾದ
ಇತ್ತ ರಾಧಿಕಾ ಪಂಡಿತ್ ಧೈರ್ಯ ತುಂಬುವ ಕೆಲಸ ಮಾಡಿದರೆ, ಅತ್ತ ಪತಿ 'ರಾಕಿಂಗ್ ಸ್ಟಾರ್' ಯಶ್ ಅವರು ಚಿತ್ರೋದ್ಯಮಕ್ಕೆ ಆರ್ಥಿಕವಾಗಿ ಆಸರೆಯಾಗಿದ್ದರು. ತಮ್ಮ ಸಂಪಾದನೆಯ ಹಣದಲ್ಲಿ ಸುಮಾರು 1.5 ಕೋಟಿ ರೂ.ಗಳಿಗಿಂತಲೂ ಹೆಚ್ಚಿನ ಹಣವನ್ನು ಸುಮಾರು 3000ಕ್ಕೂ ಅಧಿಕ ಸಿನಿಮಾ ಕಲಾವಿದರು, ತಂತ್ರಜ್ಞರು, ಕಾರ್ಮಿಕರಿಗೆ ನೀಡಿದ್ದರು. ಪ್ರತಿಯೊಬ್ಬರ ಅಧಿಕೃತ ಬ್ಯಾಂಕ್ ಖಾತೆಗಳ ಮಾಹಿತಿ ಪಡೆದುಕೊಂಡು, ನೇರವಾಗಿ ಪ್ರತಿಯೊಬ್ಬರಿಗೂ ತಲಾ 5 ಸಾವಿರ ರೂ.ಗಳನ್ನು ಯಶ್ ನೀಡಿದ್ದರು.