Shivarajkumar: ಶಿವಣ್ಣನ ಹೊಸ ಸಿನಿಮಾಕ್ಕೆ ಟೈಟಲ್ ಆಯ್ತು 'ಭಜರಂಗಿ 2' ಚಿತ್ರದ ಹಾಡು!

ನಟ ಶಿವರಾಜ್‌ಕುಮಾರ್ ಅವರ 124ನೇ ಸಿನಿಮಾಕ್ಕೆ ಮುಹೂರ್ತ ನೆರವೇರಿದೆ. 'ಕಿಚ್ಚ' ಸುದೀಪ್‌ ಅವರು ಮುಖ್ಯಅತಿಥಿಯಾಗಿ ಆಗಮಿಸಿ, ಚಿತ್ರತಂಡಕ್ಕೆ ಹಾರೈಸಿದ್ದಾರೆ. ಇದೇ ವೇಳೆ ಚಿತ್ರದ ಶೀರ್ಷಿಕೆ ಬಗ್ಗೆ ಶಿವಣ್ಣ ಆಸಕ್ತಿಕರ ವಿಚಾರವೊಂದನ್ನು ಹೇಳಿಕೊಂಡಿದ್ದಾರೆ.

Shivarajkumar: ಶಿವಣ್ಣನ ಹೊಸ ಸಿನಿಮಾಕ್ಕೆ ಟೈಟಲ್ ಆಯ್ತು 'ಭಜರಂಗಿ 2' ಚಿತ್ರದ ಹಾಡು!
Linkup
'ಹ್ಯಾಟ್ರಿಕ್ ಹೀರೋ' ಅವರ 124ನೇ ಸಿನಿಮಾಕ್ಕೆ ಮುಹೂರ್ತ ನೆರವೇರಿದೆ. ಈಚೆಗೆ ರಿಲೀಸ್ ಆದ 'ಭಜರಂಗಿ 2' ಚಿತ್ರದ ಹಾಡೊಂದರ ಸಾಲನ್ನೇ ಶೀರ್ಷಿಕೆ ಮಾಡಿರುವುದು ವಿಶೇಷ. 'ಒಳ್ಳೆಯ ದಿನ ಅಂತ ಮಂಗಳವಾರ (ಆ.17) ಮುಹೂರ್ತ ಮಾಡಿದ್ದೇವೆ. ಮಫ್ತಿ, ಟಗರು, ದಿ ವಿಲನ್ ಥರದ ಡಿಫರೆಂಟ್ ಸಿನಿಮಾಗಳನ್ನು ಮಾಡಿದ್ದೇನೆ. ಈಗ ಲವ್ ಸ್ಟೋರಿ ಸಿನಿಮಾ ಮಾಡ್ತಾ ಇದ್ದೇನೆ. ಈ ಸಿನಿಮಾ ಟೈಟಲ್ ನಾನೇ ಸಜೆಸ್ಟ್ ಮಾಡಿದೆ. ಸಿನಿಮಾದಲ್ಲಿ ಒಂದು ಹುಡುಕಾಟ ಇದೆ. ಹಾಗಾಗಿ, ಒಂದು ಐಡಿಯಾ ಬಂತು. ನಮ್ಮ 'ಭಜರಂಗಿ 2' ಸಿನಿಮಾದಲ್ಲಿ '' ಅಂತ ಒಂದು ಹಾಡು ಇದೆ. ಅದು ನನಗೆ ಇಷ್ಟ. ಈ ಸಿನಿಮಾಗೆ 'ನೀ ಸಿಗೋವರೆಗೂ' ಅನ್ನೋದು ಸೂಟ್ ಆಗ್ತಾ ಇತ್ತು. ಅದಕ್ಕೆ ನಾನೇ ಸಜೆಸ್ಟ್ ಮಾಡಿದೆ' ಎಂದಿದ್ದಾರೆ ಶಿವಣ್ಣ 'ಇದೊಂದು ಎಮೋಷನಲ್ ಲವ್ ಸ್ಟೋರಿ.‌ ನನ್ನದು ಇದರಲ್ಲಿ ಎರಡು ರೀತಿ ಪಾತ್ರ. ನಿರ್ದೇಶಕರು ಚಿತ್ರಕಥೆ ಹೆಣೆದಿರುವ ರೀತಿ ತುಂಬಾ ಚೆನ್ನಾಗಿದೆ.‌ ಆ.19ರಿಂದ ಮೊದಲ ಹಂತದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು, ಚಿಕ್ಕಮಗಳೂರು, ಕಾಶ್ಮೀರ, ವಾರಣಾಸಿ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಮೆಹ್ರೀನ್ ನಾಯಕಿಯಾಗಿ ಪಿರ್ಜಾದಾ ನನ್ನೊಂದಿಗೆ ನಟಿಸಲಿದ್ದಾರೆ. ನಾಸರ್, ಸಂಪತ್ ಕುಮಾರ್, ಗಾಯಕಿ ಮಂಗ್ಲಿ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. 'ನನ್ನೊಂದಿಗೆ 'ಟಗರು' ಚಿತ್ರದಲ್ಲಿ ಕೆಲಸ ಮಾಡಿದ್ದ ಸಂಗೀತ ನಿರ್ದೇಶಕ ಚರಣ್ ರಾಜ್ ಈ ಚಿತ್ರಕ್ಕೂ ಸಂಗೀತ ನೀಡುತ್ತಿದ್ದಾರೆ. ಆ ಚಿತ್ರದ ಛಾಯಾಗ್ರಹಕ ಮಹೇಂದ್ರ ಸಿಂಹ ಈ ಚಿತ್ರಕ್ಕೂ ಛಾಯಾಗ್ರಹಕರಾಗಿದ್ದಾರೆ' ಎಂದು ತಮ್ಮ ಪಾತ್ರ ಹಾಗೂ ಚಿತ್ರತಂಡವನ್ನು ಪರಿಚಯಿಸಿದ ಶಿವಣ್ಣ, ಇಂತಹ ಕೊರೊನಾ ಸಂದರ್ಭದಲ್ಲಿ ಚಿತ್ರ ನಿರ್ಮಾಣಕ್ಕೆ ಮುಂದಾಗಿರುವ ನಿರ್ಮಾಪಕರನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಚಿತ್ರದ ಮೊದಲ ಸನ್ನಿವೇಶಕ್ಕೆ ಕಿಚ್ಚ ಆರಂಭ ಫಲಕ ತೋರಿದರು. ಗೀತಾ ಶಿವರಾಜಕುಮಾರ್ ಕ್ಯಾಮೆರಾ ಚಾಲನೆ ಮಾಡಿದರು. 'ಇದು ಶಿವರಾಜಕುಮಾರ್ ಅವರು ನಟಿಸುತ್ತಿರುವ 124ನೇ ಸಿನಿಮಾ ಅಂತ ತಿಳಿದು ಆಶ್ಚರ್ಯವಾಯಿತು. ಅದರಲ್ಲೂ ಪ್ರೇಮಕಥೆಯ ಚಿತ್ರಕ್ಕೆ ನಾಯಕನಾಗಿ ಅಭಿನಯಿಸುತ್ತಿರುವುದು ಹೆಚ್ಚು ಸಂತಸ ತಂದಿದೆ. ನಾವೆಲ್ಲ ನಮ್ಮ 124ನೇ ಸಿನಿಮಾದಲ್ಲಿ ತಂದೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತೇವೊ, ಏನೋ? ಆದರೆ ಶಿವಣ್ಣ ಈಗಲೂ ನಾಯಕನಾಗಿ ನಟಿಸುತ್ತಿದ್ದಾರೆ. ಅದಕ್ಕೆ ಕಾರಣ ಅವರ ಶ್ರದ್ಧೆ, ಸಿನಿಮಾದ ಮೇಲಿರುವ ಪ್ರೀತಿ. ಅವರು ಇನ್ನೂ ಎಷ್ಟು ಚಿತ್ರಗಳಲ್ಲಿ ಅಭಿನಯಿಸುವರೋ ಅಷ್ಟು ಚಿತ್ರಗಳಲ್ಲೂ ನಾಯಕರಾಗಿ ನಟಿಸಲಿ' ಎಂದು 'ಕಿಚ್ಚ' ಸುದೀಪ್ ಹಾರೈಸಿದರು. ಬಾಲಶ್ರೀರಾಮ್ ಸ್ಟುಡಿಯೋಸ್ ಲಾಂಛನದಲ್ಲಿ ಈ ಚಿತ್ರವನ್ನು ನರಾಲ ಶ್ರೀನಿವಾಸ್ ರೆಡ್ಡಿ , ಶ್ರೀಕಾಂತ್ ಧುಲಿಪುಡಿ ಹಾಗೂ ಸ್ವಾತಿ ವನಪಲ್ಲಿ ಅವರು ನಿರ್ಮಾಣ ಮಾಡುತ್ತಿದ್ದಾರೆ. ಕಾರ್ಯಕಾರಿ ನಿರ್ಮಾಪಕ ಕುಡಿಪುಡಿ ವಿಜಯ್ ಕುಮಾರ್, ಸಂಗೀತ ನಿರ್ದೇಶಕ ಚರಣ್ ರಾಜ್ , ಛಾಯಾಗ್ರಾಹಕ ಮಹೇಂದ್ರ ಸಿಂಹ ಹಾಗೂ ಕಲಾ ನಿರ್ದೇಶಕ ರವಿ ಸಂತೆಹಕ್ಲು ಈ ಸಿನಿಮಾಕ್ಕೆ ಕೆಲಸ ಮಾಡುತ್ತಿದ್ದಾರೆ. ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ 'ನೀ ಸಿಗೋವರೆಗೂ' ಚಿತ್ರ ನಿರ್ಮಾಣವಾಗಲಿದೆ.