Darshan: 'ಕೊಚ್ಚೆಗೆ ಕಲ್ಲು ಎಸೆಯುವುದಕ್ಕೆ ನಾನು ಇಷ್ಟಪಡುವುದಿಲ್ಲ'- ನಿರ್ದೇಶಕ ಇಂದ್ರಜಿತ್ ಲಂಕೇಶ್

'ಚಾಲೆಂಜಿಂಗ್ ಸ್ಟಾರ್' ದರ್ಶನ್ ಮತ್ತು ಇಂದ್ರಜಿತ್ ಲಂಕೇಶ್ ನಡುವಿನ ಜಟಾಪಟಿ ಹೊಸ ತಿರುವು ಪಡೆದುಕೊಂಡಿದೆ, ಶನಿವಾರ ದರ್ಶನ್ ಹೇಳಿದ ಮಾತುಗಳಿಗೆ ಇಂದು ಕೂಡ ಪ್ರತಿಕ್ರಿಯೆ ನೀಡಿರುವ ಇಂದ್ರಜಿತ್ ಲಂಕೇಶ್‌, 'ದರ್ಶನ್ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ' ಎಂದಿದ್ದಾರೆ!

Darshan: 'ಕೊಚ್ಚೆಗೆ ಕಲ್ಲು ಎಸೆಯುವುದಕ್ಕೆ ನಾನು ಇಷ್ಟಪಡುವುದಿಲ್ಲ'- ನಿರ್ದೇಶಕ ಇಂದ್ರಜಿತ್ ಲಂಕೇಶ್
Linkup
ನಟ ಮತ್ತು ನಿರ್ದೇಶಕ ನಡುವಿನ ಜಟಾಪಟಿ ದಿನಕ್ಕೊಂದು ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಮೈಸೂರಿನ ಹೋಟೆಲ್‌ವೊಂದರಲ್ಲಿ ದರ್ಶನ್ ಹಲ್ಲೆ ಮಾಡಿದ್ದಾರೆಂದು ಇಂದ್ರಜಿತ್ ಆರೋಪ ಮಾಡಿದ್ದರು. ಆ ಪ್ರಕರಣ ಬೇರೆ ಬೇರೆ ಆಯಾಮಗಳನ್ನು ಪಡೆದುಕೊಳ್ಳುತ್ತಿದೆ. ಇನ್ನು ಶನಿವಾರ (ಜುಲೈ 17) ಇಂದ್ರಜಿತ್ ಆರೋಪಗಳಿಗೆ ಖಡಕ್ ತಿರುಗೇಟು ನೀಡಿದ್ದರು ನಟ ದರ್ಶನ್. ಇದೀಗ ಆ ಬಗ್ಗೆ ಇಂದ್ರಜಿತ್ ಪ್ರತಿಕ್ರಿಯೆ ನೀಡಿದ್ದು, ' ಕೊಚ್ಚೆಗೆ ಕಲ್ಲು ಎಸೆಯುವುದಕ್ಕೆ ನನಗೆ ಇಷ್ಟವಿಲ್ಲ' ಎಂದಿದ್ದಾರೆ. ಮೂರು ಬಿಟ್ಟವರ ಬಗ್ಗೆ ಏನು ಮಾತನಾಡುವುದು? 'ನಟ ದರ್ಶನ್ ಹೇಳಿಕೆಯಿಂದ ನನಗೆ ನೋವಾಗಿಲ್ಲ, ನಾನು ವಿಚಲಿತನಾಗಿಲ್ಲ. ಮೂರು ಬಿಟ್ಟವರ ಬಗ್ಗೆ ಏನು ಮಾತನಾಡುವುದು? ಕೊಚ್ಚೆಗೆ ಕಲ್ಲು ಎಸೆಯುವುದಕ್ಕೆ ನನಗೆ ಇಷ್ಟವಿಲ್ಲ. ನಾನು ಕಾನೂನು ಮೂಲಕವೇ ಮುಂದೆ ಹೋಗ್ತಿನಿ. ಈಗ ವಕೀಲರನ್ನೇ ಭೇಟಿ ಮಾಡಲು ಹೋಗುತ್ತಿದ್ದೇನೆ. ಸುಮೊಟೊ ಕೇಸ್ ಆಗಿದೆ, ಎಫ್ಐಆರ್ ಕೂಡ ಆಗಿದೆ. ಅದರ ಬಗ್ಗೆ ಎಲ್ಲಾ ದಾಖಲೆಗಳು ನನ್ನ ಬಳಿ ಇದೆ. ಈ ಪ್ರಕರಣದಿಂದ ನಾನೇನೂ ಡಿಸ್ಟರ್ಬ್ ಆಗಿಲ್ಲ' ಎಂದಿದ್ದಾರೆ ಇಂದ್ರಜಿತ್. ದರ್ಶನ್ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ!'ದರ್ಶನ್ ಅವರೇ ಮೂರು ಬಿಟ್ಟಿದ್ದೀನಿ ಅಂದಮೇಲೆ, ನಾನೇನೂ ಮಾತನಾಡಲಿ? ಸತತವಾಗಿ ಇದು ನಡೆಯುತ್ತಲೇ ಇವೆ. ದರ್ಶನ್ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ. ಅವರು ಸಹಾಯ ತೆಗೆದುಕೊಳ್ಳುವುದು ಒಳ್ಳೆಯದು. ಅವರು ಚಿಕಿತ್ಸೆ ತೆಗೆದುಕೊಳ್ಳುವುದು ಉತ್ತಮ. ಅವರ ಹತ್ತಿರದವರು ಮೆಸೇಜ್ ಶೇರ್ ಮಾಡಿಕೊಂಡಿದ್ದಾರೆ. ನಾನು ಅದನ್ನೆಲ್ಲ ಎಲ್ಲಿ ತಲುಪಿಸಬೇಕೋ ಅಲ್ಲಿ ತಲುಪಿಸುತ್ತೇನೆ. ನಾನು ಅದನ್ನೆಲ್ಲ ಮಾಧ್ಯಮಗಳ ಮುಂದೆ ಹೇಳುವುದಕ್ಕೆ ಆಗಲ್ಲ. ಸಮಾಜಕ್ಕೆ ಒಳ್ಳೆಯದಾಗಲಿ ಅಂತ ಇದನ್ನೆಲ್ಲ ಮಾಡುತ್ತಿದ್ದೇನೆ' ಎಂದಿದ್ದಾರೆ ಅವರು. ಇಂದ್ರಜಿತ್‌ಗೆ ದರ್ಶನ್ ಹಾಕಿದ್ದ ಸವಾಲೇನು? ಶನಿವಾರ ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ನಟ ದರ್ಶನ್, 'ಇಂದ್ರಜಿತ್ ಲಂಕೇಶ್ ಅವರು ಅಪ್ಪನಿಗೆ ಹುಟ್ಟಿದವರಾಗಿದ್ದರೆ, ನಾನು ಮಾತನಾಡಿರುವ ಆಡಿಯೋ ರಿಲೀಸ್ ಮಾಡಿಸಲಿ. ಈಗಾಗಲೇ ರಿಲೀಸ್ ಮಾಡಿರುವ ಆಡಿಯೋದಲ್ಲಿ ಸಂದೇಶ್ ಜೊತೆಗೆ ಮಾತನಾಡಿರೋದು ನಾನೇ ಅಂತ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ. ಸಂದೇಶ್ ಮಾತ್ರ ಆ ಆಡಿಯೋದಲ್ಲಿ ಇರೋದು ನಾನಲ್ಲ ಅಂತ ಹೇಳಿದ್ದಾರೆ. ಎಲ್ಲರೂ ಮಕ್ಕಳನ್ನು ಗಂಡು ಅಂತ ಹೆತ್ತಿದ್ದಾರೆ. ಇಂದ್ರಜಿತ್ ಬಳಸಿದ ಪದ ನನಗೆ ಬೇಸರ ತರಿಸಿದೆ. ನಾನು ಸುದ್ದಿಗೋಷ್ಠಿ ಮಾಡುವಾಗ ವಕೀಲರನ್ನು ಕೂರಿಸಿಕೊಂಡಿರಲಿಲ್ಲ. ಆದರೆ ಪತ್ರಕರ್ತ ಅಂತ ಹೇಳಿಕೊಳ್ಳುವ ಇಂದ್ರಜಿತ್‌ ಸುದ್ದಿಗೋಷ್ಠಿ ಮಾಡುವಾಗ ಯಾಕೆ ವಕೀಲರನ್ನು ಇಟ್ಟುಕೊಂಡರು? ಇಂದ್ರಜಿತ್ ಮೊದಲು ಒಂದು ಸರಿಯಾಗಿ ಸಿನಿಮಾ ನಿರ್ದೇಶನ ಮಾಡಲಿ' ಎಂದು ಖಡಕ್ ಆಗಿಯೇ ಮಾತನಾಡಿದ್ದರು.