ಶಿಕ್ಷಕರ ನಿರ್ಲಕ್ಷ್ಯದಿಂದ ಹಾಸಿಗೆ ಹಿಡಿದಿರುವ ಯುವತಿಗೆ ₹88 ಲಕ್ಷ ಪರಿಹಾರ ಆದೇಶ ಎತ್ತಿಹಿಡಿದ ಸುಪ್ರೀಂಕೋರ್ಟ್‌

ಬೆಂಗಳೂರಿನಲ್ಲಿ 9ನೇ ತರಗತಿ ಓದುತ್ತಿದ್ದ ಅಕ್ಷತಾಳನ್ನು (14 ವರ್ಷ) 2006ರ ಡಿಸೆಂಬರ್‌ನಲ್ಲಿ ಶಾಲೆಯ ವತಿಯಿಂದ ದಿಲ್ಲಿ ಸೇರಿದಂತೆ ಅನೇಕ ಸ್ಥಳಗಳಿಗೆ ಪ್ರವಾಸಕ್ಕೆ ಕರೆದೊಯ್ಯಲಾಗಿತ್ತು. ಆ ಸಂದರ್ಭದಲ್ಲಿ ಅಕ್ಷತಾಗೆ ತೀವ್ರ ವೈರಲ್‌ ಜ್ವರ ಕಾಣಿಸಿಕೊಂಡಿತು. ಶಿಕ್ಷಕರು ತಕ್ಷಣ ಚಿಕಿತ್ಸೆ ಕೊಡಿಸದೇ ನಿರ್ಲಕ್ಷ್ಯ ತೋರಿದರು. ಅಕ್ಷತಾ ಸ್ಥಿತಿ ಗಂಭೀರವಾದಾಗ ಪೋಷಕರಿಗೆ ಮಾಹಿತಿ ನೀಡಿದರು. ಪೋಷಕರು ದಿಲ್ಲಿಗೆ ತೆರಳಿ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ವೈರಲ್‌ ಜ್ವರವು ಗಂಭೀರ ಸ್ವರೂಪ ಪಡೆದುಕೊಂಡಿತ್ತು.

ಶಿಕ್ಷಕರ ನಿರ್ಲಕ್ಷ್ಯದಿಂದ ಹಾಸಿಗೆ ಹಿಡಿದಿರುವ ಯುವತಿಗೆ ₹88 ಲಕ್ಷ ಪರಿಹಾರ ಆದೇಶ ಎತ್ತಿಹಿಡಿದ ಸುಪ್ರೀಂಕೋರ್ಟ್‌
Linkup
ಹೊಸದಿಲ್ಲಿ: ಶೈಕ್ಷಣಿಕ ಪ್ರವಾಸದ ವೇಳೆ ವೈರಲ್‌ ಸೋಂಕಿಗೆ ತುತ್ತಾದಾಗ ಶಿಕ್ಷಕರ ನಿರ್ಲಕ್ಷ್ಯದಿಂದ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ಹಾಸಿಗೆ ಹಿಡಿದಿರುವ 29 ವರ್ಷದ ಬೆಂಗಳೂರಿನ ಅಕ್ಷತಾ ಅವರಿಗೆ 88 ಲಕ್ಷ ರೂ. ಪರಿಹಾರ ನೀಡಲು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. ಜುಲೈ14ರಂದು ಪ್ರಕಟವಾಗಿರುವ ತೀರ್ಪಿನಲ್ಲಿ 2016ರಲ್ಲಿ ರಾಷ್ಟ್ರೀಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ (ಎನ್‌ಸಿಡಿಆರ್‌ಸಿ) ನಿಗದಿಪಡಿಸಿದ್ದ 50 ಲಕ್ಷ ರೂ. ಪರಿಹಾರದ ಆದೇಶವನ್ನು ರದ್ದುಗೊಳಿಸಲಾಗಿದೆ. ಪ್ರವಾಸಕ್ಕೆ ಕರೆದೊಯ್ದಿದ್ದ ಅಧ್ಯಾಪಕರ ತೀವ್ರ ನಿರ್ಲಕ್ಷ್ಯದಿಂದ ಅಕ್ಷತಾ ಅವರು ಹಾಸಿಗೆ ಹಿಡಿಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ನ್ಯಾ. ನವೀನ್‌ ಸಿನ್ಹಾ ಮತ್ತು ನ್ಯಾ. ಸುಭಾಷ್‌ ರೆಡ್ಡಿ ಅವರಿದ್ದ ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಏನಿದು ಪ್ರಕರಣ?: ಬೆಂಗಳೂರಿನ ಬಿಎನ್‌ಎಂ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ಅಕ್ಷತಾಳನ್ನು (ಆಗ ಆಕೆಗೆ 14 ವರ್ಷ) 2006ರ ಡಿಸೆಂಬರ್‌ನಲ್ಲಿ ಶಾಲೆಯ ವತಿಯಿಂದ ದಿಲ್ಲಿ ಸೇರಿದಂತೆ ಅನೇಕ ಸ್ಥಳಗಳಿಗೆ ಪ್ರವಾಸಕ್ಕೆ ಕರೆದೊಯ್ಯಲಾಗಿತ್ತು. ಆ ಸಂದರ್ಭದಲ್ಲಿ ಅಕ್ಷತಾಗೆ ತೀವ್ರ ವೈರಲ್‌ ಜ್ವರ ಕಾಣಿಸಿಕೊಂಡಿತು. ಶಿಕ್ಷಕರು ತಕ್ಷಣ ಚಿಕಿತ್ಸೆ ಕೊಡಿಸದೇ ನಿರ್ಲಕ್ಷ್ಯ ತೋರಿದರು. ಅಕ್ಷತಾ ಸ್ಥಿತಿ ಗಂಭೀರವಾದಾಗ ಪೋಷಕರಿಗೆ ಮಾಹಿತಿ ನೀಡಿದರು. ಪೋಷಕರು ದಿಲ್ಲಿಗೆ ತೆರಳಿ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ವೈರಲ್‌ ಜ್ವರವು ಗಂಭೀರ ಸ್ವರೂಪದ 'ಮೆನಿಂಗೊಎನ್‌ಸಿಫೆಲಾಟಿಸ್‌' ಎಂಬ ಕಾಯಿಲೆಯಾಗಿ ಪರಿವರ್ತನೆಯಾಗಿತ್ತು. ಜ್ವರ ಬಂದಾಗಲೇ ಆಸ್ಪತ್ರೆಗೆ ದಾಖಲಿಸಿದ್ದರೆ ಗುಣಪಡಿಸಬಹುದಿತ್ತು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದರು. ದಿಲ್ಲಿಯಲ್ಲಿ 53 ದಿನಗಳವರೆಗೆ ಚಿಕಿತ್ಸೆ ಪಡೆದ ಅಕ್ಷತಾಳನ್ನು ಏರ್‌ಲಿಫ್ಟ್‌ ಮೂಲಕ ಬೆಂಗಳೂರಿಗೆ ಕರೆತರಲಾಯಿತು. ‘ಕಾಯಿಲೆಯಿಂದ ಅಕ್ಷತಾ 21 ತಿಂಗಳ ಮಗುವಿನ ಬುದ್ಧಿಮತ್ತೆಗೆ ತಲುಪಿದ್ದಾರೆ. ಅಲ್ಲದೇ ಆಕೆ ಜೀವನಪೂರ್ತಿ ಹಾಸಿಗೆಯಲ್ಲಿ ಕಳೆಯುವಂತಾಗಿದೆ. ಆಕೆಗೆ ಶೀಘ್ರ ವೈದ್ಯರ ಚಿಕಿತ್ಸೆ ದೊರಕದ ಹಿನ್ನೆಲೆಯಲ್ಲಿ ಗಂಭೀರ ಅನಾರೋಗ್ಯಕ್ಕೆ ತುತ್ತಾಗಬೇಕಾಯಿತು’ ಎಂದು ಆರೋಪಿಸಿ ಪೋಷಕರು ಕರ್ನಾಟಕ ರಾಜ್ಯ ಗ್ರಾಹಕರ ವೇದಿಕೆಗೆ ಅರ್ಜಿ ಸಲ್ಲಿಸಿದ್ದರು. ವಿದ್ಯಾರ್ಥಿನಿಗೆ ಶಾಲೆಯು 88,73,798 ರೂ. ಪರಿಹಾರದ ಜತೆಗೆ ದೂರು ದಾಖಲಾಗಿದ್ದ ದಿನದಿಂದ ಶೇ.9ರಷ್ಟು ಬಡ್ಡಿ ನೀಡಬೇಕು ಎಂದು ವೇದಿಕೆಯು 2016ರ ಸೆಪ್ಟೆಂಬರ್‌ನಲ್ಲಿ ಆದೇಶಿಸಿತ್ತು. ಇದನ್ನು ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ(ಎನ್‌ಸಿಡಿಆರ್‌ಸಿ)ದಲ್ಲಿ ಪ್ರಶ್ನಿಸಲಾಗಿತ್ತು. ಶಿಕ್ಷಕರ ನಿರ್ಲಕ್ಷ್ಯವನ್ನು ತರಾಟೆಗೆ ತೆಗೆದುಕೊಂಡಿದ್ದ ಎನ್‌ಸಿಡಿಆರ್‌ಸಿಯು ಪರಿಹಾರ ಮೊತ್ತವನ್ನು 88 ಲಕ್ಷದಿಂದ 50 ಲಕ್ಷ ರೂ.ಗೆ ಇಳಿಕೆ ಮಾಡಿತ್ತು. ಹಾಗಾಗಿ ಎನ್‌ ಸಿಡಿಆರ್‌ಸಿ ಆದೇಶದ ವಿರುದ್ಧ ಪಾಲಕರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.