ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ; ಮಾದಕವಸ್ತು, ಗಾಂಜಾ ಸೇದುವ ಪೈಪ್‌ಗಳು ಪತ್ತೆ!

ಜೈಲಿನಲ್ಲಿ ಕೈದಿಗಳಿಗೆ ಎಲ್ಲ ತರಹದ ವ್ಯವಸ್ಥೆ ಕಲ್ಪಿಸಲಾಗಿದ್ದು, ಮಾದಕ ವಸ್ತು ಸೇರಿದಂತೆ ಮದ್ಯ, ಸಿಗರೇಟ್‌ ಹಾಗೂ ಮೊಬೈಲ್‌, ಸಿಮ್‌ ಕಾರ್ಡ್‌ಗಳನ್ನು ಕೈದಿಗಳು ಬಳಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಈ ಎಲ್ಲ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ದಾಳಿ ನಡೆಸಿದರು. ದಾಳಿ ವೇಳೆ ಗಾಂಜಾ, ಗಾಂಜಾ ಸೇದುವ ಪೈಪ್‌ಗಳನ್ನು ಹೊರತುಪಡಿಸಿ ಬೇರೇನೂ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.

ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ; ಮಾದಕವಸ್ತು, ಗಾಂಜಾ ಸೇದುವ ಪೈಪ್‌ಗಳು ಪತ್ತೆ!
Linkup
ಬೆಂಗಳೂರು: ಕೇಂದ್ರ ಅಪರಾಧ ವಿಭಾಗದ ಪೊಲೀಸರು ಕೇಂದ್ರ ಕಾರಾಗೃಹದ ಮೇಲೆ ದಾಳಿ ನಡೆಸಿ, ಗಾಂಜಾ ಮತ್ತು ಗಾಂಜಾ ಸೇದುವ ಪೈಪ್‌ಗಳೂ ಸೇರಿದಂತೆ ನಾನಾ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಸಿಸಿಬಿ ಜಂಟಿ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ನೇತೃತ್ವದಲ್ಲಿ ಇಬ್ಬರು ಡಿಸಿಪಿಗಳು ಹಾಗೂ ಮೂವರು ಎಸಿಪಿ, 15 ಮಂದಿ ಇನ್ಸ್‌ಪೆಕ್ಟರ್‌ ಮತ್ತು ಸಿಬ್ಬಂದಿ ಶ್ವಾನ ದಳದ ಜತೆ ಮಂಗಳವಾರ ಮುಂಜಾನೆ ಐದು ಗಂಟೆಗೆ ದಾಳಿ ನಡೆಸಿದರು. ಈ ವೇಳೆ ಕೈದಿಗಳಿರುವ ಕೊಠಡಿಯ ಪ್ರತಿ ಬ್ಯಾರಕ್‌ಗಳನ್ನು ಪರಿಶೀಲನೆ ನಡೆಸಿದರು. ಈ ವೇಳೆ ಗಾಂಜಾ ಮತ್ತು ಗಾಂಜಾ ಸೇದುವ ಪೈಪ್‌ಗಳು ಪತ್ತೆಯಾಗಿವೆ ಎಂದು ಸಿಸಿಬಿ ಪೊಲೀಸರು ತಿಳಿಸಿದರು. ಜೈಲಿನಲ್ಲಿ ಕುಳಿತು ಅಪರಾಧ ಚಟುವಟಿಕೆಯಲ್ಲಿ ಭಾಗಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಈಗಾಗಲೇ ಪರಪ್ಪನ ಅಗ್ರಹಾರ ಸೇರಿರುವ ರೌಡಿಶೀಟರ್‌ಗಳು ಜೈಲಿನೊಳಗೇ ಕುಳಿತು ತಮ್ಮ ಸಹಚರರ ಜತೆ ಸಂಪರ್ಕ ಹೊಂದಿ ಅಪರಾಧ ಚಟುವಟಿಕೆಗಳಿಗೆ ಸಾಥ್‌ ನೀಡುತ್ತಿದ್ದರು. ಈ ಮೂಲಕ ಜೈಲಿನಲ್ಲೇ ಕುಳಿತು ಹೊರಗಡೆ ಅಪರಾಧ ಚಟುವಟಿಕೆಗಳನ್ನು ನಡೆಸುತ್ತಿರುವ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಇಷ್ಟೇ ಅಲ್ಲದೇ ಜೈಲಿನಲ್ಲೇ ಕುಳಿತು ಕೆಲವರ ಕೊಲೆಗೆ ಸಂಚು ರೂಪಿಸಿ ಸಹಚರರಿಗೆ ಸುಪಾರಿ ನೀಡಲಾಗುತ್ತಿತ್ತು ಎಂಬ ಮಾಹಿತಿ ಇತ್ತೀಚೆಗೆ ಕೇಳಿ ಬರುತ್ತಿತ್ತು. ಅಲ್ಲದೆ, ಕೈದಿಗಳಿಗೆ ಎಲ್ಲ ತರಹದ ವ್ಯವಸ್ಥೆ ಕಲ್ಪಿಸಲಾಗಿದ್ದು, ಮಾದಕ ವಸ್ತು ಸೇರಿದಂತೆ ಮದ್ಯ, ಸಿಗರೇಟ್‌ ಹಾಗೂ ಮೊಬೈಲ್‌, ಸಿಮ್‌ ಕಾರ್ಡ್‌ಗಳನ್ನು ಕೈದಿಗಳು ಬಳಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಈ ಎಲ್ಲ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ದಾಳಿ ನಡೆಸಿದರು. ದಾಳಿ ವೇಳೆ ಗಾಂಜಾ, ಗಾಂಜಾ ಸೇದುವ ಪೈಪ್‌ಗಳನ್ನು ಹೊರತುಪಡಿಸಿ ಬೇರೇನೂ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ. ನಾಲ್ಕು ತಿಂಗಳ ಹಿಂದೆಯೂ ಶೋಧ ಸಿಸಿಬಿ ಪೊಲೀಸರು ನಾಲ್ಕು ತಿಂಗಳ ಹಿಂದೆ (ಜುಲೈ 10ರಂದು) ಪರಪ್ಪನ ಅಗ್ರಹಾರ ಜೈಲಿನ ಮೇಲೆ ದಾಳಿ ನಡೆಸಿ ಶೋಧ ನಡೆಸಿದ್ದರು. ಈ ವೇಳೆ ಪದೇ ಪದೆ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿ ಪರಪ್ಪನ ಅಗ್ರಹಾರ ಸೇರಿರುವ ಕೈದಿಗಳ ಪ್ರತಿ ಬ್ಯಾರಕ್‌ ಹುಡುಕಾಡಿದ್ದರು. ಈ ವೇಳೆ ಅಪಾರ ಪ್ರಮಾಣದ ಮಾದಕ ವಸ್ತು, ಗಾಂಜಾ, ಚಾಕು, ಡ್ಯಾಗರ್‌, ಮೊಬೈಲ್‌ಗಳು, ಸಿಮ್‌ಕಾರ್ಡ್‌, ಪೆನ್‌ಡ್ರೈವ್‌ಗಳೂ ಸೇರಿದಂತೆ ನಾನಾ ವಸ್ತುಗಳು ಪತ್ತೆಯಾಗಿದ್ದವು. ಜೈಲಿನಲ್ಲೇ ಕುಳಿತು ಹೊರಗಡೆ ಇರುವ ತಮ್ಮ ಸಹಚರರ ಮೂಲಕ ಅಪರಾಧ ಕೃತ್ಯ ಮಾಡಿಸಲು ಸಂಚು ರೂಪಿಸುತ್ತಿದ್ದರು ಎಂಬುದು ತಿಳಿದುಬಂದಿತ್ತು.