ಬಿಜೆಪಿ ಸರಕಾರದ ಅವಧಿ ಮುಗಿಯುವುದರೊಳಗೆ ನಂದಿ ಬೆಟ್ಟಕ್ಕೆ ರೋಪ್‌ ವೇ - ಯೋಗೇಶ್ವರ್‌

ಈಗಿನ ಸರಕಾರದ ಅವಧಿ ಮುಗಿಯುವುದರೊಳಗೆ, ನಂದಿ ಬೆಟ್ಟಕ್ಕೆ ರೋಪ್‌ ವೇ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿ ಕೈಗೊಂಡು ಲೋಕಾರ್ಪಣೆಗೊಳಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಿಪಿ ಯೋಗೇಶ್ವರ್‌ ಹೇಳಿದ್ದಾರೆ.

ಬಿಜೆಪಿ ಸರಕಾರದ ಅವಧಿ ಮುಗಿಯುವುದರೊಳಗೆ ನಂದಿ ಬೆಟ್ಟಕ್ಕೆ ರೋಪ್‌ ವೇ - ಯೋಗೇಶ್ವರ್‌
Linkup
ಚಿಕ್ಕಬಳ್ಳಾಪುರ: ಬಿಜೆಪಿ ಸರಕಾರದ ಅವಧಿ ಮುಗಿಯುವುದರೊಳಗೆ ನಂದಿಬೆಟ್ಟಕ್ಕೆ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ನಿರ್ವಹಿಸಿ ಲೋಕಾರ್ಪಣೆಗೊಳಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಹೇಳಿದ್ದಾರೆ. ನಂದಿಬೆಟ್ಟದಲ್ಲಿ ರೋಪ್‌ ವೇ ನಿರ್ಮಾಣ ಸಂಬಂಧ ಸ್ಥಳ ಪರಿಶೀಲನೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೋಪ್‌ ವೇ ನಿರ್ಮಾಣ ಕಾಮಗಾರಿಗೆ ಇನ್ನು ಹತ್ತು ದಿನದೊಳಗೆ ಟೆಂಡರ್‌ ಕರೆದು ಕಾಮಗಾರಿ ನಡೆಸಲಾಗುವುದು. ಈಗಾಗಲೇ ರೋಪ್‌ ವೇ ಸಂಬಂಧ ಸರ್ವೆ ಕಾರ್ಯ ಮತ್ತು ಮಣ್ಣು ಪರೀಕ್ಷೆಯೂ ನಡೆದಿದೆ. ಯೋಜನೆ ವೆಚ್ಚವನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಯೋಜನೆಯ ಗಾತ್ರವನ್ನು ಅನುಸರಿಸಿ ಯೋಜನೆ ವೆಚ್ಚ ನಿರ್ಧಾರಗೊಳ್ಳಲಿದೆ ಎಂದು ತಿಳಿಸಿದರು. 7 ಎಕರೆ ಜಮೀನುತೋಟಗಾರಿಕೆ ಇಲಾಖೆ, ಅರಣ್ಯ ಇಲಾಖೆ ಹೀಗೆ ಹಲವು ಇಲಾಖೆಗಳ ನಡುವೆ ಹಂಚಿಕೆಯಾಗಿತ್ತು. ಆದರೆ ಈಗ ನಂದಿಬೆಟ್ಟ ಸಂಪೂರ್ಣ ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಗೆ ಬಂದಿದೆ. ಈಗ ನಂದಿ ತಪ್ಪಲಲ್ಲಿ ಸುಮಾರು 35 ಎಕರೆ ಪ್ರದೇಶವನ್ನು ಪ್ರವಾಸೋದ್ಯಮ ವ್ಯಾಪ್ತಿಗೆ ವರ್ಗಾವಣೆ ಮಾಡಲಾಗಿದೆ. ಅಲ್ಲದೇ ಬೆಟ್ಟದ ತಪ್ಪಲಲ್ಲಿ ವಾಹನ ನಿಲ್ದಾಣಕ್ಕಾಗಿ ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಿಂದ 7 ಎಕರೆಯನ್ನು ನೀಡಲಾಗಿದೆ ಎಂದರು. 10 ದಿನದಲ್ಲಿ ಟೆಂಡರ್‌4 ತಿಂಗಳ ಹಿಂದಷ್ಟೆ ಪ್ರವಾಸೋದ್ಯಮ ಇಲಾಖೆಗೆ ಜಮೀನು ಸಿಕ್ಕಿದೆ. ಈಗಾಗಲೇ ರೋಪ್‌ ವೇ ಸಂಬಂಧ ನಾನಾ ಪ್ರಾಥಮಿಕ ಕಾರ್ಯಗಳು ನಡೆದಿವೆ. ಇನ್ನು 10 ದಿನಗಳಲ್ಲಿ ಟೆಂಡರ್‌ ಕರೆದು ಖಾಸಗಿ ಸಹಭಾಗಿತ್ವದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಜತೆಗೆ ಬೆಟ್ಟದಲ್ಲಿ ನೀರಿಲ್ಲದೆ ಉದ್ಯಾನ ಅಭಿವೃದ್ಧಿ ಸೇರಿದಂತೆ ಎಲ್ಲದಕ್ಕೂ ತೊಂದರೆಯಾಗುತ್ತಿದೆ. ಹೀಗಾಗಿ ಈಗಾಗಲೇ ಬೆಂಗಳೂರಿನಿಂದ ಈ ಭಾಗದ ಕೆರೆಗಳಿಗೆ ನೀರು ಹರಿಸಲಾಗುತ್ತಿದ್ದು, ಅಲ್ಲಿಂದ ಬೆಟ್ಟಕ್ಕೆ ನೀರನ್ನು ಪಂಪ್‌ ಮಾಡಿ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದರು. ಆ್ಯಪ್‌ ಅಭಿವೃದ್ಧಿಪ್ರವಾಸೋದ್ಯಮ ಇಲಾಖೆಯಿಂದ ನಂದಿಬೆಟ್ಟ ಪ್ರವೇಶಕ್ಕಾಗಿಯೇ ಹೊಸ ಆ್ಯಪ್‌ ಅಭಿವೃದ್ಧಿ ಪಡಿಸಲಾಗುತ್ತಿದೆ. ಶೇ.50ರಷ್ಟು ಆನ್‌ಲೈನ್‌ ಮತ್ತು ಶೇ.50ರಷ್ಟು ಆಫ್‌ಲೈನ್‌ ಟಿಕೆಟ್‌ಗಳನ್ನು ಮಾರಾಟ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ನಂದಿಬೆಟ್ಟಕ್ಕೆ ವಾರದ ದಿನಗಳಲ್ಲಿ 5-6 ಸಾವಿರ ಜನರು ಬರುತ್ತಾರೆ. ಅದೇ ರೀತಿ ವಾರಾಂತ್ಯದಲ್ಲಿ 8-10 ಸಾವಿರ ಜನರು ಬರುತ್ತಿದ್ದಾರೆ. ಇದೆಲ್ಲವನ್ನು ಆಧರಿಸಿ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದ ಅವರು, ಪ್ರವಾಸಿಗರಿಗೆ ಎಲ್ಲವೂ ದುಬಾರಿಯಾಗಲಿದೆ ಎಂಬುದು ಸುಳ್ಳು ಎಂದರು. ಖಾಸಗಿ ಸಹಭಾಗಿತ್ವದಲ್ಲಿಅಭಿವೃದ್ಧಿ ರೋಪ್‌ ವೇ ನಿರ್ಮಾಣ ಸೇರಿದಂತೆ ನಂದಿಬೆಟ್ಟದ ಅಭಿವೃದ್ಧಿಗೆ ಸರಕಾರ ಹಣ ಖರ್ಚು ಮಾಡುವುದಿಲ್ಲ. ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಮಾಡಲಿದ್ದೇವೆ. ದೇಶದ ಖ್ಯಾತ ರೋಪ್‌ವೇ ಸಂಸ್ಥೆ ತೆಲಂಗಾಣ ಮೂಲದ ಆರ್‌ಕಾನ್‌ ಇನ್‌ಫ್ರಾ ಕಂಪನಿ ಇದನ್ನು ನಿರ್ವಹಿಸಲಿದ್ದು, ಖಾಸಗಿ ಉದ್ಯಮಿಗಳು ಈ ಯೋಜನೆಯಡಿ ಹಣ ಹೂಡಲಿದ್ದಾರೆ. ಅವರೇ ಈ ರೋಪ್‌ ವೇಯನ್ನು ನಿರ್ವಹಿಸಲಿದ್ದಾರೆ. ಈ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಮುಗಿಸಲಾಗುವುದು ಎಂದು ಸಚಿವರು ತಿಳಿಸಿದರು. ಸಿ.ಪಿ.ಯೋಗೇಶ್ವರ್‌ಗೆ ರೈತರ ಪ್ರತಿಭಟನೆ ಬಿಸಿ ಕಳೆದ ಹತ್ತಾರು ವರ್ಷದಿಂದ ಇದೇ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದೇವೆ. ಇದೀಗ ದಿಢೀರ್‌ ಎಂದು ಸರಕಾರ ಜಮೀನನ್ನು ತಮ್ಮ ವಶಕ್ಕೆ ಪಡೆದರೆ ನಮ್ಮ ಕಥೆ ಏನು..? ಇದು ಶುಕ್ರವಾರ ನಂದಿಗಿರಿಧಾಮದ ತಪ್ಪಲಲ್ಲಿ ರೋಪ್‌ ವೇ ನಿರ್ಮಾಣ ಸಂಬಂಧ ಸ್ಥಳ ಪರಿಶೀಲನೆಗೆ ಸಚಿವ ಸಿ.ಪಿ.ಯೋಗೇಶ್ವರ್‌ ಬಂದ ವೇಳೆ ಮುತ್ತಿಗೆ ಹಾಕಿದ ರೈತರು ಹೇಳಿದ ಮಾತು. ಗುರುವಾರ ರೈತ ಸಂಘದ ಬೆಂಬಲದೊಂದಿಗೆ ಈ ಭಾಗದಲ್ಲಿ ಬೇಸಾಯ ಮಾಡುತ್ತಿದ್ದವರು ಸರಕಾರದ ಕ್ರಮ ವಿರೋಧಿಸಿ ಪ್ರತಿಭಟನೆ ನಡೆಸಿದ್ದರು. ಶುಕ್ರವಾರ ಸಚಿವರು ಸ್ಥಳ ಪರಿಶೀಲನೆಗೆ ಬಂದ ವೇಳೆ ನಂದಿಬೆಟ್ಟದ ಅಭಿವೃದ್ಧಿಗೆ ನಮ್ಮದೇನು ತಕರಾರಿಲ್ಲ. ಆದರೆ ಹತ್ತಾರು ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದರೂ ನಮಗೆ ಜಮೀನು ಮಂಜೂರು ಮಾಡಿಲ್ಲ. ಈಗ ಏಕಾಏಕಿ ಜಮೀನು ವಶಪಡಿಸಿಕೊಳ್ಳುವುದು ಸರಿಯಲ್ಲ. ನಮಗೆ ಸೂಕ್ತ ಪರಿಹಾರ ಕೊಡಬೇಕೆಂದು ಆಗ್ರಹಿಸಿದರು. ಮನವಿಯನ್ನು ಆಲಿಸಿದ ಸಚಿವ ಯೋಗೇಶ್ವರ್‌ ಸ್ಥಳದಲ್ಲಿದ್ದ ಕಂದಾಯ ಇಲಾಖೆ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದರು. ಆನಂತರ ಮಾತನಾಡಿದ ಅವರು, ಸದ್ಯಕ್ಕೆ ಈ ಜಮೀನು ಸರಕಾರದ ವಶದಲ್ಲೇ ಇದೆ. ಹೀಗಾಗಿ ಇದು ಅಧಿಕೃತವಾಗಿ ಸರಕಾರದ್ದೇ ಜಮೀನು. ಆದರೆ ನಿಮ್ಮ ಮಾತಿನಲ್ಲೂ ಅರ್ಥವಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಜತೆ ಚರ್ಚಿಸಿ ಬೇರೆಡೆ ಎಲ್ಲಾದರೂ ಜಮೀನು ನೀಡುವ ಭರವಸೆ ನೀಡಿದರು. ಇದೇ ವೇಳೆ ರೈತರು ಪ್ರಭಾವಶಾಲಿಗಳಿಗೆ ಮಾತ್ರ ಇಲ್ಲಿ ಜಮೀನುಗಳನ್ನು ಮಂಜೂರು ಮಾಡುತ್ತಿದ್ದಾರೆ. ಬಡವರು ಮತ್ತು ನಿರ್ಗತಿಕರಿಗೆ ಜಮೀನು ನೀಡದೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಕಂದಾಯ ಅಧಿಕಾರಿಗಳ ವಿರುದ್ಧ ಸಚಿವ ಸಿ.ಪಿ.ಯೋಗೇಶ್ವರ್‌ಗೆ ದೂರಿದರು.