ವಿದೇಶದಲ್ಲಿ ಬಾಳೆ ದರ ಹೆಚ್ಚಳ, ಮುಧೋಳದ ರೈತರ ಮೊಗದಲ್ಲಿ ಮಂದಹಾಸ

ದೇಶ-ವಿದೇಶದಲ್ಲಿ ಜಿ.9 ಬಾಳೆಹಣ್ಣುಗಳಿಗೆ ಕಳೆದೆರಡು ವಾರದಲ್ಲಿ ಬೇಡಿಕೆ ಆರಂಭಗೊಂಡ ಹಿನ್ನಲೆಯಲ್ಲಿ ಏಜೆನ್ಸಿ ಮೂಲಕ ರಫ್ತು ಪ್ರಕ್ರಿಯೆ ಹೆಚ್ಚಳವಾಗಿದ್ದು, ಮುಧೋಳ ಸುತ್ತ ಮುತ್ತ ಬಾಳೆ ಬೆಳೆದ ರೈತನ ಮುಖದಲ್ಲಿ ಸಂತಸ ಅರಳುತ್ತಿದೆ.

ವಿದೇಶದಲ್ಲಿ ಬಾಳೆ ದರ ಹೆಚ್ಚಳ, ಮುಧೋಳದ ರೈತರ ಮೊಗದಲ್ಲಿ ಮಂದಹಾಸ
Linkup
ಮುಧೋಳ: ದೇಶ ವಿದೇಶದಲ್ಲೂ ಜಿ.9 ಬಾಳೆಹಣ್ಣುಗಳಿಗೆ ಕಳೆದೆರಡೂ ವಾರದಲ್ಲಿ ಬೇಡಿಕೆ ಆರಂಭಗೊಂಡ ಹಿನ್ನಲೆಯಲ್ಲಿ ಏಜೆನ್ಸಿ ಮೂಲಕ ರಫ್ತು ಪ್ರಕ್ರಿಯೆ ಆರಂಭಗೊಂಡಂತಾಗಿದೆ. ಹೀಗಾಗಿ ಬಾಳೆ ಬೆಳೆದ ರೈತನ ಮುಖದಲ್ಲಿ ಸಂತಸ ಅರಳುತ್ತಿದೆ. ಹೌದು. ತಾಲೂಕಿನ ಮೆಳ್ಳಿಗೇರಿಯ ಪ್ರಗತಿ ಪರ ರೈತ ಸತ್ಯೆಪ್ಪ ಮಿರ್ಜಿ ಅವರ 3 ಎಕರೆ ತೋಟದಲ್ಲಿ ಬೆಳೆದ ಬಾಳೆಗೆ ಬಂಪರ್‌ ದರ ದೊರೆಯುತ್ತಿದೆ. ದೇಸಾಯಿ ಅಗ್ರಿ ಫ್ರೂಟ್ಸ್‌ ಏಜೆನ್ಸಿ ಮೂಲಕ ಇಲ್ಲಿ ಬೆಳೆದ ಬಾಳೆಹಣ್ಣುಗಳನ್ನು ಇರಾನ್‌, ಇರಾಕ್‌, ಅಭುದಾಬಿ ವಿದೇಶಗಳಿಗೆ ರಪ್ತು ಮಾಡಲಾಗುತ್ತಿದೆ. ಕಳೆದ ತಿಂಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲೂ ಕೆಲವು ಬೆಳವಣಿಗೆಯ ಕಾರಣಾಂತರಗಳಿಂದ ಮಾರುಕಟ್ಟೆ ದರ ಕುಸಿದಿತ್ತು. ಈಗ ಮರಳಿ ದರ ಹೆಚ್ಚಳವಾಗಿದ್ದರಿಂದ ರೈತರಲ್ಲಿ ಚೈತನ್ಯ ತುಂಬಿದೆ. 4 ರೂ.ಕೆಜಿಯಂತೆ ಇದ್ದ ದರ ದಿಢೀರ್‌ 9 ರೂ.ಗೆ ಏರಿಕೆಯಾಗಿದೆ. ಯೋಜನೆ ಮೆಳ್ಳಿಗೇರಿ ರೈತ ಸತ್ಯೆಪ್ಪ ಮಿರ್ಜಿವರು ತಮ್ಮ 3 ಎಕರೆಯಲ್ಲಿ 10 ತಿಂಗಳ ಹಿಂದೆ ಬಾಳೆ ಬೆಳೆಯಲು ಯೋಚಿಸಿ ತೋಟಗಾರಿಕೆ ಅಧಿಕಾರಿ ರಾಹುಲ್‌ಕುಮಾರ ಬಾವಿದೊಡ್ಡಿ, ಮಹೇಶ ದಂಡನ್ನವರ, ರವೀಂದ್ರ ಹಂಚಿನಾಳ, ಅರವಿಂದ ಬಳಗಾನೂರವರ ಬಳಿ ಮಾಹಿತಿ ಪಡೆದು ಉದ್ಯೋಗ ಖಾತ್ರಿ ಯೋಜನೆಯಿಂದ 1.10 ಲಕ್ಷ ಸಹಾಯಧನ ಪಡೆದಿದ್ದಾರೆ. ವಿದೇಶಕ್ಕೆ ಬೇಡಿಕೆ ತಾಲೂಕಿನಲ್ಲಿ 460 ಹೆಕ್ಟೇರ್‌ದಷ್ಟು ಪ್ರದೇಶದಲ್ಲಿ ಜಿ.9 ಬಾಳೆ ಹಾಗೂ ಸ್ಥಳೀಯ ಬಾಳೆ ಬೆಳೆಯನ್ನು ಬೆಳೆಯುತ್ತಿದ್ದಾರೆ. ಕೆಲವು ರೈತರು ಸ್ವಂತ ಮಾರುಕಟ್ಟೆಗೆ ತೆರಳಿ ಮಾರಾಟ ಮಾಡುತ್ತಿದ್ದರೆ, ಮತ್ತೊಂದೆಡೆ ವಿದೇಶದಲ್ಲಿ ಬಾಳೆಗೆ ಮತ್ತೆ ಬೇಡಿಕೆ ಹೆಚ್ಚಾಗಿದ್ದರಿಂದ ದೇಶಾಯಿ ಅಗ್ರಿ ಪ್ರೂಟ್ಸ್‌ ಸಂಸ್ಥೆಯ ಮೂಲಕ ರಪ್ತು ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಹೀಗಾಗಿ ಬಾಳೆ ಬೆಳೆದ ರೈತರಿಗೆ ಸ್ವಲ್ಪ ಮಟ್ಟಿಗೆ ಚೈತನ್ಯ ತಂದುಕೊಟ್ಟಿದೆ. ಎಕರೆಗೆ 35 ರಿಂದ 40 ಟನ್‌ನಷ್ಟು ಬರುತ್ತಿದೆ. ಲಕ್ಷಾಂತರ ರೂ.ಖರ್ಚು ಮಾಡಿದರೂ ಕನಿಷ್ಟ 2 ರಿಂದ 2.50 ಲಕ್ಷ ರೂ.ವರಿಗೆ ಆದಾಯ ಬರುತ್ತಿದೆ. ಕಳೆದೆರಡು ತಿಂಗಳ ಹಿಂದೆ ದರ ಕುಸಿದಿತ್ತು. ಈಗ ಮತ್ತೆ ಸುಧಾರಣೆ ಕಂಡಿದೆ. ಮೂರು ಎಕರೆಯಲ್ಲಿ 110 ಟನ್‌ ಬಾಳೆ ಬೆಳೆದಿದ್ದೇನೆ. ತೋಟಗಾರಿಕೆ ಅಧಿಕಾರಿಗಳು, ದೇಸಾಯಿ ಅಗ್ರಿ ಸಂಸ್ಥೆ ಮಾರ್ಗದರ್ಶನದಲ್ಲಿ ಮಾರುಕಟ್ಟೆ ದರ ಗೊತ್ತಾಗಿದೆ. ಇನ್ನಷ್ಟು ಹಂತ ಹಂತವಾಗಿ ಬಾಳೆ ಬೆಳೆಯಲು ನಿರ್ಧರಿಸಿದ್ದೇನೆ ಎನ್ನುತ್ತಾರೆ ಮೆಳ್ಳಿಗೇರಿ ಪ್ರಗತಿಪರ ರೈತ ಸತ್ಯೆಪ್ಪ ಮಿರ್ಜಿ. ಉದ್ಯೋಗ ಖಾತ್ರಿ ಯೋಜನೆ ಹಾಗೂ ಎನ್‌ಎಚ್‌ಎಂ ಸಹಾಯಧನದಲ್ಲಿ ಬಾಳೆ ಬೆಳೆದ ರೈತರಿಗೆ ನೆರವು ನೀಡಲಾಗುತ್ತಿದೆ. ಪ್ರಗತಿ ಪರ ರೈತ ಸತ್ಯೆಪ್ಪ ಮಿರ್ಜಿವರು ಈಗ ವಿದೇಶಕ್ಕೂ ಮಾರಾಟ ಮಾಡುತ್ತಿರುವುದರಿಂದ ಟನ್‌ಗೆ 9 ಸಾವಿರದಂತೆ ಬಾಣೆ ಮಾರಾಟವಾಗುತ್ತಿದೆ. ಬಹಳಷ್ಟು ರೈತರೂ ವಿದೇಶಕ್ಕೂ ಮಾರಾಟ ಮಾಡಲು ಮುಂದೆ ಬಂದಿದ್ದಾರೆ ಎಂದು ಮುಧೋಳ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಮಹೇಶ ದಂಡನ್ನವರ ಹೇಳಿದ್ದಾರೆ.