'ಲವ್ ಯೂ ರಚ್ಚು' ಅವಘಡ: ಮೃತ ಫೈಟರ್ ಕುಟುಂಬಕ್ಕೆ ವಿಕ್ರಮ್ ಮೋರ್, ನಿಖಿಲ್ ಕುಮಾರಸ್ವಾಮಿ ಆರ್ಥಿಕ ಸಹಾಯ

ಫೈಟರ್ ವಿವೇಕ್ ಕುಟುಂಬಕ್ಕೆ ಸ್ಟಂಟ್ ಡೈರೆಕ್ಟರ್ ವಿಕ್ರಮ್ ಮೋರ್ ಮತ್ತು ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಆರ್ಥಿಕ ಸಹಾಯ ಮಾಡಿದ್ದಾರೆ.

'ಲವ್ ಯೂ ರಚ್ಚು' ಅವಘಡ: ಮೃತ ಫೈಟರ್ ಕುಟುಂಬಕ್ಕೆ ವಿಕ್ರಮ್ ಮೋರ್, ನಿಖಿಲ್ ಕುಮಾರಸ್ವಾಮಿ ಆರ್ಥಿಕ ಸಹಾಯ
Linkup
ನಟ ಮತ್ತು ರಚಿತಾ ರಾಮ್ ಅಭಿನಯದ '' ಚಿತ್ರದ ಚಿತ್ರೀಕರಣದ ವೇಳೆ ವಿದ್ಯುತ್ ಅವಘಡ ಸಂಭವಿಸಿದ ಪರಿಣಾಮ ಫೈಟರ್ ವಿವೇಕ್ ಮೃತಪಟ್ಟರು. ಈ ಪ್ರಕರಣ ಸಂಬಂಧ ಸ್ಟಂಟ್ ಮಾಸ್ಟರ್ ವಿನೋದ್, ನಿರ್ದೇಶಕ ಶಂಕರ್ ಹಾಗೂ ಕ್ರೇನ್ ಆಪರೇಟರ್ ಮಹಾದೇವ್‌ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಮೃತ ಫೈಟರ್ ವಿವೇಕ್ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ನಿರ್ಮಾಪಕ ಪತ್ನಿ ಪ್ರೀತಿಕಾ ತಿಳಿಸಿದ್ದಾರೆ. ಹಾಗೇ, ಫೈಟರ್ ವಿವೇಕ್ ಕುಟುಂಬಕ್ಕೆ ಸ್ಟಂಟ್ ಡೈರೆಕ್ಟರ್ ವಿಕ್ರಮ್ ಮೋರ್ ಮತ್ತು ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಕೂಡ ಆರ್ಥಿಕ ಸಹಾಯ ಮಾಡಿದ್ದಾರೆ. ಫೈಟರ್ ವಿವೇಕ್ ಕುಟುಂಬಕ್ಕೆ ಸ್ಟಂಟ್ ಡೈರೆಕ್ಟರ್ ವಿಕ್ರಮ್ ಮೋರ್ 1 ಲಕ್ಷ ರೂಪಾಯಿ ಕೊಟ್ಟಿದ್ದಾರೆ. ಇನ್ನೂ ನಿಖಿಲ್ ಕುಮಾರಸ್ವಾಮಿ 50 ಸಾವಿರ ರೂಪಾಯಿ ನೀಡಿದ್ದಾರೆ. 'ಲವ್ ಯೂ ರಚ್ಚು' ಶೂಟಿಂಗ್ ಸ್ಥಗಿತ 'ಲವ್ ಯೂ ರಚ್ಚು' ಚಿತ್ರದ ಚಿತ್ರೀಕರಣದ ವೇಳೆ ದುರ್ಘಟನೆ ಸಂಭವಿಸಿದ ಬಳಿಕ ನಿರ್ಮಾಪಕ ಗುರು ದೇಶಪಾಂಡೆ ನಾಪತ್ತೆಯಾಗಿದ್ದಾರೆ. ''ಫೈಟರ್ ವಿವೇಕ್ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ಚಿತ್ರೀಕರಣಕ್ಕೆ ಬರಲ್ಲ'' ಅಂತ ಅಜಯ್ ರಾವ್ ಹೇಳಿದ್ದರು. ಇನ್ನೂ ನಿರ್ದೇಶಕ ಶಂಕರ್ ಹಾಗೂ ಸ್ಟಂಟ್ ಮಾಸ್ಟರ್ ವಿನೋದ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಹೀಗಾಗಿ, 'ಲವ್ ಯೂ ರಚ್ಚು' ಸಿನಿಮಾದ ಶೂಟಿಂಗ್ ಸ್ಥಗಿತಗೊಂಡಿದೆ. ಐವರ ವಿರುದ್ಧ ಎಫ್‌ಐಆರ್ 'ಲವ್ ಯೂ ರಚ್ಚು' ಚಿತ್ರದ ದುರ್ಘಟನೆಗೆ ಸಂಬಂಧಿಸಿದಂತೆ ಬಿಡದಿ ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದು, ಐವರ ವಿರುದ್ಧ ಎಫ್‌ಐಆರ್ ಹಾಕಿದ್ದಾರೆ. ನಿರ್ದೇಶಕ ಶಂಕರ್, ನಿರ್ಮಾಪಕ ಗುರು ದೇಶಪಾಂಡೆ, ಸಾಹಸ ನಿರ್ದೇಶಕ ವಿನೋದ್, ಪ್ರೊಡಕ್ಷನ್ ಮ್ಯಾನೇಜರ್ ಹಾಗೂ ಕ್ರೇನ್ ಆಪರೇಟರ್ ಮಹಾದೇವ್ ವಿರುದ್ಧ ಪ್ರಕರಣ ದಾಖಲಾಗಿದೆ. ಗುರು ದೇಶಪಾಂಡೆ ಹಾಗೂ ಪ್ರೊಡಕ್ಷನ್ ಮ್ಯಾನೇಜರ್ ಪರಾರಿಯಾಗಿದ್ದು, ಉಳಿದ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.