ಲೈಂಗಿಕ ದೌರ್ಜನ್ಯ ನೀಡಿದ ಕಾಮುಕ; ಮನನೊಂದ ಬಾಲಕಿ ವಿಷ ಸೇವಿಸಿ ಆತ್ಮಹತ್ಯೆ!

ಕಾಮುಕ ಸುಬ್ರಮಣಿ ಬಾಲಕಿಯ ಬಗ್ಗೆ ಊರಿನಲ್ಲಿ ಕೆಲವರೊಂದಿಗೆ ಅಸಭ್ಯವಾಗಿ ಹೇಳಿಕೊಂಡು ವಿಕೃತ ಸಂತೋಷ ಪಟ್ಟಿದ್ದಾನೆ. ಈ ವಿಚಾರ ಬಾಲಕಿಯ ಪೋಷಕರಿಗೆ ತಿಳಿದು ಮನೆಗೆ ಬಂದು ವಿಚಾರಣೆ ನಡೆಸಿದ್ದಾರೆ. ಇದರಿಂದ ಮನನೊಂದ ಬಾಲಕಿ ಮರ್ಯಾದೆಗೆ ಅಂಜಿ, 'ನನ್ನ ಸಾವಿಗೆ ಸುಬ್ರಹ್ಮಣ್ಯ ಕಾರಣ' ಅಂತ ಡೆತ್‌ ನೋಟ್‌ ಬರೆದಿಟ್ಟು, ಮೂರು ದಿನಗಳ ಹಿಂದೆ ವಿಷ ಸೇವಿಸಿದ್ದಳು. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಲೈಂಗಿಕ ದೌರ್ಜನ್ಯ ನೀಡಿದ ಕಾಮುಕ; ಮನನೊಂದ ಬಾಲಕಿ ವಿಷ ಸೇವಿಸಿ ಆತ್ಮಹತ್ಯೆ!
Linkup
ಬೆಂಗಳೂರು: ಶೌಚಾಲಯಕ್ಕೆ ಹೋಗಿದ್ದ ಬಾಲಕಿಯನ್ನು ಗ್ರಾಮದ ಯುವಕ ಲೈಂಗಿಕ ಕಿರುಕುಳ ನೀಡುವ ಉದ್ದೇಶಕ್ಕಾಗಿ ಎಳೆದಾಡಿ ಅಸಭ್ಯವಾಗಿ ವರ್ತಿಸಿದ್ದರಿಂದ ಮನನೊಂದಿದ್ದ ಬಾಲಕಿ ಮಾರ್ಯಾದೆಗೆ ಅಂಜಿ ಡೆತ್‌ ನೋಟ್‌ ಬರೆದಿಟ್ಟು, ವಿಷ ಸೇವಿಸಿ ಸಾವಿಗೆ ಶರಣಾದ ಪ್ರಕರಣ ನಂದಗುಡಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ. ನಂದಗುಡಿ ಹೋಬಳಿಯ ಮಾರಸಂಡಹಳ್ಳಿ ಗ್ರಾಮದ ವಾಸಿ ಸುಬ್ರಹ್ಮಣ್ಯ ಎಂಬಾತ ಇದೇ ಗ್ರಾಮದ 17 ವರ್ಷದ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ನೀಡುವ ದುರುದ್ದೇಶದಿಂದ ಎಳೆದಾಡಿ ವಿಫಲನಾಗಿದ್ದ. ಆ ಬಳಿಕ ಗ್ರಾಮದ ಯುವಕರ ಬಳಿ ಬಾಲಕಿಯ ಬಗ್ಗೆ ಬೇರೆ ರೀತಿಯಲ್ಲಿ ಅಸಭ್ಯವಾಗಿ ಹೇಳಿಕೊಂಡಿದ್ದು, ಗ್ರಾಮದಲ್ಲೆಲ್ಲ ಈ ವಿಷಯ ಹರಿದಾಡಿದೆ. ಘಟನೆ ವಿವರ: ಸೆ.6ರಂದು ಬೆಳಗಿನ ಜಾವ ಬಾಲಕಿ ಶೌಚಾಲಯಕ್ಕೆ ತೆರಳಿದ್ದ ಸಂದರ್ಭ ಅರಿತ ಆರೋಪಿ ಸುಬ್ರಮಣಿ ಹಿಂದಿನಿಂದ ಕುತ್ತಿಗೆ ಹಿಡಿದು ಅಸಭ್ಯವಾಗಿ ವರ್ತಿಸಲು ಯತ್ನಿಸಿದಾಗ ಬಾಲಕಿ ಕಿರುಚಿಕೊಂಡಿದ್ದಾಳೆ. ಈ ವೇಳೆ ತಾಯಿ ಬರುವುದನ್ನು ಗಮನಿಸಿದ ಆರೋಪಿ ಸುಬ್ರಮಣಿ ಪಕ್ಕದ ನೀಲಗಿರಿ ತೋಪಿನೊಳಕ್ಕೆ ಓಡಿ ಹೋಗಿದ್ದಾನೆ. ಆರೋಪಿ ಸುಬ್ರಮಣಿ ಮುಖಕ್ಕೆ ಮಫ್ಲರ್‌ ಸುತ್ತಿಕೊಂಡಿದ್ದರಿಂದ ಬಾಲಕಿಗೆ ತನಗೆ ತೊಂದರೆ ನೀಡಿದ ಕಾಮುಕ ಯಾರೆಂದು ಗುರುತು ಸಿಗಲಿಲ್ಲ, ಓಡುವ ಭರದಲ್ಲಿ ಆರೋಪಿಯು ತನ್ನ ಮೊಬೈಲ್‌ ಬೀಳಿಸಿಕೊಂಡು ಹೋಗಿದ್ದಾನೆ. ಬಳಿಕ ಕಾಮುಕ ಸುಬ್ರಮಣಿ ಬಾಲಕಿಯ ಬಗ್ಗೆ ಊರಿನಲ್ಲಿ ಕೆಲವರೊಂದಿಗೆ ಅಸಭ್ಯವಾಗಿ ಹೇಳಿಕೊಂಡು ವಿಕೃತ ಸಂತೋಷ ಪಟ್ಟಿದ್ದಾನೆ. ಈ ವಿಚಾರ ಬಾಲಕಿಯ ಪೋಷಕರಿಗೆ ತಿಳಿದು ಮನೆಗೆ ಬಂದು ವಿಚಾರಣೆ ನಡೆಸಿದ್ದಾರೆ. ಇದರಿಂದ ಮನನೊಂದ ಬಾಲಕಿ ಮರ್ಯಾದೆಗೆ ಅಂಜಿ, 'ನನ್ನ ಸಾವಿಗೆ ಸುಬ್ರಹ್ಮಣ್ಯ ಕಾರಣ' ಅಂತ ಡೆತ್‌ ನೋಟ್‌ ಬರೆದಿಟ್ಟು, ಮೂರು ದಿನಗಳ ಹಿಂದೆ ವಿಷ ಸೇವಿಸಿದ್ದಳು. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಸಂಜೆ ಬಾಲಕಿ ಸಾವನ್ನಪ್ಪಿದ್ದಾಳೆ. ಬಾಲಕಿಯ ಪೋಷಕರು ಈ ಸಂಬಂಧ ದೂರು ದಾಖಲಿಸಿದ್ದು, ನಂದಗುಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.