ಬೆಂಗಳೂರಿನಲ್ಲಿ ಹೊಸ ಸಮಸ್ಯೆ: ಗುಣಮುಖರಾದ್ರೂ ಡಿಸ್ಚಾರ್ಜ್ ಆಗ್ತಿಲ್ಲ ಕೋವಿಡ್ ರೋಗಿಗಳು..!

ಕಷ್ಟಪಟ್ಟು ಬೆಡ್‌ ಪಡೆದುಕೊಂಡ ಬಹಳಷ್ಟು ಸೋಂಕಿತರು, ಮನೆಗೆ ತೆರಳಿದ ನಂತರ ಮತ್ತೇನಾದರೂ ಸಮಸ್ಯೆ ಎದುರಾದರೆ ಮತ್ತೆ ಆಸ್ಪತ್ರೆಯಲ್ಲಿ ಬೆಡ್‌ ಸಿಗುವುದು ಕಷ್ಟ. ಎಷ್ಟು ಸಾಧ್ಯವೋ ಅಷ್ಟು ಗುಣಪಡಿಸಿಕೊಂಡು ಹೋಗುವುದೇ ಒಳಿತು ಎನ್ನುವ ನಿರ್ಧಾರದಿಂದ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ ಹೊಸ ಸಮಸ್ಯೆ: ಗುಣಮುಖರಾದ್ರೂ ಡಿಸ್ಚಾರ್ಜ್ ಆಗ್ತಿಲ್ಲ ಕೋವಿಡ್ ರೋಗಿಗಳು..!
Linkup
: ರಾಜ್ಯದಲ್ಲಿ ಒಂದೆಡೆ ಕೊರೊನಾ ಸೋಂಕಿತರ ಸಂಖ್ಯೆ ತುಸು ಇಳಿಮುಖವಾಗುತ್ತಿದೆ. ಇನ್ನೊಂದೆಡೆ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಬರುವವರ ಸಂಖ್ಯೆ ಹೆಚ್ಚುತ್ತಿರುವುದು ಕೊಂಚ ಸಮಾಧಾನ ಮೂಡಿಸಿದೆ. ಮೇ 1ರಂದು 18,341 ಮಂದಿ ಆಸ್ಪತೆಯಿಂದ ಬಿಡುಗಡೆಯಾಗಿದ್ದರು. ಮೇ 12ರ ವೇಳೆಗೆ ಈ ಸಂಖ್ಯೆ 34,752 ಕ್ಕೆ ಏರಿದೆ. ಗುಣಮುಖರಾಗಿರುವವರಿಗೆ ವೈದ್ಯರು ಡಿಸ್ಚಾರ್ಜ್ ಆಗುವಂತೆ ಸೂಚಿಸಿದ್ದರೂ ಕೆಲವರು 20-30 ದಿನಗಳಿಂದ ಆಸ್ಪತ್ರೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆಯುತ್ತಿದ್ದರು. ಇದರಿಂದ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳ ಚಿಕಿತ್ಸೆಗೆ ತೊಂದರೆಯಾಗುತ್ತಿತ್ತು. ಸದ್ಯ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿರುವುದರಿಂದ ಬೆಡ್‌ ಸಮಸ್ಯೆ ತುಸು ತಗ್ಗುವ ನಿರೀಕ್ಷೆ ಇದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕೂಡ, ಸೋಂಕಿನಿಂದ ಗುಣಮುಖರಾದರೂ ಆಸ್ಪತ್ರೆಯಲ್ಲಿಯೇ ಇರುವವರ ವಿರುದ್ಧ ತೀವ್ರ ಬೇಸರ ವ್ಯಕ್ತಪಡಿಸಿದ್ದರು. ಬಹಳ ದಿನದಿಂದ ಆಸ್ಪತ್ರೆಯಲ್ಲಿರುವವರನ್ನು ಕೂಡಲೇ ಬಿಡುಗಡೆ ಮಾಡುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದ್ದರು. '1ರಿಂದ 10 ದಿನ ಆಗಿರುವ 6,500, 11 ರಿಂದ 20 ದಿನ ಆಗಿರುವ 1,900, 20 ದಿನ ಮೀರಿದ 503, 30 ದಿನ ಮೀರಿದ 337 ರೋಗಿಗಳು ಸೇರಿದಂತೆ ಒಟ್ಟು 9,242 ಮಂದಿ ಆಸ್ಪತ್ರೆಗಳಲ್ಲಿಇದ್ದಾರೆ. 30 ದಿನ ಚಿಕಿತ್ಸೆ ಪಡೆಯುವ ಅಗತ್ಯ ಏನಿದೆ? ಅವರು ಬೇರೆಯವರಿಗೆ ಜಾಗ ಬಿಟ್ಟುಕೊಡಬೇಕು' ಎಂದು ನಾಗರಿಕರು ಮನವಿ ಮಾಡಿಕೊಂಡಿದ್ದಾರೆ. ಭಯದಿಂದ ಆಸ್ಪತ್ರೆಯಲ್ಲಿಯೇ ವಾಸ್ತವ್ಯ: ಕಷ್ಟಪಟ್ಟು ಬೆಡ್‌ ಪಡೆದುಕೊಂಡ ಬಹಳಷ್ಟು ಸೋಂಕಿತರು, ಮನೆಗೆ ತೆರಳಿದ ನಂತರ ಮತ್ತೇನಾದರೂ ಸಮಸ್ಯೆ ಎದುರಾದರೆ ಮತ್ತೆ ಆಸ್ಪತ್ರೆಯಲ್ಲಿ ಬೆಡ್‌ ಸಿಗುವುದು ಕಷ್ಟ. ಎಷ್ಟು ಸಾಧ್ಯವೋ ಅಷ್ಟು ಗುಣಪಡಿಸಿಕೊಂಡು ಹೋಗುವುದೇ ಒಳಿತು ಎನ್ನುವ ನಿರ್ಧಾರದಿಂದ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದರೂ ಐಸಿಯು ಮತ್ತು ಐಸಿಯು ವೆಂಟಿಲೇಟರ್‌ ಬೆಡ್‌ಗಳು ಮಾತ್ರ ಸದ್ಯಕ್ಕೆ ಎಲ್ಲೂ ಖಾಲಿ ಇಲ್ಲ.