ರಸ್ತೆ ಬದಿ ಅಂಗಡಿಯಿಂದ ಮಾವು ಕಳವು: ಪೊಲೀಸ್ ಅಧಿಕಾರಿ ಸಸ್ಪೆಂಡ್

ಕೇರಳ ಇಡುಕ್ಕಿಯಲ್ಲಿ ರಸ್ತೆ ಬದಿ ಅಂಗಡಿಯೊಂದರಲ್ಲಿ ಇರಿಸಲಾಗಿದ್ದ ಮಾವಿನ ಹಣ್ಣುಗಳನ್ನು ಪೊಲೀಸ್ ಅಧಿಕಾರಿಯೊಬ್ಬರು ಕದ್ದಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ವೈರಲ್ ಆಗಿದ್ದು ಕೇರಳ ಪೊಲೀಸ್ ಇಲಾಖೆಗೆ ತೀವ್ರ ಮುಜುಗರ ತಂದಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಆರೋಪಿ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಿರುವ ಇಲಾಖೆ ಆತನ ವಿರುದ್ದ ಪ್ರಕರಣ ದಾಖಲಿಸಿಕೊಂಡಿದೆ. ಬೆಳಂಬೆಳಗ್ಗೆ 4 ಗಂಟೆ ಸುಮಾರಿಗೆ ಕರ್ತವ್ಯ ಮುಗಿಸಿ ಮನೆಗೆ ಹಿಂದುರುಗುವ ಹೊತ್ತಿಗೆ ಪೊಲೀಸ್ ಅಧಿಕಾರಿ ರಸ್ತೆ ಬದಿಯಲ್ಲಿರಿಸಿದ್ದ ಮಾವಿನ ಹಣ್ಣುಗಳನ್ನು ತನ್ನ ಸ್ಕೂಟರ್ ಸೀಟಿನ ಕೆಳಗಿರುವ ಖಾಲಿ ಜಾಗದಲ್ಲಿರಿಸಿ ಜಾಗ ಖಾಲಿ ಮಾಡಿದ್ದ.

Linkup