18 ವರ್ಷ ಮೇಲ್ಪಟ್ಟವರಿಗೆ ಲಸಿಕೆ: ಮೊದಲ ದಿನವೇ 80 ಲಕ್ಷಕ್ಕೂ ಹೆಚ್ಚುನೋಂದಣಿ!
18 ವರ್ಷ ಮೇಲ್ಪಟ್ಟವರಿಗೆ ಲಸಿಕೆ: ಮೊದಲ ದಿನವೇ 80 ಲಕ್ಷಕ್ಕೂ ಹೆಚ್ಚುನೋಂದಣಿ!
ಹದಿನೆಂಟು ವರ್ಷ ಮೀರಿದವರೂ ಮೇ 1ರಿಂದ ಲಸಿಕೆ ಪಡೆಯಲು ಬುಧವಾರದಿಂದ ನೋಂದಣಿ ಆರಂಭವಾಗಿದ್ದು, ಮೊದಲ ದಿನವೇ ಜನರು ಹೆಸರು ನೋಂದಾಯಿಸಲು ಮುಗಿಬಿದ್ದಿದ್ದಾರೆ. 80 ಲಕ್ಷಕ್ಕೂ ಹೆಚ್ಚು ಮಂದಿ ಲಸಿಕೆ ಪಡೆಯಲು ಹೆಸರು ನೋಂದಾಯಿಸಿದ್ದಾರೆ.
ಹೊಸದಿಲ್ಲಿ: ಹದಿನೆಂಟು ವರ್ಷ ಮೀರಿದವರೂ ಮೇ 1ರಿಂದ ಲಸಿಕೆ ಪಡೆಯಲು ಬುಧವಾರದಿಂದ ಆರಂಭವಾಗಿದ್ದು, ಮೊದಲ ದಿನವೇ ಜನರು ಹೆಸರು ನೋಂದಾಯಿಸಲು ಮುಗಿಬಿದ್ದಿದ್ದಾರೆ. ದಟ್ಟಣೆ ತಾಳಲಾರದೆ 'ಕೋವಿನ್' ವೆಬ್‌ಸೈಟ್ ಕೆಲಕಾಲ ಕೈಕೊಟ್ಟ ಪ್ರಸಂಗವೂ ನಡೆದಿದೆ. ಮೊದಲ ದಿನ ಸುಮಾರು 80 ಲಕ್ಷಕ್ಕೂ ಹೆಚ್ಚು ಮಂದಿ ಲಸಿಕೆ ಪಡೆಯಲು ಹೆಸರು ನೋಂದಾಯಿಸಿದ್ದಾರೆ.
ಪ್ರತಿ ನಿಮಿಷಕ್ಕೆ 27 ಲಕ್ಷ ಮಂದಿ ವೆಬ್‌ಸೈಟ್‌ಗೆ ಭೇಟಿ ನೀಡಿದ್ದು, ಮೊದಲ ಒಂದು ಗಂಟೆಯಲ್ಲೇ 35 ಲಕ್ಷ ಮಂದಿ ನೋಂದಾಯಿಸಿಕೊಂಡಿದ್ದಾರೆ. ಆದರೆ, ವೆಬ್‌ಸೈಟ್‌ಗೆ ವಿಸಿಟ್ ದಟ್ಟಣೆ ಹೆಚ್ಚಾದಂತೆ, 'ಸರ್ವರ್ ಸಂಪರ್ಕ ಸಮಸ್ಯೆ', ಒಟಿಪಿ ವಿಳಂಬ ಮುಂತಾದ ಸಮಸ್ಯೆಗಲು ಎದುರಾದವು. ಸುಮಾರು 1 ಗಂಟೆ ಬಳಿಕ ದೋಷ ಸರಿಪಡಿಸಲಾಯಿತು.
ಲಸಿಕಾ ಕೇಂದ್ರಗಳಲ್ಲಿಜನದಟ್ಟಣೆ ತಡೆಯುವ ನಿಟ್ಟಿನಲ್ಲಿ18 ವರ್ಷದಿಂದ 45 ವರ್ಷದ ವಯೋಮಿತಿಯವರಿಗೆ ಲಸಿಕೆ ಪಡೆಯಲು ವೆಬ್‌ಸೈಟ್ ಮೂಲಕ ಪೂರ್ವ ನೋಂದಣಿ ಕಡ್ಡಾಯವಾಗಿದೆ. 45 ವರ್ಷ ಮೀರಿದವರಿಗೆ ಲಸಿಕಾ ಕೇಂದ್ರದಲ್ಲೇ ನೋಂದಣಿಗೆ ಅವಕಾಶ ಮುಂದುವರಿದಿದೆ.
ಖಾಸಗಿಯಾಗಿ ಪಡೆಯಲು ದರವೆಷ್ಟು?
(1 ಡೋಸ್‌ಗೆ, ಅಡ್ಮಿನಿಸ್ಪ್ರೇಷನ್ ಶುಲ್ಕದ ಹೊರತಾಗಿ)
ಕೋವಿಶೀಲ್ಡ್ - 600
ಕೋವ್ಯಾಕ್ಸಿನ್ - 1,200
ಸರಕಾರಿ ಆಸ್ಪತ್ರೆಗಳಲ್ಲಿಉಚಿತ
ಕೋವಿಶೀಲ್ಡ್ ದರ 300 ರೂ.ಗೆ ಇಳಿಕೆ
ರಾಜ್ಯ ಸರಕಾರಗಳಿಗೆ ಮಾರುವ 'ಕೋವಿಶೀಲ್ಡ್' ಲಸಿಕೆಯ ದರವನ್ನು ಪುಣೆಯ ಸೀರಮ್ ಇನ್ಸ್‌ಟಿಟ್ಯೂಟ್ ತಕ್ಷಣವೇ ಜಾರಿಯಾಗುವಂತೆ ಡೋಸ್‌ಗೆ 400 ರೂ.ನಿಂದ 300 ರೂ.ಗೆ ಇಳಿಸಿದೆ. ಹೆಚ್ಚಿನ ಜೀವಗಳನ್ನು ಉಳಿಸುವ ನಿಟ್ಟಿನಲ್ಲಿ ಮಾನವೀಯತೆ ಆಧಾರದ ಮೇಲೆ ದರ ಇಳಿಸಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ಅದರ್ ಪೂನವಾಲಾ ಹೇಳಿದ್ದಾರೆ.
ಇತರೆ ಪ್ರಮುಖಾಂಶಗಳು
ಮೇ 1ರಂದು ಭಾರತಕ್ಕೆ ತಲುಪಲಿರುವ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ
ಮಹಾರಾಷ್ಟ್ರದಲ್ಲಿ ಲಾಕ್‌ಡೌನ್ ಇನ್ನೂ 15 ದಿನ ಮುಂದುವರಿಕೆ
ಇಂದಿನಿಂದ ಮೇ 3ರವರೆಗೆ ಗೋವಾ ಸಂಪೂರ್ಣ 'ಲಾಕ್'
ಪಿಎಂ ಕೇರ್ಸ್ ನಿಧಿಯಿಂದ 1 ಲಕ್ಷ ಪೋರ್ಟಬಲ್ ಆಕ್ಸಿಜನ್ ಕಾನ್ಸಂಟ್ರೇಟರ್ ಖರೀದಿ
500 ಆಕ್ಸಿಜನ್ ಘಟಕಗಳನ್ನು ಸ್ಥಾಪಿಸಲಿರುವ ಡಿಆರ್‌ಡಿಒ
ರಾಜ್ಯ, ದೇಶದಲ್ಲಿ ದಾಖಲೆ ಸಾವು
ರಾಜ್ಯದಲ್ಲಿ ಬುಧವಾರ ದಾಖಲೆ 229 ಮಂದಿ ಸೋಂಕಿಗೆ ಬಲಿಯಾಗಿದ್ದು, 39 ಸಾವಿರ ಮಂದಿಗೆ ಸೋಂಕು ದೃಢಪಟ್ಟಿದೆ. ಬೆಂಗಳೂರಿನಲ್ಲಿ 137 ಮಂದಿ ಮೃತಪಟ್ಟಿದ್ದು, 22,596 ಕೇಸ್ ಪತ್ತೆಯಾಗಿವೆ. ದೇಶದಲ್ಲೂ ದೈನಂದಿನ ಸಾವಿನ ಸಂಖ್ಯೆ ಮೊದಲ ಬಾರಿಗೆ 3 ಸಾವಿರ ದಾಟಿದೆ. 3.69 ಲಕ್ಷ ಪ್ರಕರಣಗಳು ವರದಿಯಾಗಿವೆ.