ನಟ ಧ್ರುವ ಸರ್ಜಾ ನೋಡಲು ಅವರ ಮನೆಗೆ ಬಂದ ಅಭಿಮಾನಿ ಬೈಕ್ ಕಳವು; ದೂರು ದಾಖಲು

ನಟ ಧ್ರುವ ಸರ್ಜಾ ಅವರನ್ನು ನೋಡಲು ಬಂದ ಅಭಿಮಾನಿಯೊಬ್ಬನ ಬೈಕ್ ಕಳವು ಆಗಿದೆ. ಈ ಕುರಿತು ಬನಶಂಕರಿ ಪೊಲೀಸ್‌ ಠಾಣೆಯಲ್ಲಿ ಬೈಕ್‌ ಕಳವು ಪ್ರಕರಣ ದಾಖಲಾಗಿದೆ. ಆ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ನಟ ಧ್ರುವ ಸರ್ಜಾ ನೋಡಲು ಅವರ ಮನೆಗೆ ಬಂದ ಅಭಿಮಾನಿ ಬೈಕ್ ಕಳವು; ದೂರು ದಾಖಲು
Linkup
(ವಿಕ ಸುದ್ದಿಲೋಕ ಬೆಂಗಳೂರು) ತನ್ನ ನೆಚ್ಚಿನ ನಟ ಅವರನ್ನು ನೋಡಲು ಅವರ ಮನೆಗೆ ತೆರಳಿದ ವೇಳೆ, ಮನೆ ಮುಂದೆ ನಿಲ್ಲಿಸಿದ್ದ ಅಭಿಮಾನಿಯ ಬೈಕ್‌ ಕಳವಾಗಿರುವುದು ಬೆಳಕಿಗೆ ಬಂದಿದೆ. ಆರ್‌.ಆರ್‌. ನಗರದ ನಿವಾಸಿ ಸುನಿಲ್‌ ಬೈಕ್‌ ಕಳೆದುಕೊಂಡವರು. ಜುಲೈ 2, 2021ರಂದು ಧ್ರುವ ಸರ್ಜಾ ಅವರನ್ನು ನೋಡಲು ಕೆ.ಆರ್‌. ರಸ್ತೆಯಲ್ಲಿರುವ ಅವರ ಮನೆಗೆ ತೆರಳಿದ್ದರು. ಈ ವೇಳೆ ಮನೆಯ ಹೊರಗೆ ಬೈಕ್‌ ನಿಲ್ಲಿಸಿ, ಮನೆಯೊಳಗೆ ಹೋಗಿ ಧ್ರುವ ಅವರನ್ನು ಮಾತನಾಡಿಸಿ ಹೊರಬರುವಷ್ಟರಲ್ಲಿ ಬೈಕ್‌ ಕಳವಾಗಿದೆ. ಇದರಿಂದ ಗಲಿಬಿಲಿಗೊಂಡ ಸುನಿಲ್‌, ಬನಶಂಕರಿ ಪೊಲೀಸ್‌ ಠಾಣೆಯಲ್ಲಿ ಬೈಕ್‌ ಕಳವು ಪ್ರಕರಣ ದಾಖಲಿಸಿದ್ದಾರೆ. ಚೆನ್ನೈನಲ್ಲಿ ನಟ ಅರ್ಜುನ್ ಸರ್ಜಾ ಕಟ್ಟಿಸಿದ ಹನುಮಂತ ದೇಗುಲದ ಪ್ರತಿಷ್ಠಾಪನೆ ಕಾರ್ಯಕ್ಕೆ ಧ್ರುವ ಸರ್ಜಾ ಹೋಗಿದ್ದರು. ಧ್ರುವ ನಟನೆಯ 'ಪೊಗರು' ಸಿನಿಮಾಕ್ಕೆ ದೊಡ್ಡ ಹೈಪ್ ಸಿಕ್ಕಿತ್ತಾದರೂ ಕೂಡ ಬಾಕ್ಸ್ ಆಫೀಸ್‌ನಲ್ಲಾಗಲೀ, ಪ್ರೇಕ್ಷಕರ ಮನಸ್ಸಿನಲ್ಲಾಗಲೀ ಗೆಲ್ಲಲಿಲ್ಲ, ಬ್ರಾಹ್ಮಣರ ಬಗ್ಗೆ ಅವಹೇಳನ ಮಾಡಲಾಗಿದೆ ಎಂಬ ಆರೋಪದಡಿ ಕೆಲ ದೃಶ್ಯಗಳನ್ನು ಕತ್ತರಿಸಬೇಕಾಗಿ ಬಂತು. ಧ್ರುವ ಸರ್ಜಾ ಹೊಸ ಸಿನಿಮಾಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಅವರ ಹೇರ್‌ಸ್ಟೈಲ್, ದೇಹದ ಆಕಾರ ಕೂಡ ಬದಲಿಸಿಕೊಳ್ಳಬೇಕಿದೆ. 'ಪೊಗರು' ರಿಲೀಸ್ ಮುನ್ನವೇ 'ದುಬಾರಿ' ಟೈಟಲ್‌ನಡಿ ಧ್ರುವ ಸರ್ಜಾ ಸಿನಿಮಾ ಮಾಡುತ್ತಿರೋದು ಫಿಕ್ಸ್ ಆಗಿದೆ. ಆದರೆ ಆ ಚಿತ್ರದಿಂದ ನಿರ್ದೇಶಕ ನಂದ ಕಿಶೋರ್ ಹೊರಬಂದಿದ್ದಾರೆ. ನಿರ್ದೇಶಕ ಎಪಿ ಅರ್ಜುನ್ ಜೊತೆ ಧ್ರುವ ಸಿನಿಮಾ ಮಾಡಲಿದ್ದಾರಂತೆ.