ರೊಮ್ಯಾನ್ಸ್ ದೃಶ್ಯದಲ್ಲಿ ನಟಿಸ್ತೀನಿ ಎಂದರೆ ಅಲ್ಲಿ ಏನೋ ವಿಷಯ ಇರತ್ತೆ: ನಟಿ ರಚಿತಾ ರಾಮ್

ಅಜಯ್‌ ರಾವ್‌ ಮತ್ತು ರಚಿತಾ ರಾಮ್‌ ನಟನೆಯ ‘ಲವ್‌ ಯೂ ರಚ್ಚು’ ಚಿತ್ರದ ಹಾಡು ರಿಲೀಸ್‌ ಆಗಿದೆ. ರಚಿತಾ ರಾಮ್‌ ಮತ್ತೊಮ್ಮೆ ಬೋಲ್ಡ್‌ ಆಗಿ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಆ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ರೊಮ್ಯಾನ್ಸ್ ದೃಶ್ಯದಲ್ಲಿ ನಟಿಸ್ತೀನಿ ಎಂದರೆ ಅಲ್ಲಿ ಏನೋ ವಿಷಯ ಇರತ್ತೆ: ನಟಿ ರಚಿತಾ ರಾಮ್
Linkup
ಲವಲವಿಕೆ ಸುದ್ದಿಲೋಕ ಶಂಕರ್‌ ಎಸ್‌. ರಾಜ್‌ ನಿರ್ದೇಶನದ ಚಿತ್ರ ‘ಲವ್‌ ಯೂ ರಚ್ಚು’. ಡಿಸೆಂಬರ್‌ನಲ್ಲಿರಿಲೀಸ್‌ ಆಗುತ್ತಿದೆ. ನಟ ಅಜಯ್‌ ರಾವ್‌ ಮತ್ತು ‌ ನಟನೆಯ ಈ ಚಿತ್ರದ ಹಾಡೊಂದು ಮಂಗಳವಾರ ಬಿಡುಗಡೆಯಾಗಿದ್ದು, ಒಂದೇ ದಿನದಲ್ಲಿ 10 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಚಿತ್ರದ ನಾಯಕ ಅಜಯ್‌ ರಾವ್‌, ಇದು ಪ್ರೇಮಕಥೆ ಇರುವ ಚಿತ್ರ ಎಂದರು. ‘ಗಂಡ ಹೆಂಡತಿಯನ್ನು ಹೇಗೆ ಪ್ರೀತಿಸುತ್ತಾನೆ, ಕಾಪಾಡಿಕೊಳ್ಳುತ್ತಾನೆ ಎನ್ನುವುದು ಸಿನಿಮಾದಲ್ಲಿದೆ. ಸಿನಿಮಾ ನೋಡುವ ಪ್ರತಿಯೊಬ್ಬ ಹೆಣ್ಣಿಗೂ ಗಂಡ ಹೀಗಿರಬೇಕು ಅನ್ನಿಸೋದು ಖಂಡಿತ. ಇದುವರೆಗಿನ ನನ್ನ ಸಿನಿಮಾಗಳಂತೆಯೇ ಇದೂ ಗಟ್ಟಿಯಾಗಿ ನಿಲ್ಲುತ್ತೆ ಎನ್ನಿಸಿದೆ. ನಿರ್ದೇಶಕ ಶಶಾಂಕ್‌ ನನ್ನನ್ನೇ ಇಟ್ಟುಕೊಂಡು ಬರೆದ ಕಥೆ ಇದು. ನಾಯಕನಾಗಿ ಸಿನಿಮಾ ಚೆನ್ನಾಗಿ ಮಾಡುವ ಜವಾಬ್ದಾರಿ ನನ್ನ ಮೇಲೂ ಇರುತ್ತೆ. ಹಾಗಾಗಿ ಪ್ರೊಡಕ್ಷನ್‌ನ ಪ್ರತಿ ಹಂತದಲ್ಲಿ ನಾನು ಇನ್ವಾಲ್ವ್ ಆಗಿದ್ದೇನೆ’ ಎಂದರು ಅವರು. ಬೋಲ್ಡ್ ಪಾತ್ರದಲ್ಲಿ ರಚಿತಾ ರಾಮ್ ಉಪೇಂದ್ರ ನಟನೆಯ ‘ಐ ಲವ್‌ ಯೂ’ ಚಿತ್ರದ ನಂತರ ರಚಿತಾ ಮತ್ತೊಮ್ಮೆ ಹಾಡೊಂದರಲ್ಲಿ ಬೋಲ್ಡ್‌ ಅಂಡ್‌ ಗ್ಲಾಮರಸ್‌ ಆಗಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಸರ್‌ಪ್ರೈಸ್‌ ನೀಡಿದ್ದಾರೆ. ‘ಲವ್‌ ಯೂ ರಚ್ಚು’ ಚಿತ್ರದ ‘ಮುದ್ದು ನೀನು..’ ಎಂಬ ಹಾಡು ಇದಾಗಿದ್ದು, ಇದನ್ನು ಸಿದ್‌ ಶ್ರೀರಾಮ್‌ ಹಾಡಿದ್ದಾರೆ. ಮಣಿಕಾಂತ್‌ ಕದ್ರಿ ಸಂಗೀತ ನೀಡಿದ್ದಾರೆ. ನಾಗಾರ್ಜುನ್‌ ಶರ್ಮ ಹಾಡು ಬರೆದಿದ್ದಾರೆ. ಹಾಡಿನಲ್ಲಿ ಹೀರೊ, ಹಿರೋಯಿನ್‌ ಪ್ರೀತಿಯಲ್ಲಿಬೀಳುವ, ಪ್ರೇಮಿಸುವ, ಮದುವೆಯಾಗಿ ಜೀವನ ಸಾಗಿಸುವ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ರೊಮ್ಯಾನ್ಸ್ ದೃಶ್ಯದಲ್ಲಿ ನಟಿಸ್ತೀನಿ ಎಂದರೆ ಅಲ್ಲಿ ಏನೋ ವಿಷಯ ಇರತ್ತೆ! ‘ಮದುವೆಯಾದ ನಂತರ ಮೊದಲ ರಾತ್ರಿ ರೊಮ್ಯಾನ್ಸ್‌ ಮಾಡುತ್ತಾರೆ. ಇಂಥ ದೃಶ್ಯಗಳಲ್ಲಿ ನಾನು ನಟಿಸಿದ್ದೇನೆ ಎಂದರೆ ಅಲ್ಲಿ ಏನೋ ಒಂದು ವಿಷಯ ಇರುತ್ತೆ. ಸಿನಿಮಾ ನೋಡಿದಾಗ ಅದು ಏನು ಎನ್ನುವುದು ಗೊತ್ತಾಗುತ್ತೆ. ಚಿತ್ರದ ಕಥೆ ನನಗೆ ಬಹಳ ಇಷ್ಟ ಆಯ್ತು. ರಿಯಲಿಸ್ಟಿಕ್‌ ಆಗಿದೆ. ಒಂದು ಜೋಡಿಯ ನಡುವೆ ನಡೆಯುವ ಕಥೆ. ಎಮೋಷನಲ್‌ ಆಗಿದೆ’ ಎಂದರು ರಚಿತಾ ರಾಮ್‌. ಈ ಸಂದರ್ಭದಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಿದ ಚಿತ್ರತಂಡ ಅವರೊಂದಿಗಿನ ನೆನಪುಗಳನ್ನು ಹಂಚಿಕೊಂಡಿದೆ. ‘ಅಪ್ಪು ಸರ್‌ ತುಂಬಾ ದೊಡ್ಡ ವ್ಯಕ್ತಿ ಎನ್ನುವುದು ಗೊತ್ತಿತ್ತು. ಆದರೆ, ಅವರಿಗೆ ಇಷ್ಟೊಂದು ಅಭಿಮಾನಿಗಳಿರೋದು ಈಗಲೇ ಗೊತ್ತಾಗಿದ್ದು. ಸದಾ ನಗುತ್ತಿದ್ದ ವ್ಯಕ್ತಿ. ರೋಲ್‌ ಮಾಡೆಲ್‌ ಯಾರು ಎಂದಾಗ ನನ್ನಮ್ಮ ಎನ್ನುತ್ತಿದ್ದೆ. ಈಗ ಅಪ್ಪು ಸರ್‌ ಕೂಡ ನನಗೆ ರೋಲ್‌ ಮಾಡೆಲ್‌. ಬದುಕಿದರೆ ಅಪ್ಪು ರೀತಿ ಬದುಕಬೇಕು ಎನ್ನಿಸಿದೆ’ ಎಂದರು ರಚಿತಾ. ಲವ್‌ ಯೂ ರಚ್ಚು ಚಿತ್ರದ ‘ನೋಡುತ ನಿನ್ನನೇ’ ಎಂಬ ಹಾಡು ಈಗಾಗಲೇ ರಿಲೀಸ್‌ ಆಗಿದೆ. ಇದನ್ನು ಸಂಜಿತ್‌ ಹೆಗ್ಡೆ ಹಾಡಿದ್ದಾರೆ. ಗುರು ದೇಶಪಾಂಡೆ ಚಿತ್ರ ನಿರ್ಮಾಣ ಮಾಡಿದ್ದಾರೆ.