Pushpa First Review: ಟಾಲಿವುಡ್‌ನಲ್ಲಿ ತಯಾರಾದ ಒನ್ ಆಫ್ ದಿ ಬೆಸ್ಟ್ ಮೂವಿ ‘ಪುಷ್ಪ’!

‘ಪುಷ್ಪ’ ಚಿತ್ರದ ಬಿಡುಗಡೆಗೆ ಇನ್ನೊಂದೇ ದಿನ ಬಾಕಿ ಉಳಿದಿರುವಾಗಲೇ, ಚಿತ್ರದ ಮೊಟ್ಟ ಮೊದಲ ವಿಮರ್ಶೆ ಔಟ್ ಆಗಿದೆ. ಓವರ್‌ಸೀಸ್ ಸೆನ್ಸಾರ್ ಬೋರ್ಡ್‌ನ ಸದಸ್ಯರಾಗಿರುವ ಉಮೈರ್ ಸಾಂಧು ಎಂಬುವರು ‘ಪುಷ್ಪ’ ಚಿತ್ರದ ಮೊದಲ ವಿಮರ್ಶೆಯನ್ನು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Pushpa First Review: ಟಾಲಿವುಡ್‌ನಲ್ಲಿ ತಯಾರಾದ ಒನ್ ಆಫ್ ದಿ ಬೆಸ್ಟ್ ಮೂವಿ ‘ಪುಷ್ಪ’!
Linkup
ಇಡೀ ಭಾರತದಾದ್ಯಂತ ಬಹು ನಿರೀಕ್ಷೆ ಹುಟ್ಟುಹಾಕಿರುವ ಸಿನಿಮಾಗಳಲ್ಲಿ ‘’ ಕೂಡ ಒಂದು. ಅಭಿನಯದ ‘ಪುಷ್ಪ’ ಸಿನಿಮಾ ಇದೇ ಶುಕ್ರವಾರ.. ಅಂದ್ರೆ ಡಿಸೆಂಬರ್ 17 ರಂದು ವಿಶ್ವದಾದ್ಯಂತ ತೆರೆಕಾಣಲಿದೆ. ಈಗಾಗಲೇ ಬಿಡುಗಡೆಯಾಗಿರುವ ‘ಪುಷ್ಪ’ ಸಿನಿಮಾ ಟೀಸರ್, ಟ್ರೈಲರ್, ಸಾಂಗ್ಸ್.. ಎಲ್ಲವೂ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಂಗ್ ಆಗಿದ್ದು, ಚಿತ್ರವನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ತುದಿಗಾಲಿನಲ್ಲಿ ನಿಂತಿದ್ದಾರೆ. ಅತ್ತ ‘ಪುಷ್ಪ’ ಚಿತ್ರದ ಪ್ರಮೋಷನ್ ಕಾರ್ಯದಲ್ಲಿ ಸಿನಿಮಾ ತಂಡ ಬಿಜಿಯಾಗಿದೆ. ಇವತ್ತಷ್ಟೇ ‘ಪುಷ್ಪ’ ಚಿತ್ರತಂಡ ಬೆಂಗಳೂರಿಗೆ ಆಗಮಿಸಿತ್ತು. ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್, ನಟಿ , ನಟ ಧನಂಜಯ ‘ಪುಷ್ಪ’ ಚಿತ್ರದ ಬಗ್ಗೆ ಕನ್ನಡ ಮಾಧ್ಯಮಗಳೊಂದಿಗೆ ಮಾತನಾಡಿದರು. ‘ಪುಷ್ಪ’ ಚಿತ್ರದ ಬಿಡುಗಡೆಗೆ ಇನ್ನೊಂದೇ ದಿನ ಬಾಕಿ ಉಳಿದಿರುವಾಗಲೇ, ಚಿತ್ರದ ಮೊಟ್ಟ ಮೊದಲ ವಿಮರ್ಶೆ ಔಟ್ ಆಗಿದೆ. ಓವರ್‌ಸೀಸ್ ಸೆನ್ಸಾರ್ ಬೋರ್ಡ್‌ನ ಸದಸ್ಯರಾಗಿರುವ ಉಮೈರ್ ಸಾಂಧು ಎಂಬುವರು ‘ಪುಷ್ಪ’ ಚಿತ್ರದ ಮೊದಲ ವಿಮರ್ಶೆಯನ್ನು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಉಮೈರ್ ಸಾಂಧು ಕೊಟ್ಟ ವಿಮರ್ಶೆ ಏನು? ‘’ಪುಷ್ಪ’ ಚಿತ್ರದ ವಿಶೇಷತೆ ಏನಂದ್ರೆ ಅಲ್ಲು ಅರ್ಜುನ್ ಅವರ ಅತ್ಯದ್ಭುತ ಅಭಿನಯ, ರಶ್ಮಿಕಾ ಮಂದಣ್ಣ ಅವರ ನಟನೆ, ಒಳ್ಳೆಯ ಕಥೆ - ಚಿತ್ರಕಥೆ, ಮಾಸ್ ಆಕ್ಷನ್ - ಸ್ಟಂಟ್ಸ್, ನಟಿ ಸಮಂತಾ ಅವರ ಹಾಟ್ ಐಟಂ ಸಾಂಗ್. ‘ಪುಷ್ಪ’ ಬ್ಲಾಕ್ ಬಸ್ಟರ್ ಸಿನಿಮಾ. ನೋಡಿ ಆನಂದಿಸಿ’’ ಎಂದು ಉಮೈರ್ ಸಾಂಧು ಟ್ವೀಟ್ ಮಾಡಿದ್ದಾರೆ. ಜೊತೆಗೆ ಚಿತ್ರಕ್ಕೆ ಅವರು 4 ಸ್ಟಾರ್ ರೇಟಿಂಗ್ ಕೊಟ್ಟಿದ್ದಾರೆ. ಮತ್ತೊಂದು ಟ್ವೀಟ್‌ನಲ್ಲಿ, ‘’ನನ್ನ ಪ್ರಕಾರ, 2021ರ ಟಾಲಿವುಡ್‌ನ ಅತ್ಯುತ್ತಮ ಸಿನಿಮಾ ‘ಪುಷ್ಪ’’ ಎಂದಿದ್ದಾರೆ ಉಮೈರ್ ಸಾಂಧು. ‘’ಪುಷ್ಪ’ ಸಿನಿಮಾ ಅಲ್ಲು ಅರ್ಜುನ್ ಅವರ ವೃತ್ತಿ ಜೀವನದಲ್ಲಿಯೇ ಟರ್ನಿಂಗ್ ಪಾಯಿಂಟ್. ಫೆಂಟಾಬ್ಯುಲಸ್ - ಅಲ್ಲು ಅರ್ಜುನ್ ಅವರ ಪರ್ಫಾಮೆನ್ಸ್ ಬಣ್ಣಿಸಲು ಇದು ಸರಿಯಾದ ಪದ. ಅಲ್ಲು ಅರ್ಜುನ್ ಅವರ ಹೊಸ ಅವತಾರ ಅಭಿಮಾನಿಗಳಿಗೆ ಖಂಡಿತ ಇಷ್ಟವಾಗುತ್ತದೆ’’ ಎಂತಲೂ ಉಮೈರ್ ಸಾಂಧು ಟ್ವೀಟ್ ಮಾಡಿದ್ದಾರೆ. ‘’ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅವರ ಕೆಮಿಸ್ಟ್ರಿ ಸಖತ್ತಾಗಿದೆ. ರಶ್ಮಿಕಾ ಮಂದಣ್ಣ ಅವರ ಅಭಿನಯ ಕೂಡ ಚೆನ್ನಾಗಿದೆ. ಸುಕುಮಾರ್ ಅವರ ನಿರ್ದೇಶನ ಅತ್ಯದ್ಭುತವಾಗಿ ಮೂಡಿಬಂದಿದೆ’’ ಎಂದು ಉಮೈರ್ ಸಾಂಧು ಟ್ವೀಟಿಸಿದ್ದಾರೆ. ‘’ಟಾಲಿವುಡ್‌ನಲ್ಲಿ ತಯಾರಾದ ಒನ್ ಆಫ್ ದಿ ಬೆಸ್ಟ್ ಚಿತ್ರಗಳಲ್ಲಿ ‘ಪುಷ್ಪ’ ಕೂಡ ಒಂದು. ವೃತ್ತಿ ಜೀವನದಲ್ಲೇ ಅಲ್ಲು ಅರ್ಜುನ್ ಬೆಸ್ಟ್ ಪರ್ಫಾಮೆನ್ಸ್ ಕೊಟ್ಟಿದ್ದಾರೆ. ಅವರ ಅಭಿನಯ ರಾಷ್ಟ್ರ ಪ್ರಶಸ್ತಿಗೆ ಅರ್ಹ’’ ಎಂದೂ ಉಮೈರ್ ಸಾಂಧು ಅಭಿಪ್ರಾಯ ಪಟ್ಟಿದ್ದಾರೆ. ‘ಪುಷ್ಪ’ ‘ಆರ್ಯ’ ಮತ್ತು ‘ಆರ್ಯ 2’ ಚಿತ್ರಗಳ ಬಳಿಕ ಅಲ್ಲು ಅರ್ಜುನ್ ಹಾಗೂ ಸುಕುಮಾರ್ ಒಂದಾಗಿರುವುದು ‘ಪುಷ್ಪ’ ಚಿತ್ರಕ್ಕಾಗಿ. ಹೀಗಾಗಿ, ‘ಪುಷ್ಪ’ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆ ಇದೆ. ‘ಪುಷ್ಪ’ ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಧನಂಜಯ, ಪ್ರಕಾಶ್ ರಾಜ್, ಸುನೀಲ್ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ.