ರಾಮನ ಅವತಾರ, ಇಸ್ಲಾಂ ನಿರ್ದೇಶನದ ಸಿನಿಮಾಗಳಲ್ಲಿ ಕನ್ನಡ ನಟ ರಿಷಿ!

'ಆಪರೇಷನ್‌ ಅಲಮೇಲಮ್ಮ' ಮೂಲಕ ಚಿತ್ರರಂಗ ಪ್ರವೇಶ ಮಾಡಿದ ರಿಷಿ ತಮ್ಮ ಮುಂದಿನ ಸಿನಿಮಾಗಳಲ್ಲಿ ಪ್ರಯೋಗಾತ್ಮಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಆ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ. ಸಂಕ್ಷಿಪ್ತ ಲೇಖನ ಇಲ್ಲಿದೆ.

ರಾಮನ ಅವತಾರ, ಇಸ್ಲಾಂ ನಿರ್ದೇಶನದ ಸಿನಿಮಾಗಳಲ್ಲಿ ಕನ್ನಡ ನಟ ರಿಷಿ!
Linkup
(ಲವಲವಿಕೆ ಸುದ್ದಿಲೋಕ) ಕನ್ನಡ ಚಿತ್ರರಂಗದ ಪ್ರತಿಭಾವಂತ ನಟರಲ್ಲಿ ಒಬ್ಬರಾದ ತಮ್ಮ ಮೊದಲ ಚಿತ್ರದಿಂದಲೂ ವಿಭಿನ್ನ ರೀತಿಯ ಪಾತ್ರಗಳನ್ನು ನಿರ್ವಹಿಸಿಕೊಂಡು ಬಂದಿದ್ದರು. ಈಗ ಎರಡು ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದು, ಎರಡರಲ್ಲಿಯೂ ಪ್ರಯೋಗಾತ್ಮಕ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ರಿಷಿ ಸದ್ಯ 'ರಾಮನ ಅವತಾರ' ಮತ್ತು ಇಸ್ಲಾ ಎಂಬ ನಿರ್ದೇಶಕರ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕೋವಿಡ್‌ ಕಾರಣಕ್ಕೆ ಚಿತ್ರೀಕರಣಕ್ಕೆ ಬ್ರೇಕ್‌ ಬಿದ್ದಿದೆ. ಇಸ್ಲಾಅವರ ಸಿನಿಮಾ ಕೊನೆಯ ಹಂತದಲ್ಲಿದ್ದು, ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಬಾಕಿ ಇವೆಯಂತೆ. 'ರಾಮನ ಅವತಾರ' ಚಿತ್ರವನ್ನು ಮೇ 20ರಿಂದ ಆರಂಭ ಮಾಡಬೇಕು ಎಂದುಕೊಂಡಿದ್ದರು. ಆದರೆ ಕೋವಿಡ್‌ ಕಾರಣದಿಂದ ಅದು ಮುಂದಕ್ಕೆ ಹೋಗುವ ಸಾಧ್ಯತೆ ಇದೆ. 'ನಾನು ಆರಂಭದಿಂದಲೂ ವಿಭಿನ್ನ ಕಥೆಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತೇನೆ. ಇದುವರೆಗೂ ಮಾಡಿರುವ ಸಿನಿಮಾಗಳು ಅಂತಹವೇ ಆಗಿವೆ. ಈಗ ನಟಿಸುತ್ತಿರುವ ರಾಮನ ಅವತಾರ, ಜಯತೀರ್ಥ ಅವರ ಚಿತ್ರ, ಇಸ್ಲಾ ಅವರ ಸಿನಿಮಾಗಳಲ್ಲಿನ ಪಾತ್ರಗಳು ಒಂದಕ್ಕಿಂತ ಒಂದು ವಿಭಿನ್ನವಾಗಿವೆ. ಇಸ್ಲಾಅವರ ಸಿನಿಮಾದಲ್ಲಿನ ಪಾತ್ರ ಬ್ಲಾಕ್‌ ಕಾಮಿಡಿ ಮೂಲಕ ಜನರಿಗೆ ಒಂದು ಸಂದೇಶವನ್ನು ತಿಳಿಸುವ ಪ್ರಯತ್ನವಾಗಿದೆ' ಎನ್ನುತ್ತಾರೆ ರಿಷಿ. 'ಇಸ್ಲಾ, ಬಹಳ ಒಳ್ಳೆಯ ತಂತ್ರಜ್ಞ. ಅವರ ಸಿನಿಮಾ ನಿಜಕ್ಕೂ ಜನರಿಗೆ ಬೇರೆ ರೀತಿಯ ಎಂಟರ್‌ಟೇನ್‌ಮೆಂಟ್‌ ನೀಡಲಿದೆ. ಆ ಚಿತ್ರದೊಳಗಿನ ಪಾತ್ರಧಾರಿಗೆ ಬಹಳ ಕಷ್ಟವಾಗುತ್ತಿರುತ್ತದೆ. ಆದರೆ ಅದು ನೋಡುಗನಿಗೆ ನಗು ತರಿಸುತ್ತಿರುತ್ತದೆ. ಸಿನಿಮಾದಲ್ಲಿನ ನನ್ನ ಪಾತ್ರ ಡಿಪ್ರೆಶನ್‌ನಲ್ಲಿರುತ್ತದೆ. ಅದರಿಂದ ಹೊರ ಬರಲು ಆತ ಮಾಡುವುದೇನು ಮತ್ತು ಆ ಡಿಪ್ರೆಶನ್‌ನಿಂದ ಯುವಕರಿಗೆ ಆಗುವ ತೊಂದರೆಗಳು ಹೀಗೆ ಸಾಕಷ್ಟು ವಿಷಯಗಳನ್ನು ಸಿನಿಮಾದಲ್ಲಿ ಹೇಳಲಾಗಿದೆ' ಎನ್ನುವುದು ರಿಷಿ ಅವರ ಮಾತು. ಈ ಎರಡು ಚಿತ್ರಗಳ ನಡುವೆ ರಿಷಿ ಅವರನ್ನು ಒಂದಿಬ್ಬರು ನಿರ್ದೇಶಕರು ಭೇಟಿ ಮಾಡಿದ್ದಾರೆ. ಸದ್ಯದಲ್ಲೇ ಅವರಾರ‍ಯರು, ಯಾವೆಲ್ಲ ಸಿನಿಮಾಗಳು ಎಂಬುದನ್ನು ಸ್ವತಃ ರಿಷಿಯವರೇ ಬಹಿರಂಗಪಡಿಸಲಿದ್ದಾರೆ. ಲಾಕ್‌ಡೌನ್‌ ತೆರವಾಗಿ, ಚಿತ್ರೀಕರಣಕ್ಕೆ ಅನುಮತಿ ನೀಡಿದ ಕೂಡಲೇ 'ರಾಮನ ಅವತಾರ' ಮತ್ತು ನಿರ್ದೇಶನದ ಸಿನಿಮಾದ ಕೆಲಸಗಳನ್ನು ಒಟ್ಟಿಗೆ ರಿಷಿ ಆರಂಭಿಸುತ್ತಾರಂತೆ. ಇಸ್ಲಾಅವರ ಸಿನಿಮಾದಲ್ಲಿ ನನ್ನದು ಕೊಂಚ ಪ್ರಯೋಗಾತ್ಮಕ ಪಾತ್ರ ಎನ್ನಬಹುದು. ಬ್ಲಾಕ್‌ ಕಾಮಿಡಿ ಜಾನರ್‌ನಲ್ಲಿ ಈ ಸಿನಿಮಾ ಮೂಡಿ ಬಂದಿದೆ. ರಾಮನ ಅವತಾರದಲ್ಲಿಯೂ ಸಹ ವಿಶಿಷ್ಟ ಪಾತ್ರವನ್ನು ನಾನು ನಿರ್ವಹಿಸುತ್ತಿದ್ದೇನೆ ಎಂದು ಹೇಳುತ್ತಾರೆ ನಟ ರಿಷಿ