ರೈತರಿಗೆ ಶುಭ ಸುದ್ದಿ: 14 ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಮಾಡಿದ ಕೇಂದ್ರ ಸರಕಾರ
ರೈತರಿಗೆ ಶುಭ ಸುದ್ದಿ: 14 ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಮಾಡಿದ ಕೇಂದ್ರ ಸರಕಾರ
2021-22ನೇ ಸಾಲಿಗೆ ಭತ್ತ, ಹತ್ತಿ ಸೇರಿದಂತೆ ಮುಂಗಾರು ಹಂಗಾಮಿನ 14 ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಸರಕಾರ ಹೆಚ್ಚಳ ಮಾಡಿದ್ದು, ಭತ್ತದ ಎಸ್‌ಪಿಯನ್ನು ಕ್ವಿಂಟಾಲ್‌ಗೆ 75 ರೂ. ಹೆಚ್ಚಿಸಲಾಗಿದೆ.
ಹೊಸದಿಲ್ಲಿ: ಆಗಮನದಿಂದ ರೈತಾಪಿ ವರ್ಗದಲ್ಲಿ ಹೆಚ್ಚಿದ ಉತ್ಸಾಹದ ನಡುವೆಯೇ ಕೇಂದ್ರ ಸರಕಾರ ಕೃಷಿಕರಿಗೆ ಶುಭಸುದ್ದಿ ನೀಡಿದೆ.
2021-22ನೇ ಸಾಲಿಗೆ ಭತ್ತ, ಹತ್ತಿ ಸೇರಿದಂತೆ ಮುಂಗಾರು ಹಂಗಾಮಿನ 14 ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು () ಸರಕಾರ ಹೆಚ್ಚಳ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಮಳೆಗಾಲದ ಪ್ರಮುಖ ಬೆಳೆಯಾದ ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆಯನ್ನು ಕ್ವಿಂಟಾಲ್‌ಗೆ 72 ರೂ. ಹೆಚ್ಚಿಸಲಾಗಿದೆ. ಇದರಿಂದ ಸಾಮಾನ್ಯ ಭತ್ತದ ಬೆಲೆ 1,868 ರೂ.ನಿಂದ 1,940 ರೂ.ಗೆ ತಲುಪಿದೆ. 'ಎ' ಶ್ರೇಣಿ ಭತ್ತದ ಬೆಲೆ ಕ್ವಿಂಟಾಲ್‌ಗೆ 1,888 ರೂ.ನಿಂದ 1,960 ರೂ.ಗೆ ತಲುಪಿದೆ. ರಾಗಿಯ ಕ್ವಿಂಟಾಲ್‌ಗೆ 82 ರೂ. ಹೆಚ್ಚಳದೊಂದಿಗೆ 3,377 ರೂ.ಗೆ ತಲುಪಿದೆ. ಜೋಳದ ಎಂಎಸ್‌ಪಿ 118 ರೂ., ನೆಲಗಡಲೆಯ ಎಂಎಸ್‌ಪಿ 275 ರೂ. ಏರಿಕೆಯಾಗಿದೆ. ಉದ್ದು ಮತ್ತು ತೊಗರಿಯ ಎಂಎಸ್‌ಪಿಯನ್ನು ಕ್ವಿಂಟಾಲ್‌ಗೆ 300 ರೂ. ಹೆಚ್ಚಿಸಲಾಗಿದೆ. ವಾಣಿಜ್ಯ ಬೆಳೆಗಳ ಪೈಕಿ ಹತ್ತಿಯ ಎಂಎಸ್‌ಪಿಯನ್ನು ಕ್ವಿಂಟಾಲ್‌ಗೆ 211 ರೂ. ಹೆಚ್ಚಿಸಲಾಗಿದೆ. ಬೆಳೆ ವೈವಿಧ್ಯವನ್ನು ಉತ್ತೇಜಿಸುವ ಗುರಿಯೊಂದಿಗೆ ಬೆಲೆಗಳಲ್ಲಿ ವ್ಯತ್ಯಾಸ ಮಾಡಲಾಗಿದೆ.
ಕೃಷಿ ಚಟುವಟಿಕೆಗೆ ಉತ್ತೇಜನಕೋವಿಡ್ ಎರಡನೇ ಅಲೆ, ಲಾಕ್‌ಡೌನ್ ಹೊಡೆತದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಬೆಂಬಲ ಬೆಲೆ ಹೆಚ್ಚಳದಿಂದ ನೆರವಾಗಲಿದೆ. ಜೊತೆಗೆ, ಇದರಿಂದ ಮುಂಗಾರು ಹಂಗಾಮಿನ ಬೆಳೆಗಳನ್ನು ಬೆಳೆಯಲು ರೈತರಿಗೆ ಪ್ರೋತ್ಸಾಹ ದೊರೆಯಲಿದೆ. ಯಾವ ಬೆಳೆಗಳನ್ನು ಬೆಳೆಯಬೇಕೆಂಬ ಬಗ್ಗೆ ನಿರ್ಧರಿಸಲೂ ಸಹಾಯಕವಾಗಲಿದೆ. ಈಗಾಗಲೇ ಮುಂಗಾರು ಮಾರುತ ದಕ್ಷಿಣ ಭಾರತದ ಬಹುತೇಕ ರಾಜ್ಯಗಳಿಗೆ ವ್ಯಾಪಿಸಿರುವ ಹಿನ್ನೆಲೆಯಲ್ಲಿ ಕೃಷಿ ಚುಟವಟಿಕೆಗೆ ಮತ್ತಷ್ಟು ವೇಗ ದೊರೆಯುವ ನಿರೀಕ್ಷೆಯಿದೆ.
ಎಂಎಸ್‌ಪಿ ರದ್ದಾಗದು
ಬೆಲೆ ಹೆಚ್ಚಳದ ಘೋಷಣೆಯೊಂದಿಗೆ ನೂತನ ಕೃಷಿ ಕಾಯಿದೆಗಳ ಜಾರಿ ಬಳಿಕ ಎಂಎಸ್‌ಪಿ ರದ್ದಾಗುತ್ತದೆ ಎಂಬ ರೈತರ ಸಂಶಯವು ದೂರವಾಗಿದೆ. ಬೆಂಬಲ ಬೆಲೆ ಮುಂದೆಯೂ ಇರುತ್ತದೆ, ಅದರ ಹೆಚ್ಚಳವೂ ಮುಂದುವರಿಯುತ್ತದೆ. ಈ ಬಗ್ಗೆ ಸುಳ್ಳು ಪ್ರಚಾರಕ್ಕೆ ಕಿವಿಗೊಡಬಾರದು ಎಂದು ಸಚಿವ ತೋಮರ್ ಹೇಳಿದ್ದಾರೆ.
ಬೆಂಬಲ ಬೆಲೆ, ಯಾವುದಕ್ಕೆ ಎಷ್ಟು ಹೆಚ್ಚಳ?