ರಕ್ತಪಾತ ತಪ್ಪಿಸಲು ಆಫ್ಘಾನ್ ತೊರೆದೆ, ಭಯದಿಂದ ಅಲ್ಲ: ಮತ್ತೆ ಅಲ್ಲಿಗೆ ಹೋಗುತ್ತೇನೆ ಎಂದ ಅಶ್ರಫ್‌ ಘನಿ

ಅಫ್ಘಾನಿಸ್ತಾನದಲ್ಲಿನ ರಷ್ಯಾದ ರಾಯಭಾರಿ ಅಶ್ರಫ್‌ ಘನಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಘನಿ ನಾಲ್ಕು ಕಾರುಗಳು ಮತ್ತು ಹೆಲಿಕಾಪ್ಟರ್ ಹಣ ತುಂಬಿ ದೇಶ ಬಿಟ್ಟು ಪರಾರಿಯಾಗಿದ್ದರು ಎಂದು ಆರೋಪಿಸಿದ್ದರು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿದ ಅಶ್ರಫ್ ಘನಿ, ಇದು ಸುಳ್ಳಿನ ಕಂತೆ ನಾನು ಯಾವುದೇ ಹಣ ತೆಗೆದುಕೊಂಡು ಹೋಗಿಲ್ಲ. ನೀವು ಇದನ್ನು ಯುಎಇ ಕಸ್ಟಮ್ಸ್ ಮೂಲಕ ಪರಿಶೀಲಿಸಬಹುದು. ನಾನು ಪ್ರೀತಿಸುತ್ತಿದ್ದ ಪುಸ್ತಕಗಳನ್ನು ಕೊಂಡೊಯ್ದಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ರಕ್ತಪಾತ ತಪ್ಪಿಸಲು ಆಫ್ಘಾನ್ ತೊರೆದೆ, ಭಯದಿಂದ ಅಲ್ಲ: ಮತ್ತೆ ಅಲ್ಲಿಗೆ ಹೋಗುತ್ತೇನೆ ಎಂದ ಅಶ್ರಫ್‌ ಘನಿ
Linkup
ದುಬೈ: ನಾನು ಅಫ್ಘಾನಿಸ್ತಾನದಲ್ಲಿ ಉಳಿಯುತ್ತಿದ್ದರೆ ರಕ್ತಪಾತ ನೋಡಬೇಕಿತ್ತು, ರಕ್ತಪಾತ ತಪ್ಪಿಸಲು ನಾನು ದೇಶ ತೊರೆದೆ ಹೊರತು ಪ್ರಾಣಭೀತಿಯಿಂದ ಪರಾರಿಯಾಗಿಲ್ಲ ಎಂದು ಆಫ್ಘಾನ್‌ ಅಧ್ಯಕ್ಷ ಹೇಳಿದ್ದಾರೆ. ಆಫ್ಘಾನಿಸ್ತಾನ ತೊರೆದ ಬಳಿಕ ಇದೇ ಮೊದಲ ಬಾರಿಗೆ ಮೌನ ಮುರಿದ ಅಶ್ರಫ್‌ ಘನಿ, ತಮ್ಮ ಅಧಿಕೃತ ಫೇಸ್ ಬುಕ್ ವಿಡಿಯೋದಲ್ಲಿ ಮಾತನಾಡಿದ್ದಾರೆ. ನಾನು ಅಲ್ಲೇ ಉಳಿಯುತ್ತಿದ್ದರೆ ದೇಶದಲ್ಲಿ ದೊಡ್ಡ ಮಟ್ಟದ ರಕ್ತಪಾತ ನಡೆಯುತ್ತಿತ್ತು. ಇದನ್ನು ತಪ್ಪಿಸಲು ನಾನು ಅಲ್ಲಿಂದ ಹೊರಡಬೇಕಾಯಿತು. ಇಂತಹ ಅವಘಡ ತಪ್ಪಿಸುವ ಉದ್ದೇಶದಿಂದ ಬಂದಿದ್ದೇ ಹೊರತು ಪರಾರಿಯಾಗಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೇ ವಾಪಾಸ್‌ ತನ್ನ ತವರು ದೇಶಕ್ಕೆ ತೆರಳುವ ಇಚ್ಚೆ ವ್ಯಕ್ತಪಡಿಸಿರುವ ಅಶ್ರಫ್‌ ಘನಿ, ಈ ಬಗ್ಗೆ ಮಾತುಕತೆ ನಡೆಯುತ್ತಿದೆ. ನಾನು ಮರಳಿ ದೇಶಕ್ಕೆ ಹೋಗುವ ಬಗ್ಗ ಯೋಚಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಇನ್ನು ಇದೆ ವೇಳೆ ಆಫ್ಘಾನ್ ಸೇನೆಗೆ ಧನ್ಯವಾದ ತಿಳಿಸಿದ ಘನಿ, ಆಫ್ಘಾನ್‌ ಸೇನೆ ನಿಜಕ್ಕೂ ಉತ್ತಮ ಕೆಲಸ ಮಾಡಿದೆ. ಅವರಿಗೆ ನನ್ನ ಧನ್ಯವಾದಗಳು ಎಂದರು. ಜೊತೆಗಿನ ಮಾತುಕತೆ ಅಂತ್ಯಕ್ಕೆ ಬಂದಿರಲಿಲ್ಲ, ಇದೇ ಇಷ್ಟೆಲ್ಲ ಅವಘಡಗಳಿಗೆ ಕಾರಣ. ಇದು ನಾವು ಮಾಡಿದ ದೊಡ್ಡ ತಪ್ಪು ಎನ್ನುವ ಮೂಲಕ ತಾಲಿಬಾನ್‌ಗಳ ಜೊತೆಗೂಡಿ ಕೆಲಸ ಮಾಡುವ ಬಗ್ಗೆ ಘನಿ ಸುಳಿವು ನೀಡಿದ್ದಾರೆ. ತಾಲಿಬಾನಿಗೆ ಶಾಂತಿಯುತವಾಗಿ ಅಧಿಕಾರವನ್ನು ವರ್ಗಾಯಿಸಲು ನಾನು ಬಯಸಿದ್ದೆ, ಆದರೆ ಅವರು ನನ್ನ ಇಚ್ಛೆಗೆ ವಿರುದ್ಧವಾಗಿ ಅಫ್ಘಾನಿಸ್ತಾನದಿಂದ ನನ್ನನ್ನು ಹೊರಹಾಕಿದರು ಎಂದು ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ರಷ್ಯಾ ಮಾಡಿದ ಆರೋಪ ಸುಳ್ಳು! ಇನ್ನು ಅಫ್ಘಾನಿಸ್ತಾನದಲ್ಲಿನ ರಷ್ಯಾದ ರಾಯಭಾರಿ ಅಶ್ರಫ್‌ ಘನಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಘನಿ ನಾಲ್ಕು ಕಾರುಗಳು ಮತ್ತು ಹೆಲಿಕಾಪ್ಟರ್ ಹಣ ತುಂಬಿ ದೇಶ ಬಿಟ್ಟು ಪರಾರಿಯಾಗಿದ್ದರು ಎಂದು ಆರೋಪಿಸಿದ್ದರು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿದ ಅಶ್ರಫ್ ಘನಿ, ಇದು ಸುಳ್ಳಿನ ಕಂತೆ ನಾನು ಯಾವುದೇ ಹಣ ತೆಗೆದುಕೊಂಡು ಹೋಗಿಲ್ಲ. ನೀವು ಇದನ್ನು ಯುಎಇ ಕಸ್ಟಮ್ಸ್ ಮೂಲಕ ಪರಿಶೀಲಿಸಬಹುದು. ನಾನು ಪ್ರೀತಿಸುತ್ತಿದ್ದ ಪುಸ್ತಕಗಳನ್ನು ಕೊಂಡೊಯ್ದಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಅಶ್ರಫ್‌ ಘನಿ ಸದ್ಯ ಯುಎಇನಲ್ಲಿ ಇದ್ದಾರೆ. ಮಾನವೀಯತೆ ಮೆರೆಗೆ ಯುಎಇ ಘನಿ ಹಾಗೂ ಅವರ ಕುಟುಂಬಸ್ಥರಿಗೆ ವಾಸ್ತವ್ಯ ಹೂಡಲು ಅನುಮತಿ ನೀಡಿದೆ ಎಂದು ತಿಳಿಸಿದೆ.