ದೇಶದ ಶೇ 80ರಷ್ಟು ಭೌಗೋಳಿಕ ಪ್ರದೇಶಕ್ಕೆ ವ್ಯಾಪಿಸಿದ ಮುಂಗಾರು: ರಾಜ್ಯದಲ್ಲಿ ಮುಂದುವರಿದ ಮಳೆ ಆರ್ಭಟ

ಮುಂಗಾರು ಮಾರುತಗಳು ಕರ್ನಾಟಕ ಸೇರಿದಂತೆ ದೇಶದ ಅನೇಕ ಭಾಗಗಳಲ್ಲಿ ಭಾರಿ ಮಳೆ ಸುರಿಸುತ್ತಿದೆ. ಈಗಾಗಲೇ ನೈಋತ್ಯ ಮುಂಗಾರು ದೇಶದ ಸುಮಾರು ಶೇ 80ರಷ್ಟು ಭಾಗಗಳನ್ನು ಆವರಿಸಿದೆ.

ದೇಶದ ಶೇ 80ರಷ್ಟು ಭೌಗೋಳಿಕ ಪ್ರದೇಶಕ್ಕೆ ವ್ಯಾಪಿಸಿದ ಮುಂಗಾರು: ರಾಜ್ಯದಲ್ಲಿ ಮುಂದುವರಿದ ಮಳೆ ಆರ್ಭಟ
Linkup
ಹೊಸದಿಲ್ಲಿ: ಜೂನ್ 3ರಂದು ಕೇರಳ ಪ್ರವೇಶಿಸಿದ್ದ ನೈಋತ್ಯ , ಕೇವಲ ಹತ್ತು ದಿನಗಳಲ್ಲಿಯೇ ದೇಶದ ಶೇ 80ರಷ್ಟು ಭೌಗೋಳಿಕ ಪ್ರದೇಶವನ್ನು ಆವರಿಸಿದೆ. ಕರ್ನಾಟಕ, ಕೇರಳ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ದೇಶದ ದಕ್ಷಿಣ ಭಾಗಗಳಲ್ಲಿ ಈಗಾಗಲೇ ಅಬ್ಬರಿಸುತ್ತಿರುವ , ರಾಜಧಾನಿ ದಿಲ್ಲಿಯನ್ನು ಪ್ರವೇಶಿಸಲು ಸಜ್ಜಾಗಿದೆ. ಮುಂಗಾರು ದಿಲ್ಲಿಯನ್ನು ಸಮೀಪಿಸಿದ್ದು, ಮುಂದಿನ ಎರಡು ಅಥವಾ ಮೂರು ದಿನಗಳಲ್ಲಿ ಮಳೆಗಾಲ ಆರಂಭವಾಗಲಿದೆ ಎಂದು ಭಾರತೀಯ ಭಾನುವಾರ ತಿಳಿಸಿದೆ. ಉತ್ತರದ ಚಂಡೀಗಡ ಮತ್ತು ದಿಲ್ಲಿಯಲ್ಲಿ ಸಾಮಾನ್ಯವಾಗಿ ಮುಂಗಾರು ಕ್ರಮವಾಗಿ ಜೂನ್ 26 ಹಾಗೂ 27ರ ದಿನಾಂಕಗಳಂದು ಆರಂಭವಾಗುತ್ತಿತ್ತು. ಭಾನುವಾರದ ವೇಳೆಗೆ ಮುಂಗಾರು ಮಾರುತಗಳು ಒಡಿಶಾ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಗಿಲ್ಗಿಟ್-ಬಲ್ಟಿಸ್ತಾನ್ ಮತ್ತು ಮುಜಫ್ಫರಾಬಾದ್‌ಗಳನ್ನು ಸಂಪೂರ್ಣವಾಗಿ ಆವರಿಸಿದೆ. ಹರ್ಯಾಣ, ಚಂಡೀಗಡ ಮತ್ತು ಉತ್ತರ ಪಂಜಾಬ್‌ನ ಹಲವು ಭಾಗಗಳಲ್ಲಿ ಮಳೆ ಆರಂಭವಾಗಿದೆ. ಇದರಿಂದ ದೇಶದ ಶೇ 80ರಷ್ಟು ಭೂಪ್ರದೇಶವನ್ನು ಮುಂಗಾರು ಆವರಿಸಿದಂತಾಗಿದೆ. ಉತ್ತರ ಭಾಗದಲ್ಲಿ ಮುಂಗಾರು ಮಾರುತಗಳು ದಿಯು, ಸೂರತ್, ನಂದುರ್ಬರ್, ಭೋಪಾಲ್, ಹಮೀರ್ಪುರ್, ಬರೇಲಿ, ನೊವಾಂಗ್, ಅಂಬಾಲಾ, ಅಮೃತಸರ ಮತ್ತು ಸಹರಾನ್ಪುರಗಳನ್ನು ಹಾದು ಮುಂದೆ ಸಾಗುತ್ತಿವೆ. ವಾರದ ಮಧ್ಯಭಾಗದಲ್ಲಿ ಮುಂಗಾರು ಉತ್ತರ ಪ್ರದೇಶದ ಪೂರ್ವ ಭಾಗ, , ಹರ್ಯಾಣಗಳನ್ನು ಸಂಪೂರ್ಣವಾಗಿ ಮತ್ತು ಮಧ್ಯಪ್ರದೇಶ ಹಾಗೂ ಪಂಜಾಬಿನ ಉಳಿದ ಭಾಗಗಳನ್ನು ಆವರಿಸುವ ನಿರೀಕ್ಷೆಯಿದೆ. ರಾಜ್ಯದಲ್ಲಿ ಭಾರಿ ಮಳೆಮುಂದಿನ 48 ಗಂಟೆಗಳಲ್ಲಿ ರಾಜಸ್ಥಾನವನ್ನು ಹೊರತುಪಡಿಸಿ ದೇಶದ ಉಳಿದ ಎಲ್ಲ ಭಾಗಗಳನ್ನೂ ಮುಂಗಾರು ಆವರಿಸುವ ನಿರೀಕ್ಷೆಯಿದೆ ಎಂದು ಐಎಂಡಿ ಅಧಿಕಾರಿಗಳು ತಿಳಿಸಿದ್ದಾರೆ. ಕರ್ನಾಟಕದ ಭಾಗಗಳಲ್ಲಿ ಮುಂದಿನ ಐದು ದಿನಗಳವರೆಗೆ ಭಾರಿಯಿಂದ ವಿಪರೀತ ಮಳೆ ಸುರಿಯಲಿದೆ. ಹಾಗೆಯೇ ರಾಜ್ಯದ ದಕ್ಷಿಣ ಒಳನಾಡು ಮತ್ತು ಕೇರಳಗಳಲ್ಲಿ ಮಂಗಳವಾರ ಹಾಗೂ ಬುಧವಾರ ಭಾರಿ ಮಳೆಯಾಗುವ ನಿರೀಕ್ಷೆಯಿದೆ.