ಹೈದರಾಬಾದ್‌: ಹಿಂದೂ ಸೋಂಕಿತನ ಶವಕ್ಕೆ ಸಂಪ್ರದಾಯದಂತೆ ಮುಸ್ಲಿಂ ಸಹೋದರರಿಂದ ಅಂತ್ಯಸಂಸ್ಕಾರ

ಆಸ್ಪತ್ರೆಯವರು ಶವ ತೆಗೆದುಕೊಂಡು ಹೋಗಲು ಮನೆಯವರಿಗೆ ಸೂಚನೆ ನೀಡಿದರು. ಸೋಂಕು ಭೀತಿಯಿಂದ ಆಸ್ಪತ್ರೆಯತ್ತ ತಲೆ ಹಾಕದ ಮನೆಯವರು, ಮೊಗುಲಯ್ಯ ಅವರ ಶವವನ್ನು ಅನಾಥಗೊಳಿಸಿದರು. ​​ಕೊನೆಗೆ ಅದೇ ಗ್ರಾಮದ ಶಫಿ ಮತ್ತು ಅಲಿ ಎಂಬ ಮುಸ್ಲಿಂ ಸೋದರರು ಸೋಂಕು ಪೀಡಿತ ಶವವನ್ನು ಯಾವುದೇ ಹಿಂಜರಿಕೆ ಇಲ್ಲದೇ ಎತ್ತಿ ರುದ್ರಭೂಮಿಗೆ ಸಾಗಿಸಿದರು.

ಹೈದರಾಬಾದ್‌: ಹಿಂದೂ ಸೋಂಕಿತನ ಶವಕ್ಕೆ ಸಂಪ್ರದಾಯದಂತೆ ಮುಸ್ಲಿಂ ಸಹೋದರರಿಂದ ಅಂತ್ಯಸಂಸ್ಕಾರ
Linkup
ಹೈದರಾಬಾದ್‌: ಕೊರೊನಾ ಸೋಂಕಿನಿಂದ ಕೊನೆಯುಸಿರೆಳೆದು ಯಾರಿಗೂ ಬೇಡವಾಗಿದ್ದ ಹಿಂದೂ ವ್ಯಕ್ತಿಯೊಬ್ಬರ ಮೃತದೇಹವನ್ನು ಮುಸ್ಲಿಂ ಯುವಕರಿಬ್ಬರು ರುದ್ರಭೂಮಿಗೆ ಕೊಂಡೊಯ್ದು ಹಿಂದೂ ಸಂಪ್ರದಾಯದ ಪ್ರಕಾರ ಅಂತ್ಯ ಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದ ಪ್ರಕರಣ ತೆಲಂಗಾಣದ ಗ್ರಾಮದಲ್ಲಿನಡೆದಿದೆ. ಪೆದ್ದ ಕೊಡಪ್‌ಗಲ್‌ ಮಂಡಲದ ಕಾಟೇಪಲ್ಲಿಯ ಮೊಗುಲಯ್ಯ ಎಂಬವರು ಭಾಣಸುವಾಡ ಆಸ್ಪತ್ರೆಯಲ್ಲಿ ಅಸು ನೀಗಿದರು. ಆಸ್ಪತ್ರೆಯವರು ಶವ ತೆಗೆದುಕೊಂಡು ಹೋಗಲು ಮನೆಯವರಿಗೆ ಸೂಚನೆ ನೀಡಿದರು. ಸೋಂಕು ಭೀತಿಯಿಂದ ಆಸ್ಪತ್ರೆಯತ್ತ ತಲೆ ಹಾಕದ ಮನೆಯವರು, ಮೊಗುಲಯ್ಯ ಅವರ ಶವವನ್ನು ಅನಾಥಗೊಳಿಸಿದರು. ಕೊನೆಗೆ ಅದೇ ಗ್ರಾಮದ ಶಫಿ ಮತ್ತು ಅಲಿ ಎಂಬ ಮುಸ್ಲಿಂ ಸೋದರರು ಸೋಂಕು ಪೀಡಿತ ಶವವನ್ನು ಯಾವುದೇ ಹಿಂಜರಿಕೆ ಇಲ್ಲದೇ ಎತ್ತಿ ರುದ್ರಭೂಮಿಗೆ ಸಾಗಿಸಿದರು. ಹಿಂದೂ ಸಂಪ್ರದಾಯದ ಪ್ರಕಾರ ಮೊಗುಲಯ್ಯನವರ ಅಂತ್ಯ ಸಂಸ್ಕಾರ ನೆರವೇರಿಸಿ ಊರಿಗೆ ಹಿಂದಿರುಗಿದರು. ಇಷ್ಟಾದರೂ ಮೃತನ ಕುಟುಂಬ ಸದಸ್ಯರು ರುದ್ರಭೂಮಿಗೂ ಭೇಟಿ ನೀಡಲಿಲ್ಲ.