ಬೆಂಗಳೂರು ಸಂಚಾರ ಪೊಲೀಸ್‌ ಜಂಟಿ ಆಯುಕ್ತ ರವಿಕಾಂತೇಗೌಡರ ಮನೆಯಲ್ಲಿ ಕಳ್ಳತನ!

ಸಂಚಾರ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ಬಿ.ಆರ್‌. ರವಿಕಾಂತೇಗೌಡ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಮನೆಯ ಕೆಲಸದಾಕೆಯೇ ಕಳ್ಳತನ ನಡೆಸಿದ್ದಾಳೆ. ಸದ್ಯ ಈ ಸಂಬಂಧ ದೂರು ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರು ಸಂಚಾರ ಪೊಲೀಸ್‌ ಜಂಟಿ ಆಯುಕ್ತ ರವಿಕಾಂತೇಗೌಡರ ಮನೆಯಲ್ಲಿ ಕಳ್ಳತನ!
Linkup
ಬೆಂಗಳೂರು: ಸಂಚಾರ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ಬಿ.ಆರ್‌. ಅವರ ಮನೆಯಲ್ಲಿ ಕೆಲಸಕ್ಕಿದ್ದ ಮಹಿಳೆ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ. ಮಹಿಳೆಯ ಸ್ನೇಹಿತ ಕಳ್ಳತನಕ್ಕೆ ಸಾಥ್‌ ನೀಡಿದ್ದ ಎನ್ನಲಾಗುತ್ತಿದೆ. ಹಾವೇರಿ ಮೂಲದ ಅಕ್ಷತಾ ಎಂಬಾಕೆ ಹಲವು ವರ್ಷಗಳಿಂದ ಸಂಜಯನಗರದಲ್ಲಿರುವ ರವಿಕಾಂತೇಗೌಡ ಅವರ ಮನೆಯಲ್ಲಿ ಮನೆ ಕೆಲಸ ಮಾಡಿಕೊಂಡಿದ್ದಳು. ಆಕೆಯ ಮೇಲೆ ನಂಬಿಕೆ ಇಟ್ಟಿದ್ದ ಮನೆಯ ಸದಸ್ಯರು ಪೂರ್ಣ ಸ್ವಾತಂತ್ರ ನೀಡಿದ್ದರು. ಬೆಲೆಬಾಳುವ ವಸ್ತುಗಳು ಎಲ್ಲೆಲ್ಲಿವೆ ಎಂಬುದರ ಬಗ್ಗೆ ಆಕೆಗೆ ತಿಳಿದಿತ್ತು. ಸ್ನೇಹಿತನ ಸಂಚಿನಂತೆ ಅಕ್ಷತಾ ಬೆಲೆಬಾಳುವ ಕೆಲವು ವಸ್ತುಗಳ ಜತೆ ಮಂಗಳವಾರ ಪರಾರಿಯಾಗಿದ್ದಾಳೆ ಎಂದು ತಿಳಿದು ಬಂದಿದೆ. ಈ ಸಂಬಂಧ ಸಂಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಲಸದಾಕೆಯ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಮಹಿಳೆಯ ಕಾಯಂ ವಿಳಾಸ ಹಾಗೂ ಅವರ ಸಂಬಂಧಿಕರ ಮಾಹಿತಿ ಕಲೆ ಹಾಕಲಾಗಿದೆ. ಮಹಿಳೆ ಇರುವ ಜಾಗವನ್ನು ಪತ್ತೆ ಮಾಡಲಾಗಿದ್ದು, ಅವರನ್ನು ನಗರಕ್ಕೆ ಕರೆತಂದು ಹೇಳಿಕೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.