ಮೂರು ಕಡೆ 3 ಮದುವೆ, ₹1.3 ಕೋಟಿ ಮೋಸ! ಇದು ಕುಂದಾಪುರದ ವಂಚಕ ರಾಘವೇಂದ್ರನ ಅವತಾರ!

ಸರ್ವೆ ಇಲಾಖೆಯ ಡೆಪ್ಯುಟಿ ಕಮಿಷನರ್‌ ಎಂದು ನಕಲಿ ಗುರುತಿನ ಚೀಟಿ ಮಾಡಿಕೊಂಡು ತನ್ನ ಕಾರಿಗೆ ಭಾರತ ಸರಕಾರದ ಬೋರ್ಡ್‌ ಅಳವಡಿಸಿಕೊಂಡಿದ್ದ ಆರೊಪಿಯು, ಸರ್ವೆ ಇಲಾಖೆ ಮತ್ತು ಇನ್ನಿತರೆ ಸರಕಾರಿ ಇಲಾಖೆಗಳಲ್ಲಿ ಕೆಲಸ ಕೊಡಿಸುವುದಾಗಿ ಒಬ್ಬೊಬ್ಬರಿಂದ ತಲಾ 8-10 ಲಕ್ಷ ರೂ. ಪಡೆದು, ಕೆಲಸವನ್ನೂ ಕೊಡದೇ ಹಣವನ್ನೂ ಹಿಂತಿರುಗಿಸದೇ ವಂಚಿಸುತ್ತಿದ್ದ. ಆರೋಪಿಯಿಂದ ವಂಚನೆಗೊಳಗಾದ ವ್ಯಕ್ತಿಯೊಬ್ಬರು ಈ ಬಗ್ಗೆ ಬನಶಂಕರಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಮೂರು ಕಡೆ 3 ಮದುವೆ, ₹1.3 ಕೋಟಿ ಮೋಸ! ಇದು ಕುಂದಾಪುರದ ವಂಚಕ ರಾಘವೇಂದ್ರನ ಅವತಾರ!
Linkup
ಬೆಂಗಳೂರು: ಕೇಂದ್ರ ಸರಕಾರದ ಸರ್ವೆ ಇಲಾಖೆಯಲ್ಲಿ ಉನ್ನತ ಅಧಿಕಾರಿ ಎಂದು ನಂಬಿಸಿ ಸರಕಾರಿ ಕೆಲಸ ಕೊಡಿಸುವುದಾಗಿ 15ಕ್ಕೂ ಹೆಚ್ಚು ಜನರಿಂದ 1.3 ಕೋಟಿ ರೂ. ಪಡೆದು ವಂಚಿಸಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಬಸ್ರೂರು ಮೂಲದ ಜೆಪಿ ನಗರದ ನಿವಾಸಿ ರಾಘವ ಅಲಿಯಾಸ್‌ ರಾಘವೇಂದ್ರ (39) ಬಂಧಿತ. ಆರೋಪಿಯಿಂದ 1 ದ್ವಿಚಕ್ರ ವಾಹನ, ಮೊಬೈಲ್‌, ಟ್ಯಾಬ್ಸ್‌, ಲ್ಯಾಪ್‌ಟಾಪ್‌ಗಳು, ಚೆಕ್‌ಗಳು, ಬಾಂಡ್‌ ಪೇಪರ್‌ಗಳು, ಆತ ಖರೀದಿಸಿದ್ದ ಆಸ್ತಿಯ ದಾಖಲಾತಿಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು. ಆರೋಪಿಯ ಬಂಧನದಿಂದ ಆತನ ವಿರುದ್ಧ ಈಗಾಗಲೇ ಜೆ.ಪಿ.ನಗರ, ಯಶವಂತಪುರ, ಬನವಾಸಿ ಪೊಲೀಸ್‌ ಠಾಣೆ ಹಾಗೂ ಇನ್ನಿತರ ಜಿಲ್ಲೆಗಳಲ್ಲಿಯೂ ಸಹ ದಾಖಲಾಗಿರುವ ಪ್ರಕರಣ ಬೆಳಕಿಗೆ ಬಂದಿವೆ. ಆರೋಪಿ ರಾಘವೇಂದ್ರ ಕಳೆದ ಐದಾರು ವರ್ಷಗಳಿಂದ ಬೆಂಗಳೂರಿನಲ್ಲಿದ್ದು, ಸರ್ವೆ ಇಲಾಖೆಯ ಡೆಪ್ಯುಟಿ ಕಮಿಷನರ್‌ ಎಂದು ನಕಲಿ ಗುರುತಿನ ಚೀಟಿ ಮಾಡಿಕೊಂಡು ತನ್ನ ಕಾರಿಗೆ ಭಾರತ ಸರಕಾರದ ಬೋರ್ಡ್‌ ಅಳವಡಿಸಿಕೊಂಡಿದ್ದ. ಸರ್ವೆ ಇಲಾಖೆ ಮತ್ತು ಇನ್ನಿತರೆ ಸರಕಾರಿ ಇಲಾಖೆಗಳಲ್ಲಿ ಕೆಲಸ ಕೊಡಿಸುವುದಾಗಿ ಒಬ್ಬೊಬ್ಬರಿಂದ ತಲಾ 8-10 ಲಕ್ಷ ರೂ. ಪಡೆದು, ಕೆಲಸವನ್ನೂ ಕೊಡದೇ ಹಣವನ್ನೂ ಹಿಂತಿರುಗಿಸದೇ ವಂಚಿಸುತ್ತಿದ್ದ. ಆರೋಪಿಯಿಂದ ವಂಚನೆಗೊಳಗಾದ ವ್ಯಕ್ತಿಯೊಬ್ಬರು ಈ ಬಗ್ಗೆ ಬನಶಂಕರಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಹೆಚ್ಚಿನ ತನಿಖೆಗಾಗಿ ಈ ಪ್ರಕರಣವನ್ನು ಸಿಸಿಬಿ ಪೊಲೀಸರಿಗೆ ವರ್ಗಾವಣೆ ಮಾಡಲಾಗಿತ್ತು. ಸಿಸಿಬಿ ಎಸಿಪಿ ಧರ್ಮೇಂದ್ರ ನೇತೃತ್ವದ ತಂಡ ರಾಘವೇಂದ್ರನನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಿದಾಗ ತಾನು ಮೋಸ ಮಾಡಿ ಗಳಿಸಿದ ಹಣದಲ್ಲಿ ಸ್ವಂತ ಊರಿನಲ್ಲಿ ವಾಸದ ಮನೆ, ತುಮಕೂರಿನಲ್ಲಿ ಹೋಟೆಲ್‌, ಕೆಂಗೇರಿಯಲ್ಲಿ ಫ್ಲ್ಯಾಟ್‌, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, 2 ಕಾರುಗಳನ್ನು ಖರೀದಿಸಿರುವುದಾಗಿ ತಿಳಿಸಿದ್ದಾನೆ. 15ಕ್ಕೂ ಹೆಚ್ಚು ಮಂದಿಗೆ ವಂಚನೆ:ಆರೋಪಿ ಬಾಗಲಕೋಟೆ, ಬೆಳಗಾವಿ ಹಾವೇರಿ, ಶಿವಮೊಗ್ಗ ಮೂಲದ 15ಕ್ಕೂ ಅಧಿಕ ಮಂದಿಯಿಂದ ಒಟ್ಟು 1.3 ಕೋಟಿ ರೂ. ಪಡೆದಿರುವುದು ಕಂಡು ಬಂದಿದೆ. 10 ವರ್ಷಗಳ ಹಿಂದೆ ಕುಂದಾಪುರದಲ್ಲಿ ಖಾಸಗಿಯಾಗಿ ಸರ್ವೆ ಕೆಲಸ ಮಾಡಿಕೊಂಡಿದ್ದ ಆತ, ಆ ಬಳಿಕ ಹೆಚ್ಚಿನ ಹಣಕ್ಕಾಗಿ ಸಂಚು ರೂಪಿಸಿ ನಕಲಿ ಸರಕಾರಿ ಅಧಿಕಾರಿ ಸೋಗಿನಲ್ಲಿ ವಂಚನೆಗೆ ಇಳಿದಿದ್ದ. ಕೆಲಸ ಕೊಡಿಸುವುದಾಗಿ ಬಾಂಡ್‌ ಪೇಪರ್‌ಗಳು ಹಾಗೂ ಖಾಲಿ ಚೆಕ್‌ ಮೇಲೆ ಸಹಿ ಹಾಕಿಸಿಕೊಳ್ಳುತ್ತಿದ್ದ. ಕೆಲಸ ಸಿಗದೆ ವಂಚನೆಗೊಳಗಾದವರು ವಾಪಸ್‌ ಹಣ ಕೇಳಿದರೆ ಬೆದರಿಸುತ್ತಿದ್ದ. ಹಣ ಪಡೆದ ಬಳಿಕ ಅವರ ವಿರುದ್ಧವೇ ಕೋರ್ಟ್‌ನಲ್ಲಿ ಚೆಕ್‌ ಬೌನ್ಸ್‌ ಕೇಸ್‌ ಹಾಕುತ್ತಿದ್ದ. ಜೆಪಿನಗರದಲ್ಲಿ ರಾಘವೇಂದ್ರ ಎಂಟರ್‌ ಪ್ರೈಸಸ್‌ ಅಂಗಡಿ ಇಟ್ಟುಕೊಂಡಿದ್ದ. ಖಾಸಗಿಯಾಗಿ ಸರ್ವೆ ಮಾಡಿಕೊಡುತ್ತಿದ್ದ. ಅಲ್ಲಿಗೆ ಸಂಪರ್ಕಕ್ಕೆ ಬರುವ ವ್ಯಕ್ತಿಗಳ ಬಳಿ ಸರ್ವೆ ಇಲಾಖೆಯ ಡೆಪ್ಯುಟಿ ಕಮಿಷನರ್‌ ಎಂದು ನಂಬಿಸುತ್ತಿದ್ದ. 3 ಮದುವೆ ವಿಷಯ ಬಹಿರಂಗ:ಆರೋಪಿಯು ದಾವಣಗೆರೆ, ಬಾಗಲಕೋಟೆ ಹಾಗೂ ಬೆಂಗಳೂರಿನ ಮೂವರನ್ನು ವಿವಾಹವಾಗಿದ್ದಾನೆ. ಆದರೆ, ಈತ ಬಂಧನಕ್ಕೆ ಒಳಗಾದಾಗಲೇ 3 ಮದುವೆಯಾದ ಸಂಗತಿ ಈತನ ಪತ್ನಿಯರ ವಿಚಾರ ಗಮನಕ್ಕೆ ಬಂದಿದೆ. ಇನ್ನು ಟ್ರೂ ಕಾಲರ್‌ನಲ್ಲಿ ರಾಘವೇಂದ್ರನ ಮೊಬೈಲ್‌ ನಂಬರ್‌ ಪರಿಶೀಲಿಸಿದರೆ ರೆವೆನ್ಯೂ ಕಮಿಷನರ್‌, ಡೆಪ್ಯುಟಿ ಕಮಿಷನರ್‌ ಎಂದು ತೋರಿಸುತ್ತದೆ. ಈ ರೀತಿ ಬರುವಂತೆ ಆರೋಪಿಯೇ ಮಾಡಿಸಿಕೊಂಡಿದ್ದ.