ಮನೆ ಬಾಗಿಲಿಗೆ ಕೋವಿಡ್‌ ಲಸಿಕೆ ಭಾಗ್ಯ; ಬಿಬಿಎಂಪಿ ಆರೋಗ್ಯ ಸಿಬ್ಬಂದಿಗಳಿಂದ ಅಭೂತಪೂರ್ವ ಕಾರ್ಯ!

ಓಮಿಕ್ರಾನ್‌ ಸೋಂಕಿನ ಹಿನ್ನೆಲೆಯಲ್ಲಿ ಪಾಲಿಕೆಯು ಲಸಿಕಾ ಪ್ರಕ್ರಿಯೆಯನ್ನು ಚುರುಕುಗೊಳಿಸಿದೆ. ಮಾಲ್‌ಗಳು, ಚಿತ್ರಮಂದಿರಗಳು, ಮಾರುಕಟ್ಟೆಗಳು, ಅಂಗಡಿ-ಮುಂಗಟ್ಟುಗಳ ಬಳಿಯೇ ಲಸಿಕೆ ಹಾಕಲಾಗುತ್ತಿದೆ. ಮನೆ ಬಾಗಿಲಲ್ಲೇ ಲಸಿಕೆ ನೀಡುವ ಕಾರ್ಯಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗುತ್ತಿದೆ.

ಮನೆ ಬಾಗಿಲಿಗೆ ಕೋವಿಡ್‌ ಲಸಿಕೆ ಭಾಗ್ಯ; ಬಿಬಿಎಂಪಿ ಆರೋಗ್ಯ ಸಿಬ್ಬಂದಿಗಳಿಂದ ಅಭೂತಪೂರ್ವ ಕಾರ್ಯ!
Linkup
ನಾಗಪ್ಪ ನಾಗನಾಯಕನಹಳ್ಳಿ, ಬೆಂಗಳೂರು ಬೆಂಗಳೂರು: ಕೋವಿಡ್‌ನ ರೂಪಾಂತರಿ '' ಸೋಂಕು ನಗರದಲ್ಲಿ ಕಾಣಿಸಿಕೊಂಡ ಬೆನ್ನಲ್ಲೇ ಲಸಿಕೆ ಪಡೆಯುವವರ ಸಂಖ್ಯೆ ದುಪ್ಪಟ್ಟಾಗಿದೆ. ಕೂಡ ಸೋಂಕು ನಿಯಂತ್ರಣದ ಉದ್ದೇಶದಿಂದ ಜನರ ಮನೆ ಬಾಗಿಲಲ್ಲೇ ಲಸಿಕೆ ನೀಡಲಾರಂಭಿಸಿದೆ. ರಾಜಧಾನಿಯಲ್ಲಿ ಎರಡು ಓಮ್ರಿಕಾನ್‌ ಪ್ರಕರಣಗಳು ಪತ್ತೆಯಾಗಿರುವುದು ಜನರಲ್ಲಿ ದಿಗಿಲು ಹುಟ್ಟಿಸಿದೆ. ಹೀಗಾಗಿಯೇ, ಇಲ್ಲಿಯವರೆಗೆ ಲಸಿಕೆ ಪಡೆಯಲು ಒಲವು ತೋರದಿದ್ದವರೆಲ್ಲರೂ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಲಸಿಕಾ ಶಿಬಿರಗಳಿಗೆ ಧಾಂಗುಡಿ ಇಡುತ್ತಿದ್ದಾರೆ. ಪರಿಣಾಮ, ಇದುವರೆಗೆ ಒಂದೂ ಡೋಸ್‌ ಪಡೆಯದವರು ಹಾಗೂ ಅವಧಿ ಮುಗಿದರೂ ಎರಡನೇ ಡೋಸ್‌ ಪಡೆಯದಿದ್ದವರು ಲಸಿಕೆ ಪಡೆಯಲು ಮುಂದಾಗಿದ್ದಾರೆ. ಇದರಿಂದ ವ್ಯಾಕ್ಸಿನೇಷನ್‌ ಪ್ರಮಾಣ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಓಮಿಕ್ರಾನ್‌ ಸೋಂಕಿನ ಹಿನ್ನೆಲೆಯಲ್ಲಿ ಪಾಲಿಕೆಯು ಲಸಿಕಾ ಪ್ರಕ್ರಿಯೆಯನ್ನು ಚುರುಕುಗೊಳಿಸಿದೆ. ಮಾಲ್‌ಗಳು, ಚಿತ್ರಮಂದಿರಗಳು, ಮಾರುಕಟ್ಟೆಗಳು, ಅಂಗಡಿ-ಮುಂಗಟ್ಟುಗಳ ಬಳಿಯೇ ಲಸಿಕೆ ಹಾಕಲಾಗುತ್ತಿದೆ. ಮನೆ ಬಾಗಿಲಲ್ಲೇ ಲಸಿಕೆ ನೀಡುವ ಕಾರ್ಯಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗುತ್ತಿದೆ. ಈಗಾಗಲೇ ಕೇರ್‌ ಇಂಡಿಯಾ ಸಹಯೋಗದಲ್ಲಿ ಮನೆ ಮನೆಗೆ ತೆರಳಿ ಲಸಿಕೆ ನೀಡುವ ಸಲುವಾಗಿ 80 ದ್ವಿಚಕ್ರ ಹಾಗೂ 16 ಮೊಬೈಲ್‌ ಲಸಿಕಾ ವಾಹನಗಳಿಗೆ ಚಾಲನೆ ನೀಡಲಾಗಿದೆ. ಬ್ಲಾಕ್‌ ಮತ್ತು ಲೇನ್‌ ಮಟ್ಟದಲ್ಲಿ ಲಸಿಕೆ ನೀಡುತ್ತಿದ್ದ ಆರೋಗ್ಯ ಸಿಬ್ಬಂದಿಯು ಇದೀಗ ಮನೆ ಮನೆಗೆ ತೆರಳಿ ಲಸಿಕೆ ವಿತರಣೆ ಮಾಡುತ್ತಿದ್ದಾರೆ. ಅವಧಿ ಮುಗಿದರೂ ಎರಡನೇ ಡೋಸ್‌ ಲಸಿಕೆ ಪಡೆಯದಿರುವವರ ಪಟ್ಟಿಯನ್ನು ಪಾಲಿಕೆಯು ಕೋವಿನ್‌ ಪೋರ್ಟಲ್‌ನಿಂದ ಪಡೆದುಕೊಂಡಿದೆ. ವಲಯವಾರು ನಿಯಂತ್ರಣಾ ಕೊಠಡಿಗಳಿಗೆ ನಿಯೋಜಿಸಲ್ಪಟ್ಟ ಡಾಟಾ ಎಂಟ್ರಿ ಆಪರೇಟರ್‌ಗಳು ಎರಡನೇ ಡೋಸ್‌ ಪಡೆಯದವರಿಗೆ ಕರೆ ಮಾಡಿ ಲಸಿಕೆ ಪಡೆಯುವಂತೆ ಮನವೊಲಿಸುತ್ತಿದ್ದಾರೆ. ಲಸಿಕೆಗಾಗಿ ಕರೆ ಮಾಡುವವರ ಮನೆ ಬಾಗಿಲಿಗೆ ಆರೋಗ್ಯ ಸಿಬ್ಬಂದಿಯ ತಂಡವನ್ನು ಕಳುಹಿಸಿಕೊಡಲಾಗುತ್ತಿದೆ. ಈ ತಂಡಗಳು ವ್ಯಾಪ್ತಿಯ ಪ್ರತಿಯೊಂದು ವಾರ್ಡ್‌ನಲ್ಲಿನ ಮನೆಗಳಿಗೆ ಭೇಟಿ ಕೊಟ್ಟು, ಲಸಿಕೆಯ ಮಾಹಿತಿ ಕಲೆ ಹಾಕುತ್ತಿದೆ. ಆನಂತರ ಲಸಿಕೆ ಪಡೆಯದವರಿಗೆ ಲಸಿಕೆ ಹಾಕಲಾಗುತ್ತಿದೆ. ಲಸಿಕೆಗೆ ಅರ್ಹರಿರುವವರ ಸಂಖ್ಯೆ 91.70 ಲಕ್ಷ ಬೆಂಗಳೂರಿನಲ್ಲಿ ಪಡೆಯಲು ಅರ್ಹರಿರುವ 91.70 ಲಕ್ಷ ಮಂದಿಯನ್ನು (18 ವರ್ಷ ಮೇಲ್ಪಟ್ಟವರು) ಗುರುತಿಸಲಾಗಿದೆ. ಈ ಪೈಕಿ 81,91,298 ಮಂದಿ ಮೊದಲ ಡೋಸ್‌ ಲಸಿಕೆ ಪಡೆದುಕೊಂಡಿದ್ದಾರೆ. ಮೊದಲ ಡೋಸ್‌ ಪಡೆಯಲು ಬಾಕಿ ಇರುವವರ ಸಂಖ್ಯೆ ಕೇವಲ 9,78,702 ಮಾತ್ರ. ಇಲ್ಲಿಯವರೆಗೆ 1,44,30,725 ಮಂದಿಗೆ ಎರಡೂ ಡೋಸ್‌ ಲಸಿಕೆ ನೀಡಲಾಗಿದೆ. 62,39,427 ಮಂದಿ ಎರಡನೇ ಡೋಸ್‌ ಲಸಿಕೆ ಹಾಕಿಸಿಕೊಂಡಿದ್ದಾರೆ. ಯಲಹಂಕದ ಡಾ. ಬಿ.ಆರ್‌.ಅಂಬೇಡ್ಕರ್‌ ಭವನ, ಮಲ್ಲೇಶ್ವರದ ಯಂಗ್‌ಸ್ಟರ್ಸ್‌ ಕಬಡ್ಡಿ ಮೈದಾನದಲ್ಲಿ ಬೃಹತ್‌ ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ವಾಕ್‌ ಇನ್‌ ಮತ್ತು ಡ್ರೈವ್‌ ಇನ್‌ ಮೂಲಕ ವಾಹನಗಳಲ್ಲೇ ಕುಳಿತು ಲಸಿಕೆ ಪಡೆಯುವ ವ್ಯವಸ್ಥೆ ಮಾಡಲಾಗಿದೆ. ಓಮಿಕ್ರಾನ್‌ ಸೋಂಕಿನ ಭೀತಿಯಲ್ಲಿ ಲಸಿಕಾ ಕೇಂದ್ರಗಳಿಗೆ ಭೇಟಿ ನೀಡುವವರ ಸಂಖ್ಯೆ ಜಾಸ್ತಿಯಾಗಿದೆ. ಈ ಮೊದಲು ನಿತ್ಯ 35-40 ಸಾವಿರ ಮಂದಿ ಮಾತ್ರ ಲಸಿಕೆ ಪಡೆದುಕೊಳ್ಳುತ್ತಿದ್ದರು. ಈಗ ಆ ಸಂಖ್ಯೆ 80 ಸಾವಿರ ದಾಟಿದೆ. 439 ತಂಡಗಳ ನಿಯೋಜನೆ ಸಾರ್ವಜನಿಕರ ಮನೆ ಬಾಗಿಲಿಗೆ ತೆರಳಿ ಲಸಿಕೆ ನೀಡುವ ಸಲುವಾಗಿಯೇ ಪಾಲಿಕೆಯು 439 ತಂಡಗಳನ್ನು ನಿಯೋಜಿಸಿದೆ. ಈ ತಂಡಗಳು ಈವರೆಗೆ 72,643 ಮಂದಿಗೆ ಒಂದನೇ ಡೋಸ್‌ ಹಾಗೂ 1,54,021 ಮಂದಿಗೆ ಎರಡನೇ ಡೋಸ್‌ ಲಸಿಕೆ ನೀಡಿದ್ದಾರೆ. ಡಾಟಾ ಎಂಟ್ರಿ ಆಪರೇಟರ್‌ ಹಾಗೂ ಶುಶ್ರೂಷಕರು ಅಥವಾ ಎಎನ್‌ಎಂ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಲಸಿಕೆ ಹಾಕುತ್ತಿದ್ದಾರೆ. ಲಸಿಕೆ ವಿತರಣೆಯಲ್ಲಿ ಪಾಲಿಕೆಯ ಎಂಟು ವಲಯಗಳ ಪೈಕಿ ಯಲಹಂಕ ಮುಂಚೂಣಿಯಲ್ಲಿದೆ. ಯಲಹಂಕದ ಡಾ. ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ನಿತ್ಯ 500-600 ಮಂದಿ ಲಸಿಕೆ ಪಡೆದುಕೊಳ್ಳುತ್ತಿದ್ದಾರೆ. ಸುತ್ತಮುತ್ತಲ ತಾಲೂಕುಗಳಿಂದಲೂ ಲಸಿಕೆಗಾಗಿ ಇಲ್ಲಿಗೆ ಆಗಮಿಸುತ್ತಿದ್ದಾರೆ. ಈ ವಲಯದಲ್ಲಿ ನಿತ್ಯ 5 ಸಾವಿರ ಮಂದಿಗೆ ಲಸಿಕೆ ವಿತರಿಸಲಾಗುತ್ತಿದೆ. ''ಓಮಿಕ್ರಾನ್‌ ಪತ್ತೆಯಾದ ನಂತರ ಸೋಂಕು ಹರಡುವುದನ್ನು ತಡೆಯಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಲಸಿಕಾಕರಣ ಕಾರ್ಯಕ್ರಮವನ್ನು ಚುರುಕುಗೊಳಿಸಿದ್ದು, ತಂಡಗಳನ್ನು ಮನೆ ಮನೆಗೆ ಕಳುಹಿಸಿ ಲಸಿಕೆ ಹಾಕಲಾಗುತ್ತಿದೆ. ಇದಕ್ಕಾಗಿ 439 ತಂಡಗಳನ್ನು ನಿಯೋಜಿಸಲಾಗಿದೆ. ದಿನಕ್ಕೆ ಒಂದು ಲಕ್ಷ ಮಂದಿಗೆ ಲಸಿಕೆ ನೀಡುವ ಗುರಿ ನೀಡಲಾಗಿದೆ,''. ಡಾ. ತ್ರಿಲೋಕ್‌ಚಂದ್ರ, ವಿಶೇಷ ಆಯುಕ್ತ (ಆರೋಗ್ಯ), ಬಿಬಿಎಂಪಿ
  • ಲಸಿಕೆ ಪಡೆದವರ ಒಟ್ಟು ಸಂಖ್ಯೆ 1,44,30,725
  • ಒಂದನೇ ಡೋಸ್‌ ಪಡೆದಿರುವವರು 81,91,298
  • ಎರಡನೇ ಡೋಸ್‌ ಪಡೆದಿರುವವರು 62,39,427
  • 18-44 ವರ್ಷ 97,30147
  • 45-60 ವರ್ಷ 29,87,438
  • 60 ವರ್ಷ ಮೇಲ್ಪಟ್ಟವರು 17,13,140
ಲಸಿಕೆ ವಿತರಣೆ ವಿವರ ದಿನಾಂಕ- ಲಸಿಕೆ ಪಡೆದವರ ಸಂಖ್ಯೆ
  • ನ. 25 -32,081
  • ನ. 26- 32,151
  • ನ. 27 -48,302
  • ನ. 28- 39,281
  • ನ. 29- 58,014
  • ನ. 30- 68,145
  • ಡಿ. 1- 77,445
  • ಡಿ. 2- 61,823
  • ಡಿ. 3 -64,458
  • ಡಿ. 4 -89,959
  • ಡಿ. 5 -42,734
  • ಡಿ. 6- 81,496