ರಾತ್ರಿ ವೇಳೆ ಜಾಲಿ ರೈಡ್‌ಗಿಲ್ಲ ಕಡಿವಾಣ: ಬೆಂಗಳೂರಲ್ಲಿ ಮತ್ತೊಂದು ಪ್ರಕರಣ!

ರಾತ್ರಿ ವೇಳೆ ಸಿರಿವಂತರ ಮಕ್ಕಳ ಜಾಲಿರೈಡ್‌ಗೆ ಇನ್ನೂ ಕಡಿವಾಣ ಬಿದ್ದಿಲ್ಲ. ಶುಕ್ರವಾರ ರಾತ್ರಿ ಯುವಕ ಹಾಗೂ ಯುವತಿಯರು ಮರ್ಸಿಡೀಸ್‌ ಬೆಂಝ್‌ ಕಾರಿನಲ್ಲಿ ಜಾಲಿ ರೈಡ್‌ ಮಾಡಿದ ಮತ್ತೊಂದು ಪ್ರಕರಣ ಸದಾಶಿವನಗರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.

ರಾತ್ರಿ ವೇಳೆ ಜಾಲಿ ರೈಡ್‌ಗಿಲ್ಲ ಕಡಿವಾಣ: ಬೆಂಗಳೂರಲ್ಲಿ ಮತ್ತೊಂದು ಪ್ರಕರಣ!
Linkup
ಬೆಂಗಳೂರು: ನಗರದಲ್ಲಿ ರಾತ್ರಿ ವೇಳೆ ಸಿರಿವಂತರ ಮಕ್ಕಳ ಜಾಲಿರೈಡ್‌ಗೆ ಇನ್ನೂ ಕಡಿವಾಣ ಬಿದ್ದಿಲ್ಲ. ಶುಕ್ರವಾರ ರಾತ್ರಿ ಯುವಕ ಹಾಗೂ ಯುವತಿಯರು ಮರ್ಸಿಡೀಸ್‌ ಬೆಂಝ್‌ ಕಾರಿನಲ್ಲಿ ಮಾಡಿದ ಮತ್ತೊಂದು ಪ್ರಕರಣ ಸದಾಶಿವನಗರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಜಾಲಿ ರೈಡ್‌ಗೆ ಬಳಸಿದ್ದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯುವಕ, ಯುವತಿಯರು ಇದ್ದ ಕಾರಿನಲ್ಲಿ ಜೋರಾಗಿ ರಾಕ್‌ ಮ್ಯೂಸಿಕ್‌ ಹಾಕಲಾಗಿತ್ತು. ಕಾರಿನಲ್ಲಿದ್ದವರು ಸನ್‌ರೂಫ್‌ ತೆಗೆದು ಡ್ಯಾನ್ಸ್‌ ಮಾಡುತ್ತಾ ಸದಾಶಿವನಗರದ ಹಧಿಲವು ಭಾಗಗಳಲ್ಲಿ ಸುತ್ತಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತುರ್ತು ಅಗತ್ಯ ಸೇವೆ ಫಲಕ: ಜಾಲಿರೈಡ್‌ಗೆ ಬಳಸಿದ ಕಾರಿನಲ್ಲಿ ತುರ್ತು ಅಗತ್ಯ ಸೇವೆ ಫಲಕ ಹಾಕಲಾಗಿತ್ತು. ಕಾರಿನ ಹಿಂಭಾಗ ಸೋಹಮ್‌ ರಿನೀವಬಲ್‌ ಎನರ್ಜಿ ಪ್ರೈ.ಲಿ. ಎಂಬ ನಾಮಫಲಕ ಹಾಕಲಾಗಿತ್ತು. ಇದರಿಂದ ಕಾರಿನಲ್ಲಿದ್ದವರು ಕಂಪನಿಯ ಉದ್ಯೋಗಿಗಳಾಗಿರಬಹುದು ಎನ್ನಲಾಗಿದೆ. ನೈಟ್‌ ಕರ್ಫ್ಯೂ ಉಲ್ಲಂಘನೆ : ನೈಟ್‌ ಕರ್ಫ್ಯೂ ಉಲ್ಲಂಘಿಘಿಸಿ ಸಂಚಾರ ಮಾಡಿರುವ ಕಾರಣ ಎನ್‌ಡಿಎಂಎ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡು ಕಾರು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದರು. ಪೊಲೀಸರ ವೈಫಲ್ಯ ? ಕೋರಮಂಗಲ ಪ್ರಕರಣದ ಬಳಿಕ ರಾತ್ರಿ ವೇಳೆ ಜಾಲಿರೈಡ್‌ಗೆ ಕಡಿವಾಣ ಹಾಕಲಾಗುವುದು ಎಂದು ನಗರ ಆಯುಕ್ತ ಕಮಲ್‌ ಪಂತ್‌ ಹೇಳಿದ್ದರು. ಸದಾಶಿವನಗರದ ಪ್ರಕರಣದಿಂದ ಇಂತಹ ಘಟನೆಗಳಿಗೆ ಕಡಿವಾಣ ಬಿದ್ದಿಲ್ಲ ಎಂಬುದು ಸ್ಪಷ್ಟವಾಗಿದೆ. ನೈಟ್‌ಕರ್ಫ್ಯೂ ಇದ್ದರೂ ಜಾಲಿರೈಡ್‌ ಮಾಡಿದ್ದಾರೆ. ಇದು ಪೊಲೀಸ್‌ ವ್ಯವಸ್ಥೆಯ ವೈಫಲ್ಯ ಎಂದು ಸಾರ್ವಜನಿಕರು ಟೀಕಿಸಿದ್ದಾರೆ. ಪ್ರಭಾವ ಬಳಸಿ ಪಾರು ರಾಜಕಾರಣಿಗಳು, ಉದ್ಯಮಿಗಳ ಮಕ್ಕಳು ವಾರಾಂತ್ಯದಲ್ಲಿ ಗೆಳೆಯರ ತಂಡ ಕಟ್ಟಿಕೊಂಡು ಜಾಲಿ ರೈಡ್‌ ಮಾಡುವುದು ಸಾಮಾನ್ಯವಾಗಿದೆ. ರಾತ್ರಿ 11 ಗಂಟೆ ರಸ್ತೆಗಳು ಬಹುತೇಕ ಖಾಲಿ ಇರುವುದರಿಂದ ಜಾಲಿರೈಡ್‌ ಹುಚ್ಚಾಟ ಶುರುವಾಗುತ್ತದೆ. ಪೊಲೀಸರ ಕೈಗೆ ಸಿಕ್ಕಿಬಿದ್ದರೂ ಪ್ರಭಾವ ಬಳಸಿ, ಇಲ್ಲವೇ ಹಣ ಕೊಟ್ಟು ಬಚಾವಾಗುತ್ತಾರೆ. ಕೆಲವೇ ಪ್ರಕರಣಗಳು ಮಾತ್ರ ಬಯಲಿಗೆ ಬರುತ್ತಿವೆ. ಕೆಲವರು ಮದ್ಯಪಾನ, ಡ್ರಗ್ಸ್‌ ನಶೆಯಲ್ಲೂಇರುತ್ತಾರೆ. ಇದರಿಂದ ಅಮಾಯಕರ ಜೀವಗಳು ಬಲಿಯಾಗುವ ಆತಂಕವಿದೆ. ಹಿಂದಿನ ಘಟನೆಗಳು 2021ರ ಆ.31ರಂದು ಹೊಸೂರು ಶಾಸಕ ಪ್ರಕಾಶ್‌ ಅವರ ಪುತ್ರ ಕರುಣಾಕರ ಹಾಗೂ ಆತನ ಪ್ರೇಯಸಿ ಸ್ನೇಹಿತರೊಂದಿಗೆ ಆಡಿ ಕ್ಯೂ-3 ಕಾರಿನಲ್ಲಿ ಜಾಲಿರೈಡ್‌ ತೆರಳಿದ್ದಾಗ ಕೋರಮಂಗಲ ಬಳಿ ಕಾರು ಅಪಘಾತಕ್ಕೀಡಾಗಿತ್ತು. ಆರು ಮಂದಿ ಮೃತಪಟ್ಟಿದ್ದರು.