1,500 ಕೋಟಿ ರೂ. ಮೊತ್ತದ ವೆಂಚರ್‌ ಕ್ಯಾಪಿಟಲ್‌ ಫಂಡ್‌ ಸ್ಥಾಪನೆಗೆ ಮುಂದಾದ ಹರ್ಷ ಮೊಯಿಲಿ

ಕಾಂಗ್ರೆಸ್‌ನ ಹಿರಿಯ ನಾಯಕ ಎಂ ವೀರಪ್ಪ ಮೊಯಿಲಿ ಅವರ ಪುತ್ರ ಹರ್ಷ ಮೊಯಿಲಿ ಅಂದಾಜು 200 ದಶಲಕ್ಷ ಡಾಲರ್‌ ಮೌಲ್ಯದ ಕ್ಲೈಮೇಟ್‌ ಟೆಕ್‌ ವೆಂಚರ್‌ ಕ್ಯಾಪಿಟಲ್‌ ಫಂಡ್‌ ಸ್ಥಾಪಿಸಲು ಸಿದ್ಧತೆ ನಡೆಸುತ್ತಿದ್ದಾರೆ.

1,500 ಕೋಟಿ ರೂ. ಮೊತ್ತದ ವೆಂಚರ್‌ ಕ್ಯಾಪಿಟಲ್‌ ಫಂಡ್‌ ಸ್ಥಾಪನೆಗೆ ಮುಂದಾದ ಹರ್ಷ ಮೊಯಿಲಿ
Linkup
ಹೊಸದಿಲ್ಲಿ: ಕಾಂಗ್ರೆಸ್‌ನ ಹಿರಿಯ ನಾಯಕ ಎಂ ವೀರಪ್ಪ ಮೊಯಿಲಿ ಅವರ ಪುತ್ರ ಅವರು ದೇಶ ವಿದೇಶಗಳಲ್ಲಿ ಉದ್ಯಮಿಗಳನ್ನು ಬೆಂಬಲಿಸಲು ಹೊಸ ಫಂಡ್‌ ಸ್ಥಾಪಿಸಲು ನಿರ್ಧರಿಸಿದ್ದಾರೆ. ಅಂದಾಜು 200 ದಶಲಕ್ಷ ಡಾಲರ್‌ ಮೌಲ್ಯದ (ಅಂದಾಜು 1,460 ಕೋಟಿ ರೂ.) ಕ್ಲೈಮೇಟ್‌ ಟೆಕ್‌ ವೆಂಚರ್‌ ಕ್ಯಾಪಿಟಲ್‌ ಫಂಡ್‌ ಸ್ಥಾಪಿಸಲು ಅವರು ಸಿದ್ಧತೆ ನಡೆಸುತ್ತಿದ್ದಾರೆ. ಈ ಮೂಲಕ ಗ್ರೀನ್‌ ಬಿಲ್ಡಿಂಗ್‌, ಇಂಧನ ದಾಸ್ತಾನು, ಸುಸ್ಥಿರ ಕೃಷಿ ಮತ್ತು ಪರ್ಯಾಯ ಇಂಧನ ಕ್ಷೇತ್ರಗಳಲ್ಲಿ ಉದ್ಯಮಶೀಲರಿಗೆ ಹೂಡಿಕೆಯ ನೆರವು ಒದಗಿಸುವ ನಿರೀಕ್ಷೆ ಇದೆ. ಅಮೆರಿಕ, ಯುರೋಪ್‌, ಇಸ್ರೇಲ್‌ನಲ್ಲಿ ರೋಡ್‌ ಶೋ ನಡೆಸಿ ಫಂಡ್‌ ಸಂಗ್ರಹಿಸಲಾಗುವುದು ಎಂದು ಹರ್ಷ ಮೊಯಿಲಿ ತಿಳಿಸಿದ್ದಾರೆ. ಭಾರತ ಮತ್ತು ಇಸ್ರೇಲ್‌ನಲ್ಲಿ ಮೇಲ್ಕಂಡ ಕ್ಷೇತ್ರಗಳಲ್ಲಿನ ಉದ್ಯಮಿಗಳಿಗೆ ನೆರವು ಒದಗಿಸಲಾಗುವುದು ಎಂದು ತಿಳಿಸಿದ್ದಾರೆ. ಇಂಗಾಲ ಮತ್ತು ಮಿಥೇನ್‌ ಮಾಲಿನ್ಯವನ್ನು ಕಡಿಮೆ ಮಾಡುವ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವ, ಸೇವೆ ಒದಗಿಸುವ ಉದ್ದಿಮೆಗೆ ನೆರವು ಸಿಗಲಿದೆ ಎಂದು ಹರ್ಷ ಮೊಯಿಲಿ ತಿಳಿಸಿದ್ದಾರೆ. ಈಗಾಗಲೇ 4-5 ಹೂಡಿಕೆದಾರರು ಗುರಿಯ ಶೇ.30-40ರಷ್ಟು ಹೂಡಿಕೆ ಮಾಡುವ ಬಗ್ಗೆ ಉತ್ಸುಕರಾಗಿದ್ದಾರೆ. ಹವಾಮಾನ ತಂತ್ರಜ್ಞಾನ ವಲಯದಲ್ಲಿ ಅಮೆರಿಕ, ಯುರೋಪ್‌, ಇಸ್ರೇಲ್‌ ಮಾದರಿಯಲ್ಲಿ ಭಾರತದಲ್ಲೂಅಭಿವೃದ್ಧಿ ಮತ್ತು ಸಂಶೋಧನೆ ನಡೆಯುತ್ತಿದೆ. ಹವಾಮಾನ ಬದಲಾವಣೆ ಹೇರಳ ಅವಕಾಶ ಸೃಷ್ಟಿಸಿದೆ. ಡಿಸೆಂಬರ್‌ ಒಳಗೆ ಹೂಡಿಕೆಯ ಗುರಿ ಮುಟ್ಟುವ ನಿರೀಕ್ಷೆ ಇದೆ ಎಂದು ಹರ್ಷ ಮೊಯಿಲಿ ವಿವರಿಸಿದ್ದಾರೆ. ಹರ್ಷ ಮೊಯಿಲಿ ಅವರು ಕಳೆದ 2 ದಶಕಗಳಿಂದಲೂ ಕೃಷಿ ಆಧಾರಿತ ಬಿಸಿನೆಸ್‌, ಮೂಲ ಸೌಕರ್ಯ, ಖಾಸಗಿ ಈಕ್ವಿಟಿ ಬಿಸಿನೆಸ್‌ಗಳಲ್ಲಿ ತೊಡಗಿಸಿಕೊಂಡಿದ್ದಾರೆ. 2006ರಲ್ಲಿ ಮೋಕ್ಷ ಯುಗ್‌ ಕಿರು ಹಣಕಾಸು ಸಂಸ್ಥೆಯನ್ನು ಸ್ಥಾಪಿಸಿದ್ದರು.